Advertisement
ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ರವಿವಾರ ಹಮ್ಮಿಕೊಂಡಿದ್ದ ಹು-ಧಾ ಬಿಜೆಪಿ ಕೇಂದ್ರವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 46ರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಪಾಲಿಕೆಯ ನಿವೃತ್ತ ನೌಕರರಿಗೆ ರಾಜ್ಯ ಸರಕಾರ ಪಿಂಚಣಿ ಹಣ ನೀಡಬೇಕು. ಆದರೆ, ಕಳೆದ 3 ವರ್ಷಗಳಿಂದ ಕೊಡುತ್ತಿಲ್ಲ. ಪಾಲಿಕೆಯು ಎಸ್‌ಎಫ್‌ಸಿ ಅನುದಾನದಲ್ಲಿಯೇ ಹಣ ನೀಡುತ್ತಿದೆ.
Related Articles
Advertisement
ಇನ್ನು 15 ದಿನದಲ್ಲಿ ದೇಸಾಯಿ ಕ್ರಾಸ್‌ನಿಂದ ಬೈಲಪ್ಪನವರ ನಗರ, ಕಿಮ್ಸ್ ಹಿಂಭಾಗ, ಲೋಕಪ್ಪನ ಹಕ್ಕಲ ಮಾರ್ಗವಾಗಿ ವಿದ್ಯಾನಗರ ವರೆಗೆ 50 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆಗೆ ಚಾಲನೆ ನೀಡಲಾಗುವುದು. ನಿಲಿಜಿನ್ ರಸ್ತೆ ಸೇರಿದಂತೆ ಕಾಟನ್ ಮಾರ್ಕೆಟ್‌ನ ಎಲ್ಲ ರಸ್ತೆಗಳು ಸಿಸಿ ರಸ್ತೆಗಳಾಗಲಿವೆ.
ವಿದ್ಯಾನಗರದ ಕಾಡಸಿದ್ದೇಶ್ವರ ಕಾಲೇಜು ಎದುರಿನ ರಸ್ತೆಯಿಂದ ತೋಳನಕೆರೆ ವರೆಗಿನ 2 ಕಿಮೀ ರಸ್ತೆಯನ್ನು ಟೆಂಡರ್ ಸುರ್ ಮಾದರಿ ರಸ್ತೆ ಮಾಡಲಾಗುವುದು. ಇವಕ್ಕೆ ಒಂದು ತಿಂಗಳೊಳಗೆ ಚಾಲನೆ ನೀಡಲಾಗುವುದು. ಮುಂದಿನ ಹಂತದಲ್ಲಿ ತೋಳನಕೆರೆಯಿಂದ ಗೋಕುಲ ರಸ್ತೆಯ ರಾಧಾಕೃಷ್ಣ ನಗರ ವರೆಗೆ ಮಾದರಿ ರಸ್ತೆ ಮಾಡಲಾಗುವುದು.
ಬಿಜೆಪಿಯವರ ಪ್ರಯತ್ನದಿಂದಲೇ ಹು-ಧಾಗೆ ಸ್ಮಾರ್ಟ್ ಸಿಟಿ ಭಾಗ್ಯ ಲಭಿಸಿದೆ. ನಗರದಲ್ಲಿ ನಿರ್ಮಾಣವಾದ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಅವರಿಂದ ಚಾಲನೆ ನೀಡಲು ಯೋಚಿಸಲಾಗಿದೆ. ವಾರ್ಡ್ ನಂ. 46 ಬಿಜೆಪಿಯ ಶಕ್ತಿ ಕೇಂದ್ರವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಮಾತನಾಡಿ, ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ ಅವರು ಅಭಿವೃದ್ಧಿಯ ಹರಿಕಾರ ಆಗಿದ್ದಾರೆ ಎಂದರು. ಮಹಾಪೌರ ಡಿ.ಕೆ. ಚಹಾಣ, ಶಂಕರಣ್ಣ ಮುನವಳ್ಳಿ, ಲಿಂಗರಾಜ ಪಾಟೀಲ, ವೀರಭದ್ರಪ್ಪ ಹಾಲಹರವಿ, ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವಕಾರ, ಮೀನಾಕ್ಷಿ ಒಂಟಮೂರಿ, ವಿಜಯಾನಂದ ಹೊಸಕೋಟಿ, ಲಕ್ಷ್ಮೀ ಉಪ್ಪಾರ, ವಸಂತ ನಾಡಜೋಶಿ, ರಾಜು ಕಾಳೆ, ಶಿಲ್ಪಾ ಶೆಟ್ಟರ ಇತರರಿದ್ದರು.
ಪಾಲಿಕೆ ಸದಸ್ಯೆ ಲೀನಾ ಮಿಸ್ಕಿನ ಅಧ್ಯಕ್ಷತೆ ವಹಿಸಿದ್ದರು. ತಿಪ್ಪಣ್ಣ ಮಜ್ಜಗಿ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣಾ ಗಂಡಗಾಳೇಕರ ನಿರೂಪಿಸಿದರು. ಸಮಾವೇಶಕ್ಕೂ ಮೊದಲು ಜಗದೀಶ ಶೆಟ್ಟರ ಅವರು ದೇಶಪಾಂಡೆ ನಗರದ ಬಾಳಿಗಾ ವೃತ್ತದಲ್ಲಿ ವಾರ್ಡ್ ನಂ. 46ರ 24/7 ನೀರು ಸರಬರಾಜು ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.