Advertisement

ಸಂಧ್ಯಾ ಕಾಲದಲ್ಲಿ ನೆಮ್ಮದಿಯ ಜೀವನ: ನಿಶ್ಚಿತ ಪಿಂಚಣಿ ಯೋಜನೆಗಳು

11:43 AM Feb 04, 2022 | Team Udayavani |

ಉಡುಪಿ: ಅಸಂಘಟಿತ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರು ಮತ್ತು ವ್ಯಾಪಾರಿಗಳು, ಲಘು ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ತಮ್ಮ ಜೀವನದ ಸಂಧ್ಯಾ ಕಾಲದಲ್ಲಿ (60 ವರ್ಷದ ಬಳಿಕ) ನಿಶ್ಚಿತ ಪಿಂಚಣಿ ಪಡೆದು ನೆಮ್ಮದಿಯ ಜೀವನ ನಡೆಸಲು ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್‌ ಯೋಜನೆ (ಪಿಎಂಎಸ್‌ವೈಎಂ) ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌-ಟ್ರೇಡರ್ಸ್)ಗಳ ಮೂಲಕ ಅನುಕೂಲ ಕಲ್ಪಿಸಲಾಗಿದೆ.

Advertisement

ಮಾನ್‌ಧನ್‌ ಪಿಂಚಣಿ ಯೋಜನೆ :

ಗೃಹ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು ಇತ್ಯಾದಿ.

ಅರ್ಹತೆಗಳೇನು?:

ವಯೋಮಿತಿ: 18ರಿಂದ 40 ವರ್ಷ

Advertisement

ಆದಾಯ: ಮಾಸಿಕ ಗರಿಷ್ಠ 15,000 ರೂ. ಇಎಸ್‌ಐ, ಇಪಿಎಫ್, ಎನ್‌ಪಿಎಸ್‌ ಯೋಜನೆಯ ಫ‌ಲಾನುಭವಿಗಳಾಗಿರಬಾರದು

ರಾಷ್ಟ್ರೀಯ ಪಿಂಚಣಿ ಯೋಜನೆ :

ವ್ಯಾಪಾರಿಗಳು, ಲಘು ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ 60 ವರ್ಷ ಪೂರ್ಣಗೊಂಡ ಅನಂತರ ಮಾಸಿಕ 3,000 ರೂ. ಪಿಂಚಣಿ ಸೌಲಭ್ಯ ಒದಗಿಸುವ ಮೂಲಕ ಆರ್ಥಿಕ ಭದ್ರತೆ ನೀಡಲು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌-ಟ್ರೇಡರ್) ಎಂಬ ವಂತಿಗೆ ಆಧಾರಿತ ಯೋಜನೆ ಜಾರಿಗೆ ತರಲಾಗಿದೆ.

ವಯೋಮಿತಿ: 18ರಿಂದ 40 ವರ್ಷ

ಅರ್ಹತೆ: ವಾರ್ಷಿಕ ವಹಿವಾಟು 1.5 ಕೋಟಿ ರೂ. ಒಳಗಿರುವ, ಆದಾಯ ತೆರಿಗೆ ಪಾವತಿಸದ, ಇಎಸ್‌ಐ, ಇಪಿಎಫ್, ಎನ್‌ಪಿಎಸ್‌, ಪಿಎಂಎಸ್‌ವೈಎಂ, ಪಿಎಂಕೆಎಂವೈ ಯೋಜನೆಯ ಸೌಲಭ್ಯ ಪಡೆಯದೇ ಇರುವವರು ಇದರ ಲಾಭ ಪಡೆಯಬಹುದು.

ಫ‌ಲಾನುಭವಿಗಳು: ಚಿಲ್ಲರೆ ವ್ಯಾಪಾರಿಗಳು, ಅಕ್ಕಿ ಗಿರಿಣಿ, ಅಂಗಡಿ, ಎಣ್ಣೆ ಗಿರಣಿ, ವರ್ಕ್‌ಶಾಪ್‌ ಮಾಲಕರು, ಕಮಿಷನ್‌ ಏಜೆಂಟ್ಸ್‌, ರಿಯಲ್‌ ಎಸ್ಟೇಟ್‌ನ ಬ್ರೋಕರ್‌, ಸಣ್ಣ ಹೊಟೇಲ್‌ ಹಾಗೂ ರೆಸ್ಟೋರೆಂಟ್‌ನ ಮಾಲಕರು, ಸ್ವಯಂ ಉದ್ಯೋಗಿಗಳು ಫ‌ಲಾನುಭವಿಗಳಾಗುತ್ತಾರೆ.

ನೋಂದಣಿ ಹೇಗೆ? :

ಈ ಎರಡೂ ಪಿಂಚಣಿ ಯೋಜನೆಗಳಿಗೆ ಕಾಮನ್‌ ಸರ್ವಿಸ್‌ ಸೆಂಟರ್‌ (ಸಾಮಾನ್ಯ ಸೇವಾ ಕೇಂದ್ರ)ಗಳಲ್ಲಿ ಮಾಸಿಕ ವಂತಿಗೆ ಪಾವತಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು. ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸಿ, ಅನಂತರ ಬ್ಯಾಂಕ್‌ ಖಾತೆಗಳಿಂದ ಆಟೋ ಡೆಬಿಟ್‌ ಮಾಡಿಕೊಳ್ಳಲಾಗುತ್ತದೆ. ನೋಂದಣಿಗೆ ಆಧಾರ್‌ ಕಾರ್ಡ್‌, ಆಧಾರ್‌ ಜೋಡಣೆಯಾಗಿರುವ ಮೊಬೈಲ್‌ ಸಂಖ್ಯೆ, ಬ್ಯಾಂಕ್‌ ಖಾತೆಯ ವಿವರ ಮತ್ತು ನಾಮ ನಿರ್ದೇಶಿತರ ವಿವರ ಅಗತ್ಯವಾಗಿ ಸಲ್ಲಿಸಬೇಕು.

ಸೌಲಭ್ಯಗಳು :

ಮಾಸಿಕ ವಂತಿಗೆಯನ್ನು ಫ‌ಲಾನುಭವಿಯ ವಯಸ್ಸಿನ ಆಧಾರದ ಮೇಲೆ ನಿಗದಿಪಡಿಸಲಾಗಿದೆ. ಕನಿಷ್ಠ 55 ರೂ. ಹಾಗೂ ಗರಿಷ್ಠ 200 ರೂ. ಆಗಿರುತ್ತದೆ. ಅದಕ್ಕೆ ಸಮನಾದ ವಂತಿಗೆಯನ್ನು ಕೇಂದ್ರ ಸರಕಾರ ಅವರವರ ಪಿಂಚಣಿ ಖಾತೆಗೆ ಪಾವತಿಸುತ್ತದೆ. 60 ವರ್ಷ ಪೂರ್ಣಗೊಂಡ ಬಳಿಕ ಫ‌ಲಾನುಭವಿ ತಿಂಗಳಿಗೆ ನಿಶ್ಚಿತ 3,000 ರೂ. ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

ಫ‌ಲಾನುಭವಿ ನಿರಂತರ ವಂತಿಗೆ ಪಾವತಿಸಿ 60 ವರ್ಷದ ಒಳಗೆ ಮೃತಪಟ್ಟಲ್ಲಿ ಅಥವಾ ಶಾಶ್ವತ ಸಂಪೂರ್ಣ ದುರ್ಬಲತೆ ಹೊಂದಿ, ವಂತಿಗೆ ಪಾವತಿ ಸಾಧ್ಯವಾಗದಿದ್ದಲ್ಲಿ ಫ‌ಲಾನುಭವಿಯ ಸಂಗಾತಿಯು ಆನಂತರವೂ ಯೋಜನೆಗೆ ಸೇರಬಹುದಾಗಿದೆ ಅಥವಾ ಅವರ ವಂತಿಕೆಯನ್ನು ನಿಯಮಾನುಸಾರ ಬಡ್ಡಿಯೊಂದಿಗೆ ಪಡೆಯ ಬಹುದು.

ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್‌ ಯೋಜನೆಯಡಿ 24,700 ಹಾಗೂ ಎನ್‌ಪಿಎಸ್‌-ಟ್ರೇಡರ್ ಯೋಜನೆಯಡಿ 5,300 ಮಂದಿಯನ್ನು ನೋಂದಾಯಿಸುವ ಗುರಿ ನಿಗದಿಪಡಿಸಲಾಗಿದೆ. ಅರ್ಹ ಅಸಂಘಟಿತ ವಲಯದ ಕಾರ್ಮಿಕರು ಮತ್ತು ಸ್ವಯಂ ಉದ್ಯೋಗಿಗಳು ಹಾಗೂ ವ್ಯಾಪಾರಿಗಳು ಈ ಪಿಂಚಣಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು.  – ಕುಮಾರ್‌, ಜಿಲ್ಲಾ ಕಾರ್ಮಿಕ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next