Advertisement

7288 ಜನರ ವರದಿ ಬರೋದು ಬಾಕಿ

07:41 AM May 29, 2020 | Suhan S |

ಯಾದಗಿರಿ: ಕೋವಿಡ್ ವೈರಸ್‌ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ ಮಾದರಿಗಳಲ್ಲಿ ಗುರುವಾರ ಪಾಸಿಟಿವ್‌ ಬಂದ 7 ಪ್ರಕರಣ ಸೇರಿದಂತೆ ಮೇ 28ರವರೆಗೆ ಒಟ್ಟು 163 ವರದಿ ಪಾಸಿಟಿವ್‌ ಬಂದಿವೆ.

Advertisement

ಗುರುವಾರದ 731 ನೆಗೆಟಿವ್‌ ವರದಿ ಸೇರಿ ಈವರೆಗೆ 6022 ಮಾದರಿಗಳ ವರದಿ ನೆಗೆಟಿವ್‌ ಬಂದಿವೆ. 1659 ಜನರ ಮಾದರಿ ಸಂಗ್ರಹಿಸಲಾಗಿದ್ದು, ಇನ್ನು 7288 ಮಾದರಿಗಳ ವರದಿ ಬರಬೇಕಿದೆ ಎಂದು ಎಡಿಸಿ ಪ್ರಕಾಶ್‌ ರಜಪೂತ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್‌ 19 ಖಚಿತಪಟ್ಟ 163 ವ್ಯಕ್ತಿಗಳ ಪೈಕಿ 9 ಜನ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಉಳಿದ 153 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 483 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 1420 ಜನರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಜಿಲ್ಲೆಯಲ್ಲಿ 4 ಕಂಟೇನ್ಮೆಂಟ್‌ ಝೋನ್‌ ಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹೊಸ ಜಿಲ್ಲಾಸ್ಪತ್ರೆಯಲ್ಲಿ 89 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ ಕೋವಿಡ್  ಕೇರ್‌ ಸೆಂಟರ್‌ನಲ್ಲಿ 59 ಜನರನ್ನು, ಸುರಪುರ ಕೋವಿಡ್  ಕೇರ್‌ ಸೆಂಟರ್‌ನಲ್ಲಿ 39 ಮತ್ತು ಏಕಲವ್ಯ ಕೋವಿಡ್ ಕೇರ್‌ ಸೆಂಟರ್‌ನಲ್ಲಿ 59 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 224 ಇನ್‌ ಸ್ಟಿಟ್ಯೂಶನಲ್‌ ಕ್ವಾರಂಟೈನ್‌ ಸೆಂಟರ್‌ ಗಳಲ್ಲಿ ಒಟ್ಟು 14,643 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next