Advertisement

ಪೆಂಟಗನ್‌ ಪೋಸ್ಟರ್‌ ಬಂತು

01:36 PM May 24, 2021 | Team Udayavani |

ಗುರುದೇಶಪಾಂಡೆ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಪೆಂಟಗನ್‌’ ಚಿತ್ರದ ಹೊಸ ಪೋಸ್ಟರ್‌ವೊಂದು ಬಿಡುಗಡೆಯಾಗಿದೆ. ಪ್ರೀತಿಕಾ ಗುರು ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪೋಸ್ಟರ್‌ ಇದಾಗಿದ್ದು, ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ಅಂದಹಾಗೆ,ಪ್ರೀತಿಕಾ, ಗುರುದೇಶಪಾಂಡೆಯವರ ಪತ್ನಿಯಾಗಿದ್ದು, ಸಿನಿಮಾದಕಥೆ,ನಿರ್ಮಾಣದಲ್ಲಿ ತೊಡಗಿದ್ದ ಅವರು, ಇದೇ ಮೊದಲ ಬಾರಿಗೆ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಐದು ಕಥೆಗಳು, ಐದು ನಿರ್ದೇಶಕರ ಮಹಾಸಂಗಮದ ಚಿತ್ರಇದಾಗಿದ್ದು, ನವ ನಿರ್ದೇಶಕ ಕಿರಣ್‌ಕುಮಾರ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವಕಥೆಯಲ್ಲಿ ಪ್ರೀತಿಕಾನಟಿಸಿದ್ದಾರೆ.

ಹಲವು ವರ್ಷಗಳಿಂದ ಸಿನಿಮಾದ ನಂಟಿದ್ದರೂ ತಮ್ಮಆಯ್ಕೆಯ ಪಾತ್ರಕ್ಕಾಗಿ ಅವರು ಕಾಯುತ್ತಿದ್ದ, ಪ್ರೀತಿಕಾ ಅವರಿಪೆಂಟಗನ್‌ ಆ ಒಂದು ಕಥೆ ಮತ್ತು ಪಾತ್ರ ಒಪ್ಪಿತವಾಗಿದ್ದರಿಂದ ತಮ್ಮ ಹದಿನೈದು ವರ್ಷಗಳ ಕನಸನ್ನು ಈ ಚಿತ್ರದ ಮೂಲಕ ಈಡೇರಿಸಿಕೊಂಡಿದ್ದಾರೆ. 1980ರ ಮಧ್ಯಭಾಗದಲ್ಲಿ ನಡೆದ ಘಟನೆಯನ್ನು ಚಿತ್ರವಾಗಿಸಿದ್ದಾರಂತೆ ನಿರ್ದೇಶಕರು.

Advertisement

Udayavani is now on Telegram. Click here to join our channel and stay updated with the latest news.

Next