Advertisement

ಪಿಂಚಣಿ ಆಂದೋಲನ: ತಿಂಗಳಲ್ಲಿ 11,436 ಮಂದಿಗೆ ಸೌಲಭ್ಯ

04:16 PM Sep 09, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಕಂದಾಯ ಇಲಾಖೆಯು ಜು.26ರಿಂದ ತಿಂಗಳ ಕಾಲ ನಡೆಸಿದ ಪಿಂಚಣಿ ಆಂದೋಲನದಲ್ಲಿ ಹೊಸದಾಗಿ 11,436
ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಿದ್ದು,ಈ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಜಿಲ್ಲಾಧಿಕಾರಿ ಆರ್‌. ಲತಾ ಧನ್ಯವಾದ ಹೇಳಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾ ಉಸ್ತುವಾರ ಸಚಿವರ ಸೂಚನೆಯಂತೆ, ಕೋವಿಡ್‌ ಸಂದಿಗ್ಧ ಸಮಯದಲ್ಲಿ ಜನರನ್ನು
ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು, ಹೊಸದಾಗಿ ಸೃಜನೆ ಆಗುವ ಅರ್ಹರಿಗೆ ಪಿಂಚಣಿ ಸೌಲಭ್ಯ ಒದಗಿಸಲು, ಜಿಲ್ಲಾಡಳಿತ ಕೋವಿಡ್‌
ಸಂಕಷ್ಟದಲ್ಲಿ ಜನರಿಗೆ ಸ್ವಲ್ಪ ಮಟ್ಟಿಗೆ ಸಹಾಯ ಆಗಲಿ ಎಂದು ಜು.26ರಿಂದ ಜಿಲ್ಲಾಡಳಿತ ಪಿಂಚಣಿ ಆಂದೋಲನ ನಡೆಸಿತು ಎಂದು ತಿಳಿಸಿದ್ದಾರೆ.

ಮನೆ ಬಾಗಿಲಿಗೆ ಕಂದಾಯ ಇಲಾಖೆ: ಪಿಂಚಣಿ ಆಂದೋಲನದಡಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮ, ವಾರ್ಡ
ವಾರು ಮನೆಗೆ ಭೇಟಿ ನೀಡಿ, ಅರ್ಹರಿದ್ದರೂ ಸೌಲಭ್ಯ ವಂಚಿತರಿಂದ 13,546 ಅರ್ಜಿ ಸ್ವೀಕರಿಸಿದ್ದರು. ಸ್ವೀಕೃತವಾದವುಗಳಲ್ಲಿ 11,436
ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಉಳಿದವರಿಗೂ ಆದೇಶ ಪತ್ರ: ಪಿಂಚಣಿ ಮಂಜೂರಾದವರ ಪೈಕಿ ಕೆಲವರಿಗೆ ಕಳೆದ ವಾರ ಶಿಡ್ಲಘಟ್ಟ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಾಂಕೇತಿಕವಾಗಿ ಆದೇಶ ಪತ್ರ ವಿತರಿಸಿದ್ದರು. ಒಟ್ಟಾರೆ ಆಂದೋಲನ ಆರಂಭವಾದ ಮೇಲೆ ಶಿಡ್ಲಘಟ್ಟ ತಾಲೂಕಿನಲ್ಲಿ 300ಕ್ಕೂ ಹೆಚ್ಚು ಫಲನುಭವಿಗಳಿಗೆ ಪಿಂಚಣಿ ಆದೇಶ ಪತ್ರ ವಿತರಿಸಲಾಗಿದೆ. ಉಳಿದ ಪತ್ರಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಎಲ್ಲಾ ತಾಲೂಕುಗಳಲ್ಲಿಯೂ ವಿತರಿಸಲಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಗೋವಾದಲ್ಲಿ ಗಣೇಶ ಚತುರ್ಥಿಗೆ ಪುರೋಹಿತರ ಕೊರತೆ! ಕಾರಣ…

Advertisement

13 ಸಾವಿರಕ್ಕೂ ಹೆಚ್ಚು ಅರ್ಜಿ ಸ್ವೀಕಾರ:
ಸ್ವೀಕೃತವಾದ 13,546 ಅರ್ಜಿಗಳ ಪೈಕಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 1597, ಗೌರಿಬಿದನೂರು3950, ಶಿಡ್ಲಘಟ್ಟ 2818, ಬಾಗೇಪಲ್ಲಿ 1969,
ಗುಡಿಬಂಡೆ 701 ಮತ್ತು ಚಿಂತಾಮಣಿಯಲ್ಲಿ 2511 ಅರ್ಜಿ ಸ್ವೀಕೃತವಾಗಿವೆ. ಈ ಅರ್ಜಿಗಳ ಪೈಕಿ ವೃದ್ಧಾಪ್ಯ ವೇತನದಡಿ 5,439, ಸಂಧ್ಯಾ
ಸುರಕ್ಷಾ3,954, ನಿರ್ಗತಿಕ, ವಿಧವಾ ವೇತನದಡಿ 1,198, ಅಂಗವಿಕಲ ವೇತನದಡಿ 584, ಮನ ಸ್ವಿನಿ 252, ಮೈತ್ರಿ 9 ಸೇರಿ 11,436 ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗಿದೆ. ಆಂದೋಲನದಲ್ಲಿ ಅರ್ಜಿ ಸ್ವೀಕಾರದ ಜೊತೆಗೆ ಬೆರಳಚ್ಚು ಚಹರೆ ಸಿಗದೆ ಸ್ಥಗಿತಗೊಂಡಿ
ದ್ದವರ ವಿವರವನ್ನು ಪರಿಶೀಲಿಸಿ ಪಿಂಚಣಿ ಮರುಚಾಲ್ತಿಗೊಳಿಸಲಾಯಿತು ಹಾಗೂ ಪಿಂಚಣಿಯೊಂದಿಗೆ ಆಧಾರ್‌ ಜೋಡಣಾ ಕಾರ್ಯ
ಮಾಡಲಾಯಿತು ಎಂದು ವಿವರಿಸಿದರು.

ಜಿಲ್ಲೆಯ ಮಟ್ಟಿಗೆ ದಾಖಲೆಯ ಸಾಧನೆ:
ಸಾಮಾಜಿಕ ಭದ್ರತಾ ಯೋಜನೆಯಡಿ ಆರಂಭದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 2,13,216 ಫಲಾನುಭವಿಗಳಿಗೆ ವಿವಿಧ ರೀತಿಯ ಪಿಂಚಣಿ ಮಂಜೂರಾತಿ ಮಾಡಲಾಗಿದೆ. ಕಳೆದ ಜುಲೈನಲ್ಲಿ ಕೈಗೊಂಡ ಪಿಂಚಣಿ ಆಂದೋಲನದಲ್ಲಿ ಒಟ್ಟು 11,436 ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲು ಒಂದೇ ತಿಂಗಳಲ್ಲಿ ಕ್ರಮ ಕೈಗೊಂಡಿರುವುದು ಉತ್ತಮ ಸಾಧನೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಸೃಜನೆ ಆಗುವವರನ್ನು ಗುರ್ತಿಸಿ ಪಿಂಚಣಿ ನೀಡಿ: ಸಾಮಾಜಿಕ ಭದ್ರತಾ ಯೋಜನೆಯಡಿಯ ಪಿಂಚಣಿ ಯೋಜನೆಗಳು ನಿರಂತರವಾಗಿ ಚಾಲ್ತಿಯಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಈ ಯೋಜನೆಯಡಿ ಸೃಜನೆಯಾಗುವ ಅರ್ಹರಿಗೂ ಕಾಲ ವಿಳಂಬವಿಲ್ಲದೆ ಪಿಂಚಣಿ ಮಂಜೂರಾತಿಗೆ ಅಗತ್ಯ ಕ್ರಮ ವಹಿಸ ಬೇಕು ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿಯೂ ಯಾವೊಬ್ಬ ಅರ್ಹರು ಪಿಂಚಣಿಯಿಂದ ವಂಚಿತ ರಾಗಿದ್ದೇವೆಂದು ಸರ್ಕಾರಿ ಕಚೇರಿಗೆ ಬರುವ ಮೊದಲೇ ಅವರನ್ನು ಗ್ರಾಮ, ವಾರ್ಡ್‌ ಮಟ್ಟದಲ್ಲೇ ಗುರುತಿಸಿ ಪಿಂಚಣಿ ಮಂಜೂರಾತಿಗೆ ಅಗತ್ಯ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲಾ ತಹಶೀಲ್ದಾರ್‌ಗಳು ನಿಗಾವಹಿಸಬೇಕೆಂದು ಸೂಚನೆ ನೀಡಿರುವುದಾಗಿ ಮಾಹಿತಿ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next