ಬೆಂಗಳೂರು: ನಿವೃತ್ತ ಪತ್ರಕರ್ತರಿಗೆ ಪಿಂಚಣಿ ಸೌಲಭ್ಯ ಒದಗಿಸುವಲ್ಲಿ ಎದುರಾಗಿರುವ ಅಡೆ-ತಡೆ ನಿವಾರಿಸಿ ಸರಳೀಕೃತ ವ್ಯವಸ್ಥೆ ಜಾರಿಗೊಳಿಸಲಾಗು ವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರೆಸ್‌ಕ್ಲಬ್ ಆವರಣದಲ್ಲಿ ಬುಧವಾರ ಆಯೋಜಿಸಿದ ಪ್ರಸ್‌ಕ್ಲಬ್ ಐಕಾನ್-2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಲ ನಿಯಮ ಗಳಿಂದ ಹಲವರಿಗೆ ಪಿಂಚಣಿ ಸಿಗುತ್ತಿಲ್ಲ. ಈ ನಿಯಮಗಳನ್ನು ಸರಳೀಕರಣಗೊಳಿಸಿ ಪ್ರತ್ಯೇಕ ಕಮಿಟಿ ರಚಿಸಿ ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುತ್ತೇನೆ. ಇದರ ಜತೆಗೆ ಪಿಂಚಣಿ ಹೆಚ್ಚಿಸುವಂತಹ ಕೆಲಸವನ್ನೂ ಮಾಡುವುದಾಗಿ ಭರವಸೆ ನೀಡಿದರು.
ಪತ್ರಕರ್ತರು ಹಲವಾರು ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಸಾವಿರಾರು ಕೋಟಿ ರೂ. ಅವ್ಯವಹಾರಗಳ ಬಗ್ಗೆ ಬರೆಯುತ್ತಾರೆ. ಪ್ರಮುಖ ವಿಚಾರಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಾರೆ. ಆದರೆ, ಅವರ ಕುಟುಂಬ ಹಾಗೂ ಬದುಕು ಮಾತ್ರ ನಾಟಕ ಗಳಲ್ಲಿ ಶ್ರೀಮಂತನ ಪಾತ್ರ ಮಾಡಿ ಬಣ್ಣ ತೆಗೆದು ಮನೆಗೆ ಹೋಗುವಂತೆ ಇರುತ್ತದೆ. ಪತ್ರಕರ್ತ ರದ್ದು ಸವಾಲಿನ ಜೀವನವಾಗಿದ್ದು, ದೇಶ, ನಾಡಿಗಾಗಿ ಸೇವೆ ಸಲ್ಲಿಸುತ್ತಾರೆ. ಹೀಗಾಗಿ ಪತ್ರಕರ್ತರ ವೃತ್ತಿಗೆ ಬಹಳಷ್ಟು ಗೌರವ ಕೊಡುತ್ತೇವೆ ಎಂದು ಹೇಳಿದರು.
ಇತ್ತೀಚೆಗೆ ಡಿಜಿಟಲ್ ತಂತ್ರಜ್ಞಾನ ಬಹಳಷ್ಟು ಬದಲಾವಣೆ ತಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಂದ ಹಿಡಿದು ಆಡಳಿತದಲ್ಲಿ ಉನ್ನತ ಮಟ್ಟದಲ್ಲಿರುವವರೆಗೂ ಇದರ ಅಗತ್ಯತೆಗಳಿವೆ. ಈ ಸಂದರ್ಭದಲ್ಲಿ ಮೂಲಭೂತ ವಾಗಿರುವ ವಿಚಾರ ಗಳನ್ನು ಮರೆಯಬಾರದು. ತತ್ವಜ್ಞಾನ ದಿಂದ ತಂತ್ರಾಶ ಜ್ಞಾನಕ್ಕೆ ಬದಲಾವಣೆಯಾಗಿದೆ. ಆದರೂ ತತ್ವಜ್ಞಾನದ ಮಹತ್ವ ಮರೆಯಬಾರದು ಎಂದರು.
ಅಬಕಾರಿ ಸಚಿವ ಕೆ.ಗೋಪಾಲಯ್ಯ, ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ನಟಿ ರಮ್ಯಾ, ಪ್ರೆಸ್‌ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮತ್ತಿತರರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ 19 ಮಂದಿಗೆ ಪ್ರೆಸ್‌ಕ್ಲಬ್ ಐಕಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.