Advertisement

ಬಾಕಿ ಕೇಸ್‌ ಮುಕ್ತ ಜಿಲ್ಲೆ ನಮ್ಮಲಿಂದಲೇ ಶುರು

09:47 AM Jul 28, 2019 | Team Udayavani |

ಧಾರವಾಡ: ನ್ಯಾಯಾಲಯದಲ್ಲಿರುವ ಬಾಕಿ ಪ್ರಕರಣಗಳ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಧಾರವಾಡವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮುರ್ತಿ ಅಭಯ ಶ್ರೀನಿವಾಸ ಓಕಾ ಹೇಳಿದರು.

Advertisement

ನಗರದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿರುವ 5 ವರ್ಷಕ್ಕಿಂತ ಹಳೆಯದಾದ ಎಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಎಲ್ಲಾ ನ್ಯಾಯಾಧೀಶರಿಗೆ ಸೂಚನೆ ನೀಡಲಾಗಿದೆ. ಜಿಲ್ಲಾ, ತಾಲೂಕು ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ಹಾಗೂ ಬಾಕಿ ಪ್ರಕರಣಗಳ ಇತ್ಯರ್ಥ ಕುರಿತು ನ್ಯಾಯಾಂಗ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗಿದೆ. ಪ್ರಕರಣಗಳ ಉಭಯ ಪಕ್ಷಗಾರರ ನ್ಯಾಯವಾದಿಗಳು ಸಹಕಾರ ನೀಡಬೇಕು ಎಂದರು.

ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ನ್ಯಾಯಾಲಯಗಳಲ್ಲಿ ಸೂಕ್ತ ಸೌಕರ್ಯಗಳಿವೆ. ಹುಬ್ಬಳ್ಳಿಯ ನೂತನ ತಾಲೂಕು ನ್ಯಾಯಾಲಯ ಮಾದರಿ ನ್ಯಾಯಾಲಯ ಕಟ್ಟಡದ ಗುಂಪಿಗೆ ಸೇರ್ಪಡೆಯಾಗಿದೆ. ಇದೇ ಮಾದರಿಯ ಸೌಲಭ್ಯ ಅಳವಡಿಸಿಕೊಳ್ಳುವ ಕಾರಣದಿಂದ ಹುಬ್ಬಳ್ಳಿ ನ್ಯಾಯಾಲಯಕ್ಕೆ ಭೇಟಿ ನೀಡುವಂತೆ ರಾಜ್ಯದ ಉಳಿದ ನ್ಯಾಯಾಧೀಶರಿಗೂ ತಿಳಿಸಲಾಗುವುದು ಎಂದರು.

ರಾಜ್ಯ ಸರ್ಕಾರ 4ನೇ ಶನಿವಾರ ರಜೆ ಘೋಷಿಸಿದ್ದರಿಂದ ವರ್ಷದಲ್ಲಿ 10ರಿಂದ 12 ದಿನಗಳ ಕಾಲ ಕೋರ್ಟ್‌ ಕಲಾಪಗಳಿಗೆ ಸಮಯ ಕಡಿಮೆಯಾಗಲಿದೆ. ಆದ್ದರಿಂದ ನ್ಯಾಯವಾದಿಗಳು ಇನ್ಮುಂದೆ ಕೋರ್ಟ್‌ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ, ಧಾರವಾಡ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಪಿ.ಎಸ್‌. ದಿನೇಶಕುಮಾರ, ಉಚ್ಚ ನ್ಯಾಯಾಲಯದ ರಜಿಸ್ಟ್ರಾರ್‌ ಜನರಲ್ ವಿ.ಶ್ರೀಶಾನಂದ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್‌. ಘೋಡಸೆ ಇದ್ದರು. ಸ್ನೇಹಾ ಕಟ್ಟಿ ಪ್ರಾರ್ಥಿಸಿದರು. ಕೆ.ಬಿ. ನವಲಗಿಮಠ ಪರಿಚಯಿಸಿದರು. ಬಸವಪ್ರಭು ಹೊಸಕೇರಿ ನಿರೂಪಿಸಿದರು. ಎನ್‌.ಆರ್‌. ಮಟ್ಟಿ ವಂದಿಸಿದರು.

Advertisement

ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಭಯ ಓಕಾ ಅವರು ಜಿಲ್ಲಾ ನ್ಯಾಯಾಲಯದ ಸಭಾಭವನದಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಧೀಶರ ಸಭೆ ನಡೆಸಿದರು. ನ್ಯಾಯಾಲಯಗಳಲ್ಲಿ ದಾಖಲಿರುವ ಪ್ರಕರಣಗಳ ಕುರಿತು, ಮೂಲಸೌಕರ್ಯ, ನ್ಯಾಯಾಲಯ ಸಂಕೀರ್ಣಗಳ ಕುರಿತು ಪ್ರಗತಿ ಪರಿಶೀಲನೆ ಮಾಡಿದರು. ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಪಿ.ಎಸ್‌. ದಿನೇಶಕುಮಾರ, ಹೈಕೋರ್ಟ್‌ ರಜಿಸ್ಟ್ರಾರ್‌ ಜನರಲ್ ವಿ. ಶ್ರೀಶಾನಂದ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ| ಚಿಣ್ಣನ್ನವರ ಆರ್‌.ಎಸ್‌. ಇನ್ನಿತರರಿದ್ದರು. ಸಭೆ ಪೂರ್ವದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮತ್ತು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸಸಿ ನೆಟ್ಟರು. ನಂತರ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಭೇಟಿ ನೀಡಿ ಸ್ವಚ್ಛತೆ, ಕಚೇರಿ ವ್ಯವಸ್ಥೆ, ಮೂಲಸೌಕರ್ಯಗಳನ್ನು ಪರಿಶೀಲಿಸಿದರು.

ಪ್ರಗತಿ ಪರಿಶೀಲನಾ ಸಭೆ:

Udayavani is now on Telegram. Click here to join our channel and stay updated with the latest news.

Next