Advertisement
ತೂರಿಕೊಂಡ ಅಥವಾ ಬಂಧಿತ ಕೆಳ ದವಡೆಯ ಮೂರನೆಯ ಅರೆಯುವ ಹಲ್ಲು (ಲೋವರ್ ಥರ್ಡ್ ಮೋಲಾರ್)ಗಳಿಂದ ಉಂಟಾಗಬಲ್ಲ ಕೆಲವು ಸಮಸ್ಯೆಗಳೆಂದರೆ:
2. ತೂರಿಕೊಂಡ ಅಥವಾ ಬಂಧಿತ ಹಲ್ಲು ಸಮಯ ಕಳೆದಂತೆ ಜತೆಗಿರುವ ಇತರ ಹಲ್ಲುಗಳು ಹುಳುಕಾಗಲು ಕಾರಣವಾಗಬಹುದು. ಇದರಿಂದ ಇತರ ಹಲ್ಲುಗಳಿಗೂ ಹಾನಿಯಾಗುತ್ತದೆ.
3. ತೂರಿಕೊಂಡ ಅಥವಾ ಬಂಧಿತ ಹಲ್ಲು ಸೋಂಕಿಗೊಳಗಾಗಬಹುದು. ಜತೆಗೆ ಜೀವಕ್ಕೆ ಮಾರಕವಾಗಬಲ್ಲ ಸೋಂಕುಗಳ ಪ್ರಸರಣಕ್ಕೂ ಕಾರಣವಾಗಬಹುದು.
4. ತೂರಿಕೊಂಡ ಅಥವಾ ಬಂಧಿತ ಹಲ್ಲುಗಳು ತಾವಾಗಿ ಹುಳುಕಾಗಬಹುದು ಮತ್ತು ಸಮಸ್ಯೆಗಳನ್ನು ಉಂಟು ಮಾಡಬಹುದು.
5. ತೂರಿಕೊಂಡ ಅಥವಾ ಬಂಧಿತ ಹಲ್ಲು ಎಲುಬಿಗೆ ಸೋಂಕು ಉಂಟು ಮಾಡಬಹುದು.
6. ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು.
7. ಬಾಯಿ ತೆರೆದುಕೊಳ್ಳುವುದು ಕಡಿಮೆಯಾಗುವಂತೆ ಮಾಡಬಹುದು.
ಬಂಧಿತ ಅಥವಾ ತೂರಿಕೊಂಡ ಹಲ್ಲು ಯಾವುದೇ ತೊಂದರೆಯನ್ನು ಉಂಟು ಮಾಡದೆ ಇದ್ದರೂ ಎಕ್ಸ್‌ರೇಗಳು, ವೈದ್ಯಕೀಯ ತಪಾಸಣೆಯ ಮೂಲಕ ಅದರ ಬಗ್ಗೆ ನಿಯಮಿತವಾಗಿ ನಿಗಾ ಇರಿಸಿಕೊಳ್ಳುವುದು ಕಡ್ಡಾಯವಾಗಿದೆ.
ಯಾವುದೇ ವ್ಯಕ್ತಿಗೆ ತೂರಿಕೊಂಡ ಅಥವಾ ಬಾಧಿತ ಹಲ್ಲನ್ನು ತೆಗೆದುಹಾಕಬೇಕಿದ್ದರೆ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸಾ ತಜ್ಞರು ಆ ಕೆಲಸ ಮಾಡುತ್ತಾರೆ. ಹಾಗಾಗಿ ನಿಮಗೆ ತೂರಿಕೊಂಡ ಅಥವಾ ಬಂಧಿತ ಹಲ್ಲು ಇದ್ದರೆ ನೀವು ಆದಷ್ಟು ಬೇಗನೆ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸಾ ತಜ್ಞರನ್ನು ಸಂಪರ್ಕಿಸಬೇಕು. -ಡಾ| ಆನಂದ್ ದೀಪ್ ಶುಕ್ಲಾ ,
ಅಸೊಸಿಯೇಟ್ ಪ್ರೊಫೆಸರ್
ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ