Advertisement

Pen drive ಹಂಚಿಕೆ: ನವೀನ್‌ ಗೌಡ, ಚೇತನ್‌ ಗೌಡ 3 ದಿನ ಎಸ್‌ಐಟಿ ವಶಕ್ಕೆ

11:11 PM May 29, 2024 | Team Udayavani |

ಹಾಸನ: ಅಶ್ಲೀಲ ವೀಡಿಯೋಗಳನ್ನು ಜಾಲತಾಣಗಳಿಗೆ ಪೋಸ್ಟ್‌ ಮಾಡಿದ ಹಾಗೂ ಪೆನ್‌ಡ್ರೈವ್‌ ಹಂಚಿಕೆ ಆರೋಪದಡಿ ಬೆಂಗಳೂರಿನಲ್ಲಿ ಮಂಗಳವಾರ ಎಸ್‌ಐಟಿ ಬಂಧಿಸಿರುವ ಇಬ್ಬರು ಆರೋಪಿಗಳನ್ನು ಹಾಸನದ ನ್ಯಾಯಾಲಯವು 3 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿದೆ.

Advertisement

ನವೀನ್‌ ಗೌಡ, ಚೇತನ್‌ ಗೌಡ ಮತ್ತು ಪರಶುರಾಮ್‌ ಎಂಬವರನ್ನು ಮಂಗಳವಾರ ಮಧ್ಯಾಹ್ನ ಎಸ್‌ಐಟಿ ವಶಕ್ಕೆ ತೆಗೆದುಕೊಂಡಿತ್ತು. ಆದರೆ ಪರಶುರಾಮ್‌ ಪ್ರಕರಣದಲ್ಲಿ ಆರೋಪಿಯಲ್ಲ ಎನ್ನುವುದನ್ನು ಖಾತರಿಪಡಿಸಿಕೊಂಡು ಅವರನ್ನು ಬಿಡುಗಡೆ ಮಾಡಲಾಗಿದೆ. ಚೇತನ್‌ ಗೌಡ ಮತ್ತು ನವೀನ್‌ ಗೌಡ ಅವರನ್ನು ಮಂಗಳವಾರ ಸಂಜೆಯೇ ಹಾಸನಕ್ಕೆ ಕರೆತಂದ ಎಸ್‌ಐಟಿ, ಪೊಲೀಸ್‌ ಅತಿಥಿಗೃಹದಲ್ಲಿರಿಸಿ ಬುಧವಾರ ಮಧ್ಯಾಹ್ನದವರೆಗೂ ವಿಚಾರಣೆ ನಡೆಸಿತ್ತು.

ಅನಂತರ 2ನೇ ಅಧಿಕ ಹಿರಿಯ ಸಿವಿಲ್‌ ಮತ್ತು ಜೆಎಂಎಫ್ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ವಿಚಾರಣೆಗಾಗಿ ಕಸ್ಟಡಿಗೆ ಕೊಡುವಂತೆ ಕೋರಿತು. ಮನವಿ ಪುರಸ್ಕರಿಸಿದ ನ್ಯಾಯಾಧೀಶರು ಇಬ್ಬರನ್ನೂ ಜೂ. 1ರ ಸಂಜೆ 4.30ರ ವರೆಗೆ ಎಸ್‌ಐಟಿ ವಶಕ್ಕೆ ನೀಡಿ ಆದೇಶ ಹೊರಡಿಸಿದರು. ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದಲ್ಲಿ ಈವರೆಗೆ ಎಸ್‌ಐಟಿ ತಂಡ ಒಟ್ಟು ಐವರನ್ನು ಬಂಧಿಸಿದಂತಾಗಿದೆ.

ಎಫ್ಐಆರ್‌ನಲ್ಲಿ ದಾಖಲಾಗಿರುವ ಇನ್ನೂ ಮೂವರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next