ರಾಯಚೂರು: ತೀರ ಕಡಿಮೆ ವೇತನ ಪಡೆದು ನೂರಾರು ಮಕ್ಕಳಿಗೆ ಬಿಸಿಯೂಟ ಮಾಡಿ ಹಾಕುವ ಅಡುಗೆ ಸಿಬ್ಬಂದಿಗೆ ಕೇಂದ್ರ ಸರ್ಕಾರ ಪಿಂಚಣಿ ನೀಡಲುಮುಂದಾಗಿದ್ದು, ಅದಕ್ಕಾಗಿ ನೌಕರರಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ.
ಕೇಂದ್ರ-ರಾಜ್ಯ ಸರ್ಕಾರ ಸಹಯೋಗದಲ್ಲಿ ಬಿಸಿಯೂಟ ಯೋಜನೆ ನಡೆಸುತ್ತಿದ್ದು, ಅಡುಗೆದಾರರು ಹಾಗೂ ಸಹಾಯಕರಿಗೆ ತಿಂಗಳಿಗೆ 3-4 ಸಾವಿರ ರೂ. ವೇತನ ನೀಡುತ್ತಿದೆ. ರಾಜ್ಯದಲ್ಲಿ 1,17,799 ಜನ ಅಡುಗೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ವೇತನದಿಂದ ಜೀವನ ನಡೆಸುವುದೇ ಕಷ್ಟವಾಗಿದ್ದು,ಕನಿಷ್ಟ ವೇತನ ನೀಡಬೇಕು. ಸೇವೆಕಾಯಂಗೊಳಿಸಬೇಕೆಂಬ ಬೇಡಿಕೆ ಕೂಡ ಇದೆ. ಅಲ್ಲದೇ, ಅಂಥ ನೌಕರರಲ್ಲಿ ಸಾಕಷ್ಟುನೌಕರರು ನಿವೃತ್ತಿ ಅಂಚಿನಲ್ಲಿದ್ದು, ಅಂಥ ನೌಕರರಿಗೆ ಪ್ರಧಾನಮಂತ್ರಿ ಶ್ರಮದಾನ ಧನ್-ಮಾನ್ ಯೋಜನೆಯಡಿ ಪಿಂಚಣಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಈಗಾಗಲೇ ಎಲ್ಲ ನೌಕರರಮಾಹಿತಿ ಸಂಗ್ರಹಿಸುವಂತೆ ನಿರ್ದೇಶನ ನೀಡಿದೆ.
ಈ ಕುರಿತು ಮಧ್ಯಾಹ್ನ ಉಪಾಹಾರ ಯೋಜನೆ ಜಂಟಿ ನಿರ್ದೇಶಕರು ಆಯಾ ಜಿಲ್ಲೆಗಳ ಅಕ್ಷರ ದಾಸೋಹ ವಿಭಾಗದಶಿಕ್ಷಣಾಧಿ ಕಾರಿಗಳಿಗೆ ಮಾಹಿತಿ ಸಂಗ್ರಹಕ್ಕೆ ನಿರ್ದೇಶನ ನೀಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನುಸಾರವಾಗಿ ಅಡುಗೆ ಕೆಲಸಗಾರರಿದ್ದಾರೆ. ಕೆಲವೆಡೆ ಇಬ್ಬರೇ ಇದ್ದರೆ ಕೆಲವೆಡೆ ಐದಾರು ಜನ ಕೆಲಸ ಮಾಡುತ್ತಿದ್ದಾರೆ. ಆದರೆ, ಮುಖ್ಯಅಡುಗೆ ಕೆಲಸದವರಿಗೆ 4 ಸಾವಿರ ರೂ. ಹಾಗೂ ಸಹಾಯಕರಿಗೆ 3 ಸಾವಿರ ರೂ. ನೀಡಲಾಗುತ್ತಿದೆ. ಈ ಕುರಿತು ಶೀಘ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಭೆ ನಡೆಸುವ ಸಾಧ್ಯತೆ ಇದ್ದು, ಶೀಘ್ರದಲ್ಲೇ ಮಾಹಿತಿ ನೀಡಲು ಕೋರಲಾಗಿದೆ.
ಎಲ್‌ಐಸಿ ಆಧಾರಿತ ನೀಡಲಿ : ಸರ್ಕಾರ ಇಂಥ ಯೋಜನೆ ಜಾರಿಗೆ ಮಾಡುವ ಸೂಚನೆ ಅರಿತ ಬಿಸಿಯೂಟ ನೌಕರರಸಂಘ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಎಲ್‌ಐಸಿ ಆಧಾರಿತ ಪಿಂಚಣಿ ನೀಡಿದರೆ ಅನುಕೂಲವಾಗುತ್ತದೆ ಎಂಬ ಬೇಡಿಕೆ ಮುಂದಿಡ ಲಾಗಿದೆ. ಸರ್ಕಾರ ಈಗ ನೀಡಲುಮುಂದಾಗಿರುವ ಪಿಂಚಣಿ ಸೌಲಭ್ಯದಲ್ಲಿ ಕೆಲವೊಂದುನ್ಯೂನತೆಗಳಿದ್ದು, ಅವುಗಳನ್ನು ಮಾರ್ಪಡಿಸಬೇಕು. ಎಲ್‌ಐಸಿ ಆಧಾರಿತ ಪಿಂಚಣಿ ನೀಡಿದರೆಭದ್ರತೆ ಸಿಗಲಿದೆ ಎಂಬ ಬೇಡಿಕೆ ಮುಂದಿಡಲಾಗಿದೆ.
ಮಾಹಿತಿಯೇ ಇಲ್ಲ..! : ಜಿಲ್ಲೆಗೆಳ ಅಕ್ಷರ ದಾಸೋಹ ಯೋಜನೆ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಕೇಳಿದರೂ ಯಾವ ಜಿಲ್ಲೆಯಿಂದಲೂ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಜಂಟಿ ನಿರ್ದೇಶಕರು ಬೇಸರ ವ್ಯಕ್ತಪಡಿಸಿದ್ದಾರೆ. ಕೂಡಲೇ ಜಿಲ್ಲೆಯಲ್ಲಿ ಕೆಲಸ ಮಾಡುವ ಅಕ್ಷರ ದಾಸೋಹ ಸಿಬ್ಬಂದಿ ವಿವರವನ್ನು ಆನ್‌ಲೈನ್‌ನಲ್ಲಿ ನೋಂದಾಯಿಸುವಂತೆ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಜಿಪಂ ಸಿಇಒ ಅವರಿಗಾಗಲಿ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗಳಾಗಲಿ ಮಾಹಿತಿಯೇ ಇಲ್ಲ. ಆದರೆ, ಕೆಲ ಶಾಲೆಗಳ ಮುಖ್ಯ ಶಿಕ್ಷಕರು ಜಂಟಿ ನಿರ್ದೇಶಕರ ಆದೇಶ ಪ್ರತಿ ಆಧರಿಸಿಯೇ ತಮ್ಮ ಶಾಲೆಗಳಲ್ಲಿ ಕೆಲಸ ಮಾಡುವ ನೌಕರರ ಮಾಹಿತಿಯನ್ನು ಆನ್‌ಲೈನ್ ನಲ್ಲಿ ನೋಂದಾಯಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಪಿಂಚಣಿ ನೀಡಲು ಮುಂದಾಗಿರುವ ವಿಚಾರ ಸ್ವಾಗತಾರ್ಹ. ಆದರೆ, ವಯಸ್ಸಿನ ಮಿತಿ ಆಧರಿಸಿ ಸೌಲಭ್ಯ ನೀಡುವುದಕ್ಕೆ ನಮ್ಮ ಆಕ್ಷೇಪವಿದೆ. ಅಲ್ಲದೇ ಎಲ್‌ಐಸಿ ಆಧಾರಿತ ಪಿಂಚಣಿ ನೀಡಿದರೆ ಮಕ್ಕಳ ಶಿಕ್ಷಣ, ಆರೋಗ್ಯ ವಿಮೆ ಸೇರಿದಂತೆ ಇತರ ಸೌಲಭ್ಯಗಳು ಕೂಡ ಸಿಗಲಿದೆ.
-ಶರಣಬಸವ, ಗೌರವಾಧ್ಯಕ್ಷ, ಬಿಸಿಯೂಟ ನೌಕರರ ಸಂಘ, ರಾಯಚೂರು
ಬಿಸಿಯೂಟ ಅಡುಗೆ ಸಿಬ್ಬಂದಿಗೆ ಪಿಂಚಣಿ ಸೌಲಭ್ಯದ ಕುರಿತು ವಿವರ ಕೇಳಿದ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. –
ಲಕ್ಷ್ಮೀಕಾಂತರೆಡ್ಡಿ, ಜಿಪಂ ಸಿಇಒ
-ಸಿದ್ಧಯ್ಯಸ್ವಾಮಿ ಕುಕುನೂರು