Advertisement

ಅರುಣಾಚಲ ಪ್ರದೇಶ ಮುಖ್ಯಮಂತ್ರಿಯಾಗಿ ಪೆಮಾ ಖಂಡು ಶಪಥ

09:54 AM May 30, 2019 | Sathish malya |

ಇಟಾನಗರ : ಹಿರಿಯ ಬಿಜೆಪಿ ನಾಯಕ ಪೆಮಾ ಖಂಡು ಅವರು ಇಂದು ಬುಧವಾರ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

Advertisement

ಇಲ್ಲಿನ ದೋರ್ಜಿ ಖಂಡು ಕನ್‌ವೆನ್‌ಶನ್‌ ಸೆಂಟರ್‌ನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಬ್ರಿಗೇಡಿಯರ್‌ (ನಿವೃತ್ತ) ಬಿ ಡಿ ಮಿಶ್ರಾ ಅವರು ಪೆಮಾ ಖಂಡು ಅವರಿಗೆ ಪದಭಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಇದೇ ವೇಳೆ ಚೌನಾ ಮೆಯಿನ್‌ ಸೇರಿದಂತೆ 11 ಕ್ಯಾಬಿನೆಟ್‌ ಸಚಿವರೂ ಪ್ರಮಾಣ ವಚನ ಸ್ವೀಕರಿಸಿದರು. ಸಮಾರಂಭದಲ್ಲಿ ಅಸ್ಸಾಂ, ನಾಗಾಲ್ಯಾಂಡ್‌, ಮಣಿಪುರ, ತ್ರಿಪುರ ಮತ್ತು ಮೇಘಾಲಯದ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.

ಕಳೆದ ಎಪ್ರಿಲ್‌ 11ರಂದು ಲೋಕಸಭೆಯ ಮೊದಲ ಹಂತದ ಚುನಾವಣೆಯೊಂದಿಗೇ ರಾಜ್ಯ ವಿಧಾನಸಭಾ ಚುನಾವಣೆಯೂ ನಡೆದಿತ್ತು. 60 ಸದಸ್ಯ ಬಲದ ರಾಜ್ಯವಿಧಾನಸಭೆಯಲ್ಲಿ ಬಿಜೆಪಿ 41 ಸ್ಥಾನಗಳನ್ನು ಗೆದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next