Advertisement

29 ಹುಲಿಗಳಿಗೆ ಜನ್ಮನೀಡಿ, 17 ವರ್ಷದಷ್ಟು ದೀರ್ಘಾವಧಿ ಬದುಕಿದ ಮಹಾಮಾತೆ ನಿಧನ

08:16 PM Jan 16, 2022 | Team Udayavani |

ಶಿವನಿ (ಮಧ್ಯಪ್ರದೇಶ): 17 ವರ್ಷದಷ್ಟು ದೀರ್ಘಾವಧಿ ಬದುಕಿದ ಹೆಣ್ಣು ಹುಲಿಯೊಂದು ಶನಿವಾರ ಸಂಜೆ ಮೃತಪಟ್ಟಿದೆ.

Advertisement

ಮಧ್ಯಪ್ರದೇಶದ ಪೆಂಚ್‌ ಹುಲಿ ರಕ್ಷಣಾ ಕೇಂದ್ರದಲ್ಲಿದ್ದ ಕಾಲರ್‌ವಾಲಿ ಹೆಸರಿನ ಖ್ಯಾತ ಹುಲಿ, ಒಟ್ಟು 29 ಮರಿಗಳಿಗೆ ಜನ್ಮ ನೀಡಿತ್ತು. 2008ರಿಂದ 2018ರವರೆಗೆ ಅದು ಸತತವಾಗಿ ಮರಿಗಳನ್ನು ಹಾಕಿತ್ತು.

ಸಾಮಾನ್ಯವಾಗಿ ಹುಲಿಯೊಂದು ಸರಾಸರಿ 12 ವರ್ಷಗಳ ಕಾಲ ಬದುಕುತ್ತದೆ. ಈ ಹುಲಿ 17 ವರ್ಷ ಬದುಕಿದೆ. ಹಾಗೆಯೇ ಗರಿಷ್ಠ ಮರಿಗಳ ಜನನಕ್ಕೂ ಕಾರಣವಾಗಿದೆ. ಹಾಗಾಗಿಯೇ “ಮಹಾಮಾತೆ’ ಎಂಬ ಗೌರವವೂ ಅದಕ್ಕಿತ್ತು. ಅದೀಗ ವಯೋಸಹಜ ಕಾರಣಗಳಿಂದ ಮೃತಪಟ್ಟಿದೆ ಎನ್ನಲಾಗಿದೆ. ಇತ್ತೀಚೆಗೆ ಅದು ವಯಸ್ಸಾದ ಹಿನ್ನೆಲೆಯಲ್ಲಿ ಬಹಳ ದುರ್ಬಲವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next