Advertisement

ಮುಂದಿನ ವರ್ಷದಿಂದ ಪಿಂಚಣಿ ಮೊತ್ತ ಏರಿಕೆ’

12:56 AM Jun 28, 2019 | Team Udayavani |
ಬೀದರ: ಮುಂದಿನ ವರ್ಷದಿಂದ ವಿವಿಧ ಪಿಂಚಣಿಗಳ ಮೊತ್ತವನ್ನು ಏರಿಕೆ ಮಾಡಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. ಉಜಳಂಬ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂದಿನ ವರ್ಷದಿಂದ ವಿಧವೆಯರಿಗೆ, ಅಂಗವಿಕಲರಿಗೆ 2,500 ರೂ.ಪಿಂಚಣಿ ಹಾಗೂ ವೃದ್ದಾಪ್ಯ ವೇತನ ತಿಂಗಳಿಗೆ 2,000 ರೂ.ನೀಡಲು ನಿರ್ಧರಿಸಲಾಗಿದೆ ಎಂದರು.

ಸರ್ಕಾರ ಬೀಳಿಸಲು ಆಗಲ್ಲ: ಸಾವಿರ ಯಡಿ ಯೂರಪ್ಪ ಬಂದರೂ ಮೈತ್ರಿ ಸರ್ಕಾರ ಬೀಳಿಸಲು ಸಾಧ್ಯವಿಲ್ಲ ಎಂದು ಶಾಸಕ ಬಿ.ನಾರಾಯಣರಾವ್‌ ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನವರು ಸರ್ಕಾರ ಬೀಳಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ, ಸರ್ಕಾರ ಬೀಳಿಸುವುದು ಸುಲಭದ ಮಾತಲ್ಲ. ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತದೆ. ನಾರಾಯಣರಾವ್‌ ಎಷ್ಟು ದಿನ ಶಾಸಕರಾಗಿ ಇರುತ್ತಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಸರ್ಕಾರ ಸುಭದ್ರವಾಗಿ ಐದು ವರ್ಷಗಳ ಕಾಲ ಆಡಳಿತ ನಡೆಸಲಿದೆ. ನಾನು ಕೂಡ ಐದು ವರ್ಷ ಶಾಸಕನಾಗಿ ಇರುತ್ತೇನೆ ಎಂದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next