Advertisement

ಪಾಲಿಕೆಯಿಂದ ಬಾಡಿಗೆ ಬಾಕಿ; ಪ್ರತಿಭಟನೆ

12:20 PM Jun 11, 2019 | Suhan S |

ಹುಬ್ಬಳ್ಳಿ: ಮಹಾನಗರ ಪಾಲಿಕೆ ಸೇವೆಗೆ ನೀಡಲಾದ ವಾಹನಗಳ ಬಾಡಿಗೆ ಹಣ ಪಾವತಿ ಮಾಡದಿರುವುದನ್ನು ಖಂಡಿಸಿ ಜಿಲ್ಲಾ ವಾಹನ ಚಾಲಕರು ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ವಾಹನ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಯಿತು.

Advertisement

ಕಳೆದ ಹಲವಾರು ವರ್ಷಗಳಿಂದ ಮಹಾನಗರ ಪಾಲಿಕೆಗೆ ಮಾಸಿಕ ಬಾಡಿಗೆ ಆಧಾರದ ಮೇಲೆ ವಾಹನಗಳನ್ನು ನೀಡಲಾಗಿದ್ದು, ಕಳೆದ ಮೂರ್ನಾಲ್ಕು ತಿಂಗಳಿಂದ ವಾಹನಗಳ ಬಾಡಿಗೆ ಹಣ ಸಂದಾಯ ಮಾಡಲಾಗಿಲ್ಲ. ವಾಹನಗಳ ಕಂತಿನ ಹಣ ತುಂಬಲು ಸಾಧ್ಯವಾಗುತ್ತಿಲ್ಲ. ಚಾಲಕರ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇದಲ್ಲದೇ ವಾಹನಗಳಿಗೆ ಇಂಧನ ಹಾಕಿಸಲು ಹಣ ಇಲ್ಲದ ಸ್ಥಿತಿ ಬಂದಿದೆ. ಕೂಡಲೇ ಪಾಲಿಕೆ ಆಯುಕ್ತರು ವಾಹನಗಳ ಬಾಕಿ ಹಣ ನೀಡಿದರೆ ಮಾತ್ರ ವಾಹನಗಳ ಸಂಚಾರ ಕೈಗೊಳ್ಳುತ್ತೇವೆ. ಇಲ್ಲವಾದರೆ ಇಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಪ್ರೇಮನಾಥ ಚಿಕ್ಕತುಂಬಳ, ಸತೀಶ ಬಳ್ಳಾರಿ, ಬಸಪ್ಪ ದೊಡ್ಡಮನಿ, ಪರಶುರಾಮ ಸೋನಿಕರ, ಹನುಮಂತ, ಈರಪ್ಪ ಜೋಗಿ, ಪ್ರಕಾಶ ಅತ್ತಿಗೇರಿ, ಅಶೋಕ ಲಮಾಣಿ, ರವಿ ವಗ್ಗರ, ಶ್ರೀನಿವಾಸ ಹಿರೇಮನಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next