ಬೆಂಗಳೂರು: ನಗರದ ರಸ್ತೆ, ಪಾದಚಾರಿ ಮಾರ್ಗ, ಬಸ್‌ಶೆಲ್ಟರ್ ಹಾಗೂ ಉದ್ಯಾನಗಳಲ್ಲಿ ಖಾಸಗಿ ವ್ಯಕ್ತಿಗಳುಕಾಮಗಾರಿ ವಸ್ತುಗಳನ್ನು ಹಾಕಿ ಸಾರ್ವಜನಿಕಓಡಾಟಕ್ಕೆ ಅಡ್ಡಿಪಡಿಸಿದಲ್ಲಿ, ಅಂತಹ ವಸ್ತುಗಳನ್ನು ವಶಕ್ಕೆ ಪಡೆದು ದಂಡ ವಿಧಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ರಸ್ತೆ ಮೂಲಸೌಕರ್ಯ ವಿಭಾಗದ ಅಧಿಕಾರಿಗಳೊಂದಿಗೆ ಶನಿವಾರ ವರ್ಚುವಲ್ ಸಭೆನಡೆಸಿ ಮಾತನಾಡಿ, ಸಾರ್ವಜನಿಕ ಸ್ಥಳ, ರಸ್ತೆ ಬದಿ,ಪಾದಚಾರಿ ಮಾರ್ಗ, ಉದ್ಯಾನಗಳು ಹಾಗೂ ಬಸ್‌ಶೆಲ್ಟರ್‌ಗಳಲ್ಲಿ ಯಾವುದೇ ಇಲಾಖೆ, ಪ್ರಾಧಿಕಾರ ಅಥವಾಖಾಸಗಿ ಸಂಸ್ಥೆಗಳು ಕಾಮಗಾರಿ ವಸ್ತುಗಳು ಅಥವಾ ಇನ್ಯಾವುದೇ ವಸ್ತುಗಳನ್ನು ಹಾಕುವಂತಿಲ್ಲ. ಒಂದು ವೇಳೆ ವಸ್ತುಗಳನ್ನು ಹಾಕುವ ಮೂಲಕ ಸಾರ್ವಜನಿಕಸಂಚಾರಕ್ಕೆ ಅಡ್ಡಿಪಡಿಸಿದಲ್ಲಿ ಆ ವಸ್ತುಗಳನ್ನು ವಶಕ್ಕೆ ಪಡೆಯಬೇಕು. ಜತೆಗೆ ಸಂಬಂಧಪಟ್ಟವರಿಗೆ ದಂಡ ವಿಧಿಸಬೇಕು. ಜಲಮಂಡಳಿ, ಬೆಸ್ಕಾಂ, ಗೇಲ್ ಸ್ಮಾರ್ಟ್ ಸಿಟಿ ಸೇರಿ ಇನ್ನಿತರ ಇಲಾಖೆಗಳು ಕಾಮಗಾರಿಗಳಿಗೆಅಗತ್ಯವಿರುವ ಸಾಮಗ್ರಿಗಳನ್ನು ಎಲ್ಲೆಂದರಲ್ಲಿ ಹಾಕುತ್ತಿವೆಇದರಿಂದ ಜನರು ಹಾಗೂ ವಾಹನಗಳ ಸಂಚಾರಕ್ಕೆ ಆಗುತ್ತಿರುವ ಸಮಸ್ಯೆ ನಿವಾರಿಸಬೇಕು ಎಂದರು.
ರಸ್ತೆಗುಂಡಿ ಮುಚ್ಚಿ: ಕಣ್ಣೂರಿನ ಬಿಟುಮಿನ್ ಮಿಕ್ಸ್ ಪ್ಲಾಂಟ್ ನಿರ್ವಹಣೆ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ, ನಿತ್ಯ 25 ಲೋಡ್ (ಹಗಲು18 ಲೋಡ್, ರಾತ್ರಿ 7 ಲೋಡ್)ಡಾಂಬರು ತರಿಸಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಮೊದಲು ರಸ್ತೆಗುಂಡಿ ಬಿದ್ದ ಸ್ಥಳ ಸ್ವತ್ಛಗೊಳಿಸಿ ವೆಟ್‌ಮಿಕ್ಸ್ (ಹಸಿ ಜೆಲ್ಲಿ ಮಿಶ್ರಣ) ಹಾಕಿದ ನಂತರ ಡಾಂಬರನ್ನು ಹಾಕಿ ರೋಲರ್ ಮೂಲಕ ಸಮತಟ್ಟು ಮಾಡಬೇಕು. ಡಾಂಬರ್ ಮಿಶ್ರಣದ ಬಿಸಿಹಾಗೂ ಗುಣಮಟ್ಟದ ಬಗ್ಗೆ ಪರಿಶೀಲನೆ ಮಾಡಬೇಕು. ಎಲ್ಲ 8 ವಲಯಗಳ ಆಯುಕ್ತರು ಮತ್ತು ಜಂಟಿಆಯುಕ್ತರು ಖುದ್ದಾಗಿ ಹಗಲು ಮತ್ತು ರಾತ್ರಿ ವೇಳೆರಸ್ತೆಗುಂಡಿ ಮುಚ್ಚುವುದನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ವಲಯಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಇಂಜಿನಿಯರ್‌ಗಳು ಇದ್ದರು.
ಮಳೆ ಹಾನಿ ತಡೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ನಿಗಾವಹಿಸಿ : ನಗರದಲ್ಲಿ 27 ಅತಿ ಸೂಕ್ಷ್ಮ ಹಾಗೂ 45 ಸೂಕ್ಷ್ಮ ಪ್ರದೇಶ ಸೇರಿ ಒಟ್ಟು 72 ಪ್ರವಾಹ ಪೀಡಿತ ಪ್ರದೇಶಗಳಿವೆ. ಮಳೆಬರುವ ವೇಳೆ ಈ ಪ್ರದೇಶಗಳಲ್ಲಿ ಪ್ರವಾಹ ಉಂಟಾಗು ವುದನ್ನು ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮುಂಗಾರು ಆರಂಭಕ್ಕೂ ಮುನ್ನ ಹೂಳು ತೆಗೆಯಬೇಕು. ಪ್ರವಾಹ ತಡೆಯಲು ಮರಳಿನ ಮೂಟೆಗಳು ಹಾಗೂನೀರೆತ್ತುವ ಮೋಟರ್‌ಗಳನ್ನು ಸಿದ್ಧವಾಗಿಟ್ಟು ಕೊಳ್ಳಬೇಕು.ಜತೆಗೆ, ಮಳೆ ನೀರು ಪರ್ಯಾಯ ಮಾರ್ಗ ವಾಗಿಹರಿಯಲು ಪೈಪ್ ಅಳವಡಿಸಿ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ198 ವಾರ್ಡ್‌ಗಳಲ್ಲಿ ರಸ್ತೆ ಬದಿ ಚರಂಡಿಗಳಲ್ಲಿ ಹೂಳೆತ್ತುವಕೆಲಸ, ರಸ್ತೆ ಬದಿ ಸಂಗ್ರಹವಾಗಿರುವ ಮಣ್ಣು, ಶೋಲ್ಡರ್‌ಡ್ರೈನ್ ಸ್ವತ್ಛಗೊಳಿಸಬೇಕು. ರಸ್ತೆ ಮೇಲೆ ಬೀಳುವ ನೀರುಸರಾಗವಾಗಿ ಚರಂಡಿಗೆ ಹರಿದು ಹೋಗುವಂತೆ ವ್ಯವಸ್ಥೆಮಾಡಬೇಕು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದರು.