ಜಮಖಂಡಿ: ನಗರದಲ್ಲಿ ಜಿಲ್ಲಾಡಳಿತ ಜಾರಿಗೊಳಿಸಿರುವವೀಕೆಂಡ್ ಕರ್ಫ್ಯೂ ತಾಲೂಕಿನಲ್ಲಿ ಯಶಸ್ವಿಯಾಗಿದ್ದು,ಜನ-ವಾಹನಗಳ ಸಂಚಾರವಿಲ್ಲದೇ ಬಹುತೇಕ ಎಲ್ಲಪ್ರಮುಖ ರಸ್ತೆಗಳು, ವೃತ್ತಗಳು ಬಿಕೋ ಎನ್ನುತ್ತಿದ್ದವು.ನಗರದಲ್ಲಿ ಕಂದಾಯ, ಪೊಲೀಸ್ ಇಲಾಖೆ,ನಗರಸಭೆ ಮತ್ತು ಗ್ರಾಮೀಣ ಭಾಗದಲ್ಲಿ ಪೊಲೀಸ್‌ಇಲಾಖೆ ಗ್ರಾಮ ಪಂಚಾಯಿತಿ ಅಧಿಕಾರಿಗಳುಜಂಟಿಯಾಗಿ ಬೆಳಿಗ್ಗೆ ರಸ್ತೆಗಳಿದ ಪರಿಣಾಮ ಜನರುಮನೆಯಿಂದ ಬರಲಿಲ್ಲ.
ಆಸ್ಪತ್ರೆ, ಔಷ ಧ, ಹಾಲುಸಹಿತ ಅಗತ್ಯಗಳಿಗಾಗಿ ಬೆರಳಣಿಕೆಯಷ್ಟು ಜನರುಸಂಚರಿಸುತ್ತಿದ್ದರು.ಕಾರ್ಯಾಚರಣೆಯಲ್ಲಿ ಉಪವಿಭಾಗಾಧಿ ಕಾರಿಡಾ| ಸಿದ್ದು ಹುಲ್ಲೊಳ್ಳಿ, ತಹಶೀಲ್ದಾರ್ ಪ್ರಶಾಂತಚನಗೊಂಡ, ಡಿವೈಎಸ್‌ಪಿ. ಪಾಂಡುರಂಗಯ್ಯ, ಸಿಪಿಐಮಠಪತಿ, ನಗರಸಭೆ ಪೌರಾಯುಕ್ತ ರಾಮಕೃಷ್ಣಸಿದ್ದನಕೊಳ ಇದ್ದರು. ಜಮಖಂಡಿ ಸಾರಿಗೆ ಘಟಕದ105 ಬಸ್‌ಗಳು ಸಂಚರಿಸಿದವು.
ಕೊರೊನಾ ನಿಯಂತ್ರಣಕ್ಕಾಗಿ ತಾಲೂಕಾಡಳಿತನಗರದ ಸರಕಾರಿ ಜಿ.ಜಿ. ಹೈಸ್ಕೂಲ್ ಆವರಣದಲ್ಲಿಹೊಸದಾಗಿ ತರಕಾರಿ ಮಾರುಕಟ್ಟೆ ಆರಂಭಿಸಿದೆ.ಬೆಳಿಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರಎಲ್ಲ ತರಕಾರಿ ಲಭ್ಯವಾಗಲಿದ್ದು, ರೈತರು ನೇರವಾಗಿಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ನಗರಸಭೆಅ ಧಿಕಾರಿಗಳು ತರಕಾರಿ ಮಾರಾಟ ಕೇಂದ್ರ ಉಸ್ತುವಾರಿವಹಿಸಿದ್ದು, ಮಾಸ್ಕ್ ಧರಿಸದೇ ಜನರಿಗೆ ಪ್ರವೇಶನೀಡುತ್ತಿಲ್ಲ. ವ್ಯಾಪಾರಸ್ಥರಿಗೆ ಸಾಮಾಜಿಕ ಅಂತರದಲ್ಲಿಮಾರಾಟ ಮಾಡುವುದಕ್ಕೆ ಜಾಗ ಗುರುತಿಸಿದ್ದು ಅದೇಜಾಗದಲ್ಲಿ ಮಾರಾಟ ನಡೆಯುತ್ತಿದೆ.
ಜನಸಂದಣಿಹೊಂದಿರುವ ಎ.ಜಿ.ದೇಸಾಯಿ, ಅಶೋಕ ವೃತ್ತ,ಹನುಮಾನ ಚೌಕ, ಕಂಚನೂರ ಸರ್ಕಲ್, ಬಸವೇಶ್ವರವೃತ್ತ, ಡಾ| ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತಗಳಲ್ಲಿಜನ-ವಾಹನಗಳ ಸಂಚಾರವಿಲ್ಲದೇ ರಸ್ತೆಗಳು ಬಿಕೋಎನ್ನುತ್ತಿದ್ದವು. ನಾಕಾಬಂದಿ ರಚಿಸಿದ ಹಿನ್ನೆಲೆಯಲ್ಲಿವಾಹನ ಸವಾರರಿಗೆ ದಂಡ ವಿಧಿಸಲಾಯಿತು.