Advertisement

ಅನಗತ್ಯ ಸಂಚಾರ: ಸವಾರರಿಗೆ ದಂಡ

06:36 PM May 12, 2021 | Team Udayavani |

ಭಾರತೀನಗರ: ಸರ್ಕಾರದ ಮಾರ್ಗಸೂಚಿಗಳನ್ನುಅನುಸರಿಸದೆ ಅನಗತ್ಯವಾಗಿ ಓಡಾಡು ತ್ತಿದ್ದ ಬೈಕ್‌ಸವಾರರನ್ನು ಸರ್ಕಲ್‌ ಇನ್ಸ್‌  ಸ್ಪೆಕ್ಟರ್ ಶಿವಮಲವಯ್ಯ, ಸಬ್‌ಇನ್ಸ್‌ ಪೆಕ್ಟರ್‌ ಶೇಷಾದ್ರಿ ನೇತೃತ್ವದಲ್ಲಿದಂಡ ವಿಧಿಸಿ ಬೈಕ್‌ಗಳನ್ನು ವಶಕ ಪೆR ‌ಡೆಯಲಾಗಿದೆ.ಕೆ.ಎಂ.ದೊಡ್ಡಿಯ ಸುತ್ತಮುತ್ತಲು ಅನಗತ್ಯ ವಾಗಿ ಸಂಚರಿಸುತ್ತಿದ್ದ 50 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನುವಶಪಡಿಸಿಕೊಂಡಿದ್ದಾರೆ.

Advertisement

ಕೊರೋನಾ 2ನೇ ಅಲೆ ವ್ಯಾಪಕವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೆ.ಎಂ.ದೊಡ್ಡಿ ಯಲ್ಲಿಮತ್ತಷ್ಟು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವಲ್ಲಿಪೊಲೀಸರು ಮುಂದಾಗಿದ್ದಾರೆ. ಮದ್ದೂರು-ಮಳವಳ್ಳಿ ಮುಖ್ಯರಸ್ತೆ, ಮಂಡ್ಯ-ಹಲಗೂರುರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ಬೈಕ್‌ ಓಡಾಡದಂತೆ ನಿರ್ಬಂಧ ವಿಧಿಸಿದ್ದಾರೆ.

ನಿರ್ಭಂಧಮೀರಿ ಬೈಕ್‌ನಲ್ಲಿ ತೆರಳುತ್ತಿದ್ದ ಯುವಕರುಗಳಿಗೆ ದಂಡ ವಿಧಿಸಿ ಬೈಕ್‌ಗಳನ್ನು ಸೀಜ್‌ಗೊಳಿಸಿದ್ದಾರೆ.ಪಟ್ಟಣದ ಭಾರತೀಕಾಲೇಜು ಗೇಟ್‌, ವಿಜಯಬ್ಯಾಂಕ್‌ ವೃತ್ತ,  ವಿಶ್ವೇಶ್ವರಯ್ಯ ವೃತ್ತದ ಬಳಿ ವಾಹನಸವಾರರ ತಪಾಸಣೆ ನಡೆಸಿ ಜನರಿಗೆ ಲಾಠಿ ರುಚಿತೋರಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಇದನ್ನುಉಲ್ಲಂ ಸಿ ಮತ್ತೂಮ್ಮೆ ರಸ್ತೆಗೆ ಬಂದರೆ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲುಗೊಳಿಸುವುದಾಗಿ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next