Advertisement

ಹೊಸ ಬ್ಯಾಂಕ್‌ಗಳಲ್ಲೂ ಪಿಂಚಣಿ

09:41 AM Jan 27, 2018 | Team Udayavani |

ಹೊಸದಿಲ್ಲಿ: ಇದುವರೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾತ್ರ ಲಭ್ಯ ಇರುತ್ತಿದ್ದ ಅಟಲ್‌ ಪಿಂಚಣಿ ಯೋಜನೆ (ಎಪಿವೈ) ಇನ್ನು ಮುಂದೆ ಪೇಮೆಂಟ್‌ ಬ್ಯಾಂಕ್‌ ಮತ್ತು ಇತರ ಸಣ್ಣ ಬ್ಯಾಂಕ್‌ಗಳಲ್ಲಿಯೂ ಲಭ್ಯವಾಗಲಿದೆ. ಈ ಬಗ್ಗೆ ಕೇಂದ್ರ ಹಣಕಾಸು ಖಾತೆಯೂ ಒಪ್ಪಿಗೆ ಸೂಚಿಸಿದೆ.

Advertisement

ಸದ್ಯ ದೇಶದಲ್ಲಿ 11 ಪೇಮೆಂಟ್‌ ಬ್ಯಾಂಕ್‌ಗಳು ಮತ್ತು 10 ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ಗಳು ಕಾರ್ಯವೆಸಗುತ್ತಿವೆ. ಹೊಸ ಮಾದರಿ ಬ್ಯಾಂಕ್‌ಗಳ ಮೂಲಕ ಸಮಾಜದಲ್ಲಿ ಹೆಚ್ಚಿನ ಮಂದಿಗೆ ಪಿಂಚಣಿ ನೀಡುವಂತೆ ಮಾಡಲು ಸಾಧ್ಯವಿದೆ. ಪ್ರತಿ ಎಪಿವೈ ಖಾತೆಯಲ್ಲಿ 120 ರೂ.ಗಳಿಂದ 150 ರೂ. ವರೆಗೆ ಸಂಗ್ರಹಿಸಲು ಅವಕಾಶ ಉಂಟು. 

“ಅಮೆಜಾನ್‌ ಬ್ಯಾಂಕ್‌’:  ವಿವಿಧ ಖಾಸಗಿ ಸಂಸ್ಥೆಗಳ ಜತೆ ಇ-ಕಾಮರ್ಸ್‌ ಕ್ಷೇತ್ರದ ದೈತ್ಯ ಅಮೆಜಾನ್‌ ಕೂಡ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಕಾಲಿರಿಸಲಿದೆ. ಡಿಜಿಟಲ್‌ ಪೇಮೆಂಟ್‌ ವ್ಯಾಲೆಟ್‌ ಮೂಲಕ ಇಲ್ಲಿ ವಹಿವಾಟು ನಡೆಯುತ್ತಿದ್ದು, ಇದೀಗ ಭಾರತ ಮತ್ತು ಮೆಕ್ಸಿಕೋದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಈ ವ್ಯವಸ್ಥೆ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ಗಳಿಗೆ ಅದು ಪರ್ಯಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next