Advertisement

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

12:46 AM Dec 23, 2024 | Team Udayavani |

ಕಾಸರಗೋಡು: ಅಸ್ಸಾಂ ಸ್ಪೆಷಲ್‌ ಟಾಸ್ಕ್ ಫೋರ್ಸ್‌ ಪೊಲೀಸರಿಂದ ಕಾಸರಗೋಡಿನ ಪಡನ್ನಕ್ಕಾಡ್‌ನಿಂದ ಬಂಧಿಸಲ್ಪಟ್ಟ ಬಾಂಗ್ಲಾ ಪ್ರಜೆ ಎಂ.ಡಿ.ಶಾಬ್‌ ಶೇಖ್‌ ಅಲ್‌ ಖೈದ ಉಗ್ರರ ಸ್ಲೀಪರ್‌ ಸೆಲ್‌ ಸದಸ್ಯನಾಗಿ ಕಾರ್ಯಾಚರಿಸುತ್ತಿದ್ದ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ.

Advertisement

ಈತ ಬಾಂಗ್ಲಾದೇಶದ ಉಗ್ರಗಾಮಿ ಸಂಘಟನೆಯಾದ ಅನ್ಸಾರುಲ್ಲ ಬಾಂಗ್ಲಾದ ಸಕ್ರಿಯ ಕಾರ್ಯಕರ್ತನೆಂದು ತನಿಖಾ ತಂಡ ಪತ್ತೆಹಚ್ಚಿದ್ದು, ಭಾರತದಲ್ಲಿ ಸ್ಪೀಪರ ಸೆಲ್‌ ರಚಿಸಿ, ಹಿಂದೂ ನಾಯಕರನ್ನು ಹತ್ಯೆಗೈಯುವ ಸಂಚು ರೂಪಿಸಿದ್ದ ಎಂಬ ಆತಂಕಕಾರಿ ಸಂಗತಿ ಬಯಲಿಗೆ ಬಂದಿದೆಯ ಈತ 2018ರಿಂದ ಕಾಸರಗೋಡು ಕೇಂದ್ರೀಕರಿಸಿ ಕಾರ್ಯಾ ಚರಿಸುತ್ತಿದ್ದು, ಕಳೆದ ಬುಧವಾರ ಬಂಧಿಸಲ್ಪಟ್ಟಿದ್ದ.

ಅಸ್ಸಾಂನಲ್ಲಿ ಹಲವು ಬಾಂಬ್‌ ಸ್ಫೋಟ ಕೇಸುಗಳಲ್ಲಿ ಆರೋ ಪಿಯಾಗಿದ್ದ ಈತ ಕಟ್ಟಡ ನಿರ್ಮಾಣ ಕಾರ್ಮಿಕನೆಂದು ನಕಲಿ ದಾಖಲೆಯೊಂದಿಗೆ ಕಾಸರಗೋಡಿಗೆ ಬಂದಿದ್ದ. ನಕಲಿ ದಾಖಲೆ ಬಳಸಿ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಖಾತೆ ತೆರೆದಿದ್ದು, ಈತನಿಗೆ ಸಹಾಯ ಮಾಡಿದವರ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಭಾರತದಲ್ಲಿ ಉಗ್ರಗಾಮಿ ಚಟುವಟಿಕೆ ಸಕ್ರಿಯಗೊಳಿಸಲು ಹಾಗೂ ಸ್ಲೀಪರ್‌ ಸೆಲ್‌ಗ‌ಳನ್ನು ರಚಿಸಲೆಂದೇ ಈತನನ್ನು ಆತನ ಸಂಘಟನೆ ಕಳುಹಿಸಿತ್ತು. ಇದೇ ವೇಳೆ ಅಸ್ಸಾಂ ಟಾಸ್ಕ್‌ ಫೋರ್ಸ್‌ ಉಗ್ರ ಚಟುವಟಿಕೆ ಆರೋಪದಲ್ಲಿ ಅಸ್ಸಾಂನಿಂದ ಐವರು ಹಾಗೂ ಪಶ್ಚಿಮ ಬಂಗಾಲದಿಂದ ಇಬ್ಬರನ್ನು ಬಂಧಿಸಿದೆ. ಇವರೆಲ್ಲರೂ ಹಿಂದೂ ನಾಯಕರನ್ನು ಹತ್ಯೆ ಮಾಡುವ ಉದ್ದೇಶ ಹೊಂದಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next