Advertisement

ಶಾಲಾ ಪಿಯೋನ್‌ನಿಂದ 4ರ ಬಾಲೆಯ ಮೇಲೆ ಅತ್ಯಾಚಾರ, ಬಂಧನ

07:25 PM Aug 08, 2017 | Team Udayavani |

ಮುಂಬಯಿ : ಅತ್ಯಂತ ಹೇಯ ಕೃತ್ಯವಾಗಿ, ಮುಂಬಯಿ ಹೊರವಲಯದ ಮಲಾಡ್‌ನ‌ಲ್ಲಿನ ಪ್ರಖ್ಯಾತ ಐಸಿಎಸ್‌ಇ ಬೋರ್ಡ್‌ ಶಾಲೆಯ ಪಿಯೋನ್‌ ನಾಲ್ಕು ವರ್ಷದ ಬಾಲಕಿಯ ಮೇಲೆ ಶಾಲೆಯ ಶೌಚಾಲಯದಲ್ಲಿ  ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ವರದಿಯಾಗಿದೆ.

Advertisement

ಮಹಾರಾಷ್ಟ್ರ ಪೊಲೀಸರು ಆರೋಪಿಯನ್ನು ಇಂದು ಮಂಗಳವಾರ ಬಂಧಿಸಿದ್ದಾರೆ. ಈ ಘಟನೆ ಆಗಸ್ಟ್‌ 1ರಿಂದ 4ರ ನಡುವೆ ನಡೆದಿರುವುದಾಗಿ ದಿಂಡೋಶಿ ಪೊಲೀಸ್‌ ಠಾಣೆಯ ಹಿರಿಯ ಪೊಲೀಸ್‌ ಇನ್ಸ್‌ಪೆಕ್ಟರ್‌ ರಾಜಾರಾಮ್‌ ವಾನ್‌ಮಾನೆ ತಿಳಿಸಿದ್ದಾರೆ. 

ತನ್ನ ಮಗುವಿನ ಮೇಲೆ ಶಾಲಾ ಪಿಯೋನ್‌ ಅತ್ಯಾಚಾರ ನಡೆಸಿದ್ದಾನೆ ಎಂದು ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದಳು. 

Advertisement

Udayavani is now on Telegram. Click here to join our channel and stay updated with the latest news.

Next