Advertisement

ಇರಾನ್‌ ಕ್ಷಿಪಣಿ ದಾಳಿ : ಅಮೆರಿಕ ಯೋಧರ ಮೆದುಳಿಗೆ ಹಾನಿ

08:24 AM Jan 30, 2020 | Team Udayavani |

ವಾಷಿಂಗ್ಟನ್‌: ಇರಾಕ್‌ನ ಬಾಗ್ಧಾದ್‌ನಲ್ಲಿರುವ ಅಮೆರಿಕದ ಸೇನೆಯ 2 ನೆಲೆಗಳನ್ನು ಗುರಿಯಾಗಿರಿಸಿಕೊಂಡು ಜ.8ರಂದು ಇರಾನ್‌ ಸೇನೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ 50 ಮಂದಿ ಅಮೆರಿಕ ಸೈನಿಕರ ಮೆದುಳಿಗೆ ಗಾಯಗಳಾಗಿವೆ. ಅಮೆರಿಕದ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಪೆಂಟಗನ್‌ ಈ ಅಂಶ ಖಚಿತಪಡಿಸಿದೆ.

Advertisement

ಕೆಲ ದಿನಗಳ ಹಿಂದೆ ಗಾಯಗೊಂಡವರ ಸಂಖ್ಯೆ 25 ಎಂದು ಅದು ಹೇಳಿತ್ತು. ಜತೆಗೆ ಯಾರೂ ಗಾಯಗೊಂಡಿರಲಿಲ್ಲ ಎಂದಿತ್ತು. ಇರಾನ್‌ ಸೇನಾ ಕಮಾಂಡರ್‌ ಖಾಸಿಮ್‌ ಸುಲೇಮಾನ್‌ ಹತ್ಯೆ ಖಂಡಿಸಿ ಈ ದಾಳಿ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next