Advertisement

ಮಾಸ್ಕ್ ಇಲ್ಲದೆ ಸಂಚರಿಸಿದ್ರೆ ಬೀಳುತ್ತೆ ದಂಡ

02:37 PM May 07, 2020 | Suhan S |

ಮಹಾಲಿಂಗಪುರ: ಪಟ್ಟಣದಲ್ಲಿ ಮಾಸ್ಕ್ ಇಲ್ಲದೆ ಸಂಚರಿಸಿದರೆ ಅಂಥವರಿಗೆ ಪುರಸಭೆ ಮತ್ತು ಪೊಲೀಸ್‌ ಸಿಬ್ಬಂದಿ ಸೇರಿ ಪ್ರತಿಯೊಬ್ಬರಿಗೆ 100 ರೂ. ದಂಡ ವಿಧಿಸಿದ್ದಾರೆ.

Advertisement

ಪಟ್ಟಣದ ರಾಣಿ ಚನ್ನಮ್ಮ ವೃತ್ತದ ಹತ್ತಿರ ಬರುವ ಮತ್ತು ಹೋಗುವ ವಾಹನದಾರರು ಮಾಸ್ಕ್ ಇಲ್ಲದೆ ಸಂಚರಿಸುವವರನ್ನು ನಿಲ್ಲಿಸಿ ಪ್ರತಿಯೊಬ್ಬರಿಗೆ 100 ರೂ ದಂಡ ವಿಧಿಸುವ ಪದ್ದತಿ ಜಾರಿ ಮಾಡಿದ್ದಾರೆ. ಬುಧವಾರ ಪಟ್ಟಣದಲ್ಲಿ 245 ವಾಹನಗಳನ್ನು ತಡೆ ಹಿಡಿದು ಮಾಸ್ಕ್ ಧರಿಸುವ ಬಗ್ಗೆ ತಿಳಿ ಹೇಳಿ, 100 ರೂ ದಂಡ ವಿಧಿಸಿದ್ದಾರೆ. ಒಂದೇ ದಿನದಲ್ಲಿ ಸುಮಾರು 24, 500 ರೂ. ದಂಡ ವಸೂಲಾಗಿದೆ. ಮಾಸ್ಕ್ ಇಲ್ಲದೆ ಸಂಚರಿಸಿದರೆ ವಾಹನಗಳನ್ನು ಮುಲಾಜಿಲ್ಲದೆ ಜಪ್ತಿ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಬಾಬುರಾವ ಕಮತಗಿ ಮತ್ತು ಎಸ್‌ಐ ಎಸ್‌.ಎಸ್‌. ಘಾಟಗೆ ಪತ್ರಿಕೆಗೆ ತಿಳಿಸಿದ್ದಾರೆ.

ಬಿಜೆಪಿ ಧುರೀಣ ಚನ್ನಪ್ಪ ರಾಮೋಜಿ ಮಾತನಾಡಿ, ಸರ್ಕಾರ ಈ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಸರ್ಕಾರದ ಆದೇಶವನ್ನು ಪಾಲಿಸಬೇಕು ಎಂದರು.

ಪುರಸಭೆ ವ್ಯವಸ್ಥಾಪಕ ರಾಘು ನಡುವಿನಮನಿ, ಕಿರಿಯ ಆರೋಗ್ಯ ನೀರಿಕ್ಷಕರಾದ ರಾಜು ಹೂಗಾರ,ಸಿದ್ದರಾಜ ಅಳ್ಳಿಮಟ್ಟಿ, ಮತ್ತು ರವಿ ಹಲಸಪ್ಪಗೋಳ, ಪರಸು ಬಂಡಿವಡ್ಡರ, ರಾಮು ಮಾಂಗ, ಎಂ.ಪಿ. ಮಾಂಗ, ಎಎಸ್‌ಐ ಅಗಸರ ಈಶ್ವರ ಇಂಗಳಗಾಂವಿ, ರಾಘವೇಂದ್ರ ಕಾಂಬಳೆ, ಶ್ರೀಶೈಲ ಔರಸಂಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next