Advertisement

ಪೆನ್ಸಿಲ್‌ ಮುರಿಯುವ ನೋಟು

06:34 PM Jul 31, 2019 | mahesh |

ಈಗಿನ ಕಾಲದಲ್ಲಿ ಐದು ರೂಪಾಯಿಗೆ ಏನೇನೂ ಬೆಲೆ ಇಲ್ಲ ಎಂದು ಜನ  ಗೊಣಗಾಡುವುದನ್ನು ಕೇಳುತ್ತಲೇ ಇರುವಿರಲ್ಲಾ. ಅದು ಸರಿಯೋ ತಪ್ಪೋ, ಆದರೆ ಯಕ್ಷಿಣಿಗಾರರಾದ ನಿಮಗಂತೂ ಐದು ರೂಪಾಯಿ ನೋಟು ಬಹಳ ಉಪಯುಕ್ತವಾದ ವಸ್ತು. ಸಮಯ ಬಂದಾಗ ಅದನ್ನು ಒಂದು ಚಾಕುವಿನಂತೆಯೂ ಉಪಯೋಗಿಸಿ ಪೆನ್ಸಿಲ್‌
ತುಂಡರಿಸಬಲ್ಲಿರಿ. ಇದೇನು ಬರೀ ಬಡಾಯಿಯಲ್ಲ, ಪ್ರೇಕ್ಷಕರ ಎದುರೇ ಮಾಡಿ ತೋರಿಸುವಿರಿ.

Advertisement

ಯಕ್ಷಿಣಿಯ ಆರಂಭದಲ್ಲಿ ಅಗ್ಗದ ಬೆಲೆಯ ಒಂದು ಪೆನ್ಸಿಲನ್ನು ಪ್ರೇಕ್ಷಕರಿಗೆ ಕೊಟ್ಟು ಅದನ್ನು ಚೆನ್ನಾಗಿ ಪರೀಕ್ಷಿಸುವಂತೆ ಹೇಳಿ. ಅನಂತರ ಅವರಲ್ಲಿ ಯಾರಾದರೂ ಒಬ್ಬರನ್ನು ಕರೆದು
ಪೆನ್ಸಿಲನ್ನು ಎರಡೂ ಕೈಗಳಲ್ಲೂ ಹಿಡಿಯುವಂತೆ ಹೇಳಿ. ಈಗ ಗರಿಗರಿಯಾದ ಒಂದು ಐದು ರೂಪಾಯಿ ನೋಟನ್ನು ಎಲ್ಲರಿಗೂ ಕಾಣಿಸುವಂತೆ ಹಿಡಿಯಿರಿ. ಮಚ್ಚಿನಿಂದ ಕಬ್ಬನ್ನು
ಕತ್ತರಿಸುವಂತೆ ನೋಟಿನಿಂದ ಎರಡು ಬಾರಿ ಪೆನ್ಸಿಲಿನ ಮೇಲೆ ಹೊಡೆಯಿರಿ. ಏನಾಶ್ಚರ್ಯ; ನೋಟಿನಿಂದ ಮೂರನೇ ಏಟು ಬೀಳುತ್ತಿದ್ದಂತೆ ಪೆನ್ಸಿಲ್‌ ತುಂಡಾಗುತ್ತದೆ. ಆಗ ಬೆರಗಿನಿಂದ – ಈ ನೋಟು ಬ್ಲೇಡ್‌ ಆಗಿ ಬಿಡ್ತಲ್ಲಾ ಎಂದು ಉದ್ಗಾರ ತೆಗೆಯಿರಿ! ಗುಟ್ಟು ಏನೆಂದರೆ, ಪೆನ್ಸಿಲ್‌ಗೆ ಮೊದಲು ಎರಡು ಬಾರಿ ನೋಟನಿಂದ ಹೊಡೆದದ್ದು ನಿಜ. ಆದರೆ
ಮೂರನೆಯ ಬಾರಿ ಮಾತ್ರ, ಥಟ್ಟನೆ ತೋರು ಬೆರಳನ್ನು ನೋಟಿನ ಹಿಂದೆ ನೆಟ್ಟಗೆ
ಮಾಡಿಕೊಂಡು ಪೆನ್ಸಿಲ್‌ ಮೇಲೆ ಹೊಡೆಯಿರಿ. ಪೆನ್ಸಿಲ್‌ ಎರಡು ತುಂಡಾಗುವುದು. ಅದಕ್ಕೆ
ಏಟು ಬಿದ್ದಿರುವುದು ತೋರು ಬೆರಳಿನಿಂದ. ಆದರೆ ಜನ ತಿಳಿಯುವುದು ನೋಟಿನಿಂದ
ಎಂದು.

ಉದಯ್‌ ಜಾದೂಗಾರ್‌

Advertisement

Udayavani is now on Telegram. Click here to join our channel and stay updated with the latest news.

Next