Advertisement
ಕೋಟಿ ರೂ.ಗಳ ಕೋಡಿ ಸೇತುವೆ:
Related Articles
Advertisement
ತೆರವು:
ಇಲ್ಲಿ ತಾತ್ಕಾಲಿಕ ಮೋರಿ ನಿರ್ಮಿಸಿದ ಕಾರಣ ಈ ಭಾಗದ ಜನರಿಗೇನೋ ಅನುಕೂಲವಾಯಿತು. ಆದರೆ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿರುತ್ತದೆ. ತಡೆ ಒಡ್ಡಿದರೆ ಕೋಟೇಶ್ವರ, ಬೀಜಾಡಿ ಭಾಗದ ಗದ್ದೆಗಳು ಮುಳುಗಡೆ ಯಾಗುತ್ತದೆ. ಆಗ ಅನಿವಾರ್ಯವಾಗಿ ತಡೆಯನ್ನು ತೆರವುಗೊಳಿಸಿ ನೀರಿನ ಹರಿವನ್ನು ಸುಗಮಗೊಳಿಸಬೇಕಾ ಗುತ್ತದೆ. ತಡೆ ತೆರವಾದಾಗ ಯಾವುದೇ ವಾಹನಗಳು/ಜನ ಹೊಳೆ ದಾಟಲು ಇಲ್ಲಿ ಪರ್ಯಾಯವೇ ಇಲ್ಲ.
ರೈತರ ಆಗ್ರಹ:
ಕೋಡಿ, ಹಂಗಳೂರು ಭಾಗದ ಜನರು ತಾತ್ಕಾಲಿಕ ಮೋರಿ ನಿರ್ಮಿಸಿ ಹೊಳೆ ದಾಟಲು ವ್ಯವಸ್ಥೆ ಮಾಡಿಕೊಡಿ ಎಂದು ಆಗ್ರ ಹಿಸಿದ್ದಾರೆ. ಯಾವುದೇ ಕಾರಣಕ್ಕೂ ಹರಿಯುವ ನೀರಿಗೆ ತಡೆ ಒಡ್ಡಬೇಡಿ, ಕಷ್ಟಪಟ್ಟು ಮಾಡಿದ ಕೃಷಿ ನಾಶವಾಗುತ್ತದೆ ಎಂದು ಕೋಟೇಶ್ವರ, ಬೀಜಾಡಿ ಭಾಗದ ರೈತರು ಆಗ್ರಹಿಸಿದ್ದಾರೆ. ಇದೇ ಕಾರಣಕ್ಕೆ ರವಿವಾರ ಒಂದಷ್ಟು ಜನ ಸೇರಿ ಮಾತಿನ ಚಕಮಕಿಯೂ ನಡೆದಿತ್ತು. ಪೊಲೀಸರು, ಅಧಿಕಾರಿಗಳು ಭೇಟಿ ನೀಡುವಂತಾಯಿತು.
ಹೊಳೆಯಲ್ಲಿ ಸಂಚಾರ ಅನಿವಾರ್ಯ :
ಪಾದಚಾರಿಗಳು ಹೊಳೆ ದಾಟಿ ಬರುತ್ತಾರೆ. ನೀರಿನ ಹರಿವು ಹೆಚ್ಚಿದ್ದಾಗ ಇದು ಅಪಾಯಕ್ಕೆ ದಾರಿ. ಅಷ್ಟಲ್ಲದೆ ಕೆಲವರು ದ್ವಿಚಕ್ರ ವಾಹನಗಳು, ಸೈಕಲ್ ಮೊದಲಾದವನ್ನೂ ದಾಟಿಸುತ್ತಾರೆ. ಬೇರೆಲ್ಲ ವಾಹನಗಳೂ ಕೋಟೇಶ್ವರದ ಸಮೀಪ ಇರುವ ಎಂಕೋಡಿ ರಸ್ತೆ ಮೂಲಕ ಅಥವಾ ಕುಂದಾಪುರ ಚರ್ಚ್ ರಸ್ತೆ ಮೂಲಕ ಕೋಡಿಗೆ ಹೋಗಬೇಕು. ಈ ಅನನುಕೂಲ ಸದ್ಯದ ಮಾಹಿತಿ ಪ್ರಕಾರ ಇನ್ನೂ ಒಂದು ತಿಂಗಳು ಮುಂದುವರಿಯಲಿದೆ. ಕಾಮಗಾರಿ ವೇಗ ಪಡೆಯುತ್ತಿದ್ದರೆ ಈ ಮಳೆಗಾಲದಲ್ಲಿ ಜನರಿಗೆ ಈ ತಾಪತ್ರಯ ಇರುತ್ತಿರಲಿಲ್ಲ. ವಿಳಂಬದ ಕಾರಣ ದಿಂದಾಗಿ ಜನ ಸಂಕಷ್ಟ ಪಡುವಂತಾಗಿದೆ.
ಮಳೆ ಕಡಿಮೆಯಾದ ಬಳಿಕ ಅಥವಾ 1 ವಾರದ ಅನಂತರ ತಾತ್ಕಾಲಿಕವಾಗಿ ಮೋರಿ ಮಾಡಿ ಓಡಾಟಕ್ಕೆ ವ್ಯವಸ್ಥೆ ಮಾಡಲಾಗುವುದು. ಆ.15ರ ಅನಂತರ ಕಾಮಗಾರಿ ಆರಂಭವಾಗಲಿದ್ದು ಮುಕ್ಕಾಲಂಶ ಆದ ಸೇತುವೆ ಪೂರ್ಣವಾಗಲಿದೆ. ಬಾಕಿ ಉಳಿದ ಸೇತುವೆಯ ಕಾಮಗಾರಿಗೆ ಚಾಲನೆ ದೊರೆಯಲಿದೆ. ಕಾಮಗಾರಿ ಆರಂಭವಾದರೆ 50 ದಿನಗಳ ಅವಧಿ ಸಾಲುತ್ತದೆ. – ಹರ್ಷವರ್ಧನ, ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಕುಂದಾಪುರ