Advertisement

ನಿರೀಕ್ಷೆಯಷ್ಟು ಸಿಗದ ದಂಡದ ಮೊತ್ತ 

03:45 AM Apr 07, 2017 | Team Udayavani |

ನವದೆಹಲಿ: ನೋಟುಗಳ ಅಮಾನ್ಯದ ಬಳಿಕ ಸರ್ಕಾರ ಆರಂಭಿಸಿದ ಆದಾಯ ಘೋಷಣಾ ಯೋಜನೆ(ಐಡಿಎಸ್‌) ಭಾಗ-2ರಡಿ ಆದಾ ಯವನ್ನು ಘೋಷಿಸಿಕೊಂಡು, ಸರ್ಕಾರಕ್ಕೆ ತೆರಿಗೆ ಮೇಲೆ ದಂಡ ಪಾವತಿಸಿದವರ ಸಂಖ್ಯೆ ನಿರೀಕ್ಷೆಗಿಂತ ಬಹಳ ಕಡಿಮೆಯಿದ್ದು, ಕೇವಲ 2,300 ಕೋಟಿ ರೂ.ಗಳಷ್ಟೇ ಸಂಗ್ರಹವಾಗಿದೆ ಎಂಬ ವಿಚಾರ ಬಹಿರಂಗವಾಗಿದೆ.

Advertisement

ಹಣಕಾಸು ಲೆಕ್ಕವನ್ನು ಸರ್ಕಾರಕ್ಕೆ ನೀಡದವರಿಗೆ, ಅದನ್ನು ಬಹಿರಂಗಪಡಿಸುವ ಅವಕಾಶವನ್ನು ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯ ಮೂಲಕ ನೀಡಲಾಗಿತ್ತು. 3 ತಿಂಗಳ ಅವಧಿಯಲ್ಲಿ ತಮ್ಮ ಆದಾಯ ಘೋಷಿಸುವಂತೆ ಸೂಚಿಸಲಾಗಿತ್ತು. ಅದರಂತೆ, ಕೆಲವರು ಆದಾಯವನ್ನು ಘೋಷಿಸಿದ್ದರೂ, ತೆರಿಗೆ ಇಲಾಖೆಯ 1 ಲಕ್ಷ ಕೋಟಿಯ ಗುರಿಗೆ ಹೋಲಿಸಿದರೆ ಸಂಗ್ರಹವಾದ ಮೊತ್ತವು ಅತ್ಯಂತ ಕಡಿಮೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

110 ಕೋಟಿ ಪಾವತಿಸದ ಬ್ಯಾಂಕ್‌ಗಳು: ಈ ನಡುವೆ ನೋಟು ಅಮಾನ್ಯ ಘೋಷಣೆ ಬಳಿಕ ದೇಶಾದ್ಯಂತದ ಎಟಿಎಂಗಳ ಮರುವಿನ್ಯಾಸಕ್ಕಾಗಿ ಹಗಲಿರುಳೆನ್ನದೆ ದುಡಿದ ಕೈಗಳಿಗೆ ಇನ್ನೂ ಕೂಲಿ ಸಿಕ್ಕಿಲ್ಲ. ಎಟಿಎಂಗಳ ಮರುಅಳವಡಿಕೆಯ ಹೊಣೆ ಹೊತ್ತಿದ್ದ ಕ್ಯಾಷ್‌ ಲಾಜಿಸ್ಟಿಕ್ಸ್‌ ಸಂಸ್ಥೆಗಳಿಗೆ ಬ್ಯಾಂಕುಗಳು ಬರೋಬ್ಬರಿ 110 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿವೆ  “ಶೇ.90ರಷ್ಟು ಬ್ಯಾಂಕುಗಳು ನಿಮಗೆ ಹಣ ಒದಗಿಸುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೈತೊಳೆದುಕೊಂಡರೆ, ಇನ್ನು ಕೆಲವು ಬ್ಯಾಂಕುಗಳು ನೀವು ಮಾಡಿರುವ ಕೆಲಸವು ದೇಶದ ಹಿತಕ್ಕಾಗಿ ಮಾ ಡಿದ ಸೇವೆ ಎಂದು ಹೇಳಿ ಜವಾಬ್ದಾರಿ ಯಿಂದ ನುಣುಚಿಕೊಂಡಿವೆ. ಪ್ರತಿ ಎಟಿಎಂ ಗಳಿಗೆ 5,615ರೂ.ಗಳಂತೆ ಪಾವತಿಸಬೇಕಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next