Advertisement
ಜಿಲ್ಲಾಡಳಿತ ಸೂಚನೆಯಂತೆ ಬೇಸಿಗೆ ಇಲ್ಲವೆ ಮಳೆಕೊರತೆ ಸಂದರ್ಭದಲ್ಲಿ ಅವಳಿನಗರ ಸೇರಿದಂತೆ ನೆರೆ ತಾಲೂಕು ಗ್ರಾಮಗಳಿಗೆ ಮಹಾನಗರದಿಂದಲೇ ಕುಡಿಯುವ ನೀರು ಪೂರೈಸಲಾಗುತ್ತದೆ. ಆದರೆ ನೀರು ಪೂರೈಕೆ ಮಾಡಿದ್ದಷ್ಟೆ ಬಂತು ಕಳೆದ ಕೆಲ ವರ್ಷಗಳಿಂದ ನೀರಿನ ಬಾಕಿ ಮಾತ್ರ ಬಂದಿಲ್ಲ. ಒಂದೆರಡುಕಡೆ ಏಳೆಂಟು ಕೋಟಿ ರೂ. ಲೆಕ್ಕದಲ್ಲಿ ಬಡ್ಡಿಯೇ ಬರಬೇಕಿದೆ.
Related Articles
Advertisement
ವಾರ್ಡ್‌ವಾರು ಬಾಕಿ: 2021ರ ಮೇ ಅಂತ್ಯದವರೆಗೆ ನೀರಿನ ಶುಲ್ಕ ಪಾವತಿ ಬಾಕಿಯ ಪಟ್ಟಿ ನೋಡಿದರೆ 25 ಸಾವಿರ ರೂ.ನಿಂದ ಹಿಡಿದು 2 ಲಕ್ಷ ರೂ. ಗಳವರೆಗೆ ಅದಕ್ಕೂ ಮೇಲ್ಪಟ್ಟು ಬಾಕಿ ಇರುವವರಸಂಖ್ಯೆ ಸುಮಾರು 8914 ಗ್ರಾಹಕರಿದ್ದು, ಅವರಿಂದ ಒಟ್ಟು 55,66,63,747 ರೂ.ಗಳ ಬಾಕಿ ಬರಬೇಕಿದೆ. 25 ಸಾವಿರ ರೂ.ಒಳಗೆ ಬಾಕಿ ಇರಿಸಿಕೊಂಡವರು ಸೇರಿದಂತೆ ಒಟ್ಟು ಅಂದಾಜು 71.44 ಕೋಟಿ ರೂ. ಗಳಿಗೂ ಅಧಿಕ ನೀರಿನ ಬಿಲ್ ಬಾಕಿ ಬರಬೇಕಿದೆ.
ವಾರ್ಡ್ ಸಂಖ್ಯೆ 24ರಲ್ಲಿ ಅಂದಾಜು 3.30 ಕೋಟಿ ರೂ. ಬಾಕಿ ಬರಬೇಕಿದೆ. ಅದರಂತೆ ವಾರ್ಡ್ 25-94.39 ಲಕ್ಷ, ವಾರ್ಡ್ 26-65 ಲಕ್ಷ ರೂ., ವಾರ್ಡ್ 27-1 ಲಕ್ಷ ರೂ., ವಾರ್ಡ್ 28-1 .5 ಲಕ್ಷರೂ., ವಾರ್ಡ್ 29-11 ಲಕ್ಷರೂ., ವಾರ್ಡ್ 30-1.24 ಕೋಟಿ, ವಾರ್ಡ್ 34-2.44 ಕೋಟಿ, ವಾರ್ಡ್ 35-18 ಲಕ್ಷ, ವಾರ್ಡ್ 35ಎ-96 ಲಕ್ಷ, ವಾರ್ಡ್ 36-49 ಲಕ್ಷ, ವಾರ್ಡ್ 36ಎ-36 ಲಕ್ಷ , ವಾರ್ಡ್ 37-1.60 ಕೋಟಿ, ವಾರ್ಡ್ 38-4.27 ಕೋಟಿ, ವಾರ್ಡ್ 39-2.46 ಕೋಟಿ, ವಾರ್ಡ್ 40-1.94 ಕೋಟಿ, ವಾರ್ಡ್ 41-92 ಲಕ್ಷ, ವಾರ್ಡ್ 42-1.85 ಕೋಟಿ, ವಾರ್ಡ್ 43-3.65 ಕೋಟಿ, ವಾರ್ಡ್ 44-1.39 ಕೋಟಿ, ವಾರ್ಡ್ 45-1.46 ಕೋಟಿ, ವಾರ್ಡ್ 45ಎ-1.28 ಕೋಟಿ, ವಾರ್ಡ್ 46-1.67 ಕೋಟಿ, ವಾರ್ಡ್ 47-2 ಕೋಟಿ, ವಾರ್ಡ್ 48-47 ಲಕ್ಷ, ವಾರ್ಡ್ 49-2.03 ಕೋಟಿ, ವಾರ್ಡ್ 50-3.05 ಕೋಟಿ, ವಾರ್ಡ್ 51-1.54 ಕೋಟಿ, ವಾರ್ಡ್ 52-2.14 ಕೋಟಿ, ವಾರ್ಡ್ 53-1.72 ಕೋಟಿ, ವಾರ್ಡ್ 54-2.47 ಕೋಟಿ, ವಾರ್ಡ್ 55-41 ಲಕ್ಷ , ವಾರ್ಡ್ 56-84 ಲಕ್ಷ, ವಾರ್ಡ್ 57-75 ಲಕ್ಷ, ವಾರ್ಡ್ 58-1.24 ಕೋಟಿ, ವಾರ್ಡ್ 59-2.58 ಕೋಟಿ, ವಾರ್ಡ್ 60-4.28 ಕೋಟಿ,ವಾರ್ಡ್ 61-84 ಲಕ್ಷ, ವಾರ್ಡ್ 62-2.02 ಕೋಟಿ, ವಾರ್ಡ್ 63-96 ಲಕ್ಷ, ವಾರ್ಡ್ 64-1.40 ಕೋಟಿ, ವಾರ್ಡ್ 65-2.22 ಕೋಟಿ, ವಾರ್ಡ್ 65ಎ-1.84 ಕೋಟಿ, ವಾರ್ಡ್ 66-2.47 ಕೋಟಿ, ವಾರ್ಡ್ 67-1.21 ಕೋಟಿ ಬಾಕಿ ಬರಬೇಕಿದೆ.
25 ಸಾವಿರ ರೂ.ಗಳ ಮೇಲ್ಪಟ್ಟ ಸುಮಾರು 3,706 ಗ್ರಾಹಕರಿಂದ 13.63 ಕೋಟಿ, 50 ಸಾವಿರ ರೂ.ಗಳ ಮೇಲ್ಪಟ್ಟ 4,735 ಗ್ರಾಹಕರಿಂದ 28.41 ಕೋಟಿ, 1ಲಕ್ಷ ಮೇಲ್ಪಟ್ಟ 90 ಗ್ರಾಹಕರಿಂದ 1.10 ಕೋಟಿ, 1.5 ಲಕ್ಷಮೇಲ್ಪಟ್ಟ 84 ಗ್ರಾಹಕರಿಂದ 1.43 ಕೋಟಿ, 2 ಲಕ್ಷ ಮೇಲ್ಪಟ್ಟ 299 ಗ್ರಾಹಕರಿಂದ 11.06 ಕೋಟಿ ರೂ. ಗಳ ಬಾಕಿ ಇದೆ. ಇದರಲ್ಲಿ 1.5 ಮೇಲ್ಪಟ್ಟ ಗ್ರಾಹಕರನೀರಿನ ಬಿಲ್ ಕುರಿತು ಹಲವು ವ್ಯಾಜ್ಯಗಳಿದ್ದು, ಇಂತಹ ಬಿಲ್‌ಗಳ ಸಮಸ್ಯೆ ಇವೆ ಎನ್ನುತ್ತಾರೆ ಅಧಿಕಾರಿಗಳು.
ನೆರೆಯ ತಾಲೂಕಿನಿಂದ ಬರಬೇಕು ಕೋಟಿ ಕೋಟಿ ಬಾಕಿ :
ಜಲಮಂಡಳಿಗೆ ಕಳೆದ 10 ವರ್ಷಗಳಿಂದ ನೀರು ಸರಬರಾಜು ಮಾಡಿರುವ ಬಿಲ್ ಬಾಕಿ ಹಣಕೋಟಿಗಟ್ಟಲೆ ಬರಬೇಕಿದ್ದು, ಆಗೊಮ್ಮೆ-ಈಗೊಮ್ಮೆ ಎನ್ನುವಂತೆ ಅಲ್ಪ ಪ್ರಮಾಣದಲ್ಲಿ ಬರುತ್ತಿದ್ದು, ಇದು ಯಾವುದಕ್ಕೂ ಸಾಲದಾಗಿದೆ. 2010ರಿಂದ ಕುಂದಗೋಳ ಪಟ್ಟಣದಿಂದ ಸುಮಾರು 9 ಕೋಟಿಗೂಅಧಿಕ ಅಸಲು ಹಾಗೂ 8 ಕೋಟಿಗೂ ಅಧಿಕ ಬಡ್ಡಿಒಟ್ಟು ಸುಮಾರು 17 ಕೋಟಿ ನಷ್ಟು ಬಾಕಿ ಹಣಬರಬೇಕಿದೆ. ಯರಿಕೊಪ್ಪದಿಂದ ಸುಮಾರು 1 ಕೋಟಿ ಬಾಕಿ ಬರಬೇಕಿದೆ. ಇಂದು, ನಾಳೆ ಬಂದೀತೆಂದು ಜಲಮಂಡಳಿ ಕಾಯುವಂತಾಗಿದೆ.
ಪ್ರಾಯೋಗಿಕ ವಾರ್ಡ್‌ಗಳಲ್ಲಿ ಆಗುತ್ತಿಲ್ಲ ಬಿಲ್ ಪಾವತಿ :
24/7 ಕುಡಿಯುವ ನೀರು ಸರಬರಾಜು ನಗರದ ಕೆಲ ವಾರ್ಡ್‌ಗಳಲ್ಲಿ ಪ್ರಾಯೋಗಿಕ ನೀರು ಸರಬರಾಜು ಮಾಡುತ್ತಿದ್ದು, ಇಂತಹ ಬಹುತೇಕ ವಾರ್ಡ್‌ಗಳಲ್ಲಿ ಸರಿಯಾದ ಬಿಲ್ ವಿತರಿಸುತ್ತಿಲ್ಲ. ಮಾಡಿದರೂ ಮೂರು-ನಾಲ್ಕು ತಿಂಗಳಿಗೊಮ್ಮೆ ಬಿಲ್ ನೀಡಲಾಗುತ್ತಿದೆ. ಇದರಿಂದ ಬಹುತೇಕ ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಒಂದೇ ಬಾರಿಗೆ 5ರಿಂದ 10 ಸಾವಿರ ರೂ.ಗಳವರೆಗೆ ಬಿಲ್ ನೀಡಿದ್ದಾರೆ. ಇದು ಹೇಗೆಸಾಧ್ಯ? ಎಂದು ಗ್ರಾಹಕರು ಜಲಮಂಡಳಿ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ.
ಜಲಮಂಡಳಿಯ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕೆಂದರೆ ಗ್ರಾಹಕರು ಕೈ ಜೋಡಿಸಬೇಕು. ಎಲ್ಲವೂ ಇಲಾಖೆಯೇ ಮಾಡಲಿ ಎಂದರೆ ಅದು ಸಾಧ್ಯವಿಲ್ಲದ ಮಾತು. ಜಲಮಂಡಳಿಗೆ ಸುಮಾರು 71.44 ಕೋಟಿ ರೂ.ನಷ್ಟು ಬಾಕಿ ಬರಬೇಕಿದೆ. ಕುಂದಗೋಳ-ಯರಿಕೊಪ್ಪ ಇನ್ನಿತರೆಕಡೆಯ ಸುಮಾರು 20 ಕೋಟಿ ಬಾಕಿ ಬಂದಲ್ಲಿಜಲಮಂಡಳಿ ಪುನಶ್ಚೇತನಕ್ಕೆ ಕಾರಣವಾಗಬಹುದು. ಆದ್ದರಿಂದ ಗ್ರಾಹಕರು ಜಲಮಂಡಳಿಗೆ ಬರಬೇಕಾದ ಬಾಕಿಯನ್ನು ಹಂತ-ಹಂತವಾಗಿ ಸಂದಾಯ ಮಾಡಿದ್ದಲ್ಲಿ ಉತ್ತಮ ಸೇವೆ ಮಾಡಲು ಸಹಕಾರಿಯಾಗಲಿದೆ.–ವಸಂತ ಗುಡಿ, ಸಹಾಯಕ ಅಭಿಯಂತರರ, ಜಲಮಂಡಳಿ.
–ಬಸವರಾಜ ಹೂಗಾರ