Advertisement

ಮಹಿಳೆಯರಲ್ಲಿ “ಸಂಸ್ಕೃತಿ ಭಿಕ್ಷೆ’ಯಾಚಿಸಿದ ಪೇಜಾವರ ಶ್ರೀ

01:27 AM Nov 09, 2020 | mahesh |

ಉಡುಪಿ: ಸೆಕ್ಯುಲರ್‌ ಹೆಸರಿನಲ್ಲಿ ಸಂಸ್ಕೃತಿ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಮಹಿಳೆಯರು ಸಂಸ್ಕೃತಿ ಸಂಸ್ಕಾರವನ್ನು ಕೊಡಬೇಕಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.  ರವಿವಾರ ಹರಿದ್ವಾರದಲ್ಲಿ ಉತ್ತರಾ ಖಂಡದ ರಾಜ್ಯಪಾಲೆ ಬೇಬಿರಾಣಿ ಮೌರ್ಯ ಅವರನ್ನು ಭೇಟಿ ಮಾಡಿದ ಸಂದರ್ಭ, ರಾಜ್ಯಪಾಲೆಯವರು ಸ್ವಾಮೀಜಿಯವರಲ್ಲಿ ಮಹಿಳೆಯರಿಗೆ ಸಂದೇಶವೇನು ಎಂದು ಕೇಳಿದಾಗ ಮೇಲಿನಂತೆ ಉತ್ತರಿಸಿದರು.

Advertisement

ಕೃಷ್ಣನಲ್ಲಿ ಗೋಪಾಲಕರು ಹಸಿವೆ
ಯಾಗುತ್ತಿದೆ ಎಂದಾಗ ಯಾಗ ಶಾಲೆಗೆ ಕಳುಹಿಸಿದ. ಆಗ ಪುರುಷರು ಆಹಾರವನ್ನು ಕೊಡದಿದ್ದಾಗ ಋಷಿ ಪತ್ನಿಯವರು ಆಹಾರ ಕೊಟ್ಟರು. ಅದೇ ರೀತಿ ಕೃಷ್ಣನ ನಾಡಿನಿಂದ ಬಂದ ನಾವು ಮಹಿಳೆಯರಿಂದ “ಸಂಸ್ಕೃತಿ ಭಿಕ್ಷೆ’ಯನ್ನು ಕೇಳುತ್ತಿದ್ದೇವೆ. ಸೆಕ್ಯುಲರ್‌ ನೀತಿಯಿಂದ ಶಾಲೆಗಳಲ್ಲಿ ಸಿಗದ ಸಂಸ್ಕೃತಿ ಶಿಕ್ಷಣ ತಾಯಂದಿರಿಂದ ಸಿಗಬೇಕು ಎಂದರು.

ರಾಜ್ಯಪಾಲೆಯವರು ತಾನು
ಹಿಂದೆ ಉಮಾಭಾರತಿಯವರ ಮೂಲಕ ಪೇಜಾವರ ಹಿರಿಯ ಸ್ವಾಮೀಜಿಯವರನ್ನು ಭೇಟಿ ಮಾಡಿದ್ದನ್ನು ಸ್ಮರಿಸಿಕೊಂಡರು. ರಾಜ್ಯಪಾಲರನ್ನು ಉಡುಪಿಗೆ ಸ್ವಾಮೀಜಿ ಆಹ್ವಾನಿಸಿದರು.  ಉತ್ತರಾಖಂಡದ ನಗರಾಭಿವೃದ್ಧಿ ಸಚಿವ ಮದನ್‌ ಕೌಶಿಕ್‌ ಅವರು ಸ್ವಾಮೀಜಿಯವರನ್ನು ಭೇಟಿಯಾಗಿ ಹರಿದ್ವಾರದ ಕೃಷ್ಣಮಂದಿರದ ಹಿಂದೆ ಘಾಟ್‌ ನಿರ್ಮಿಸಲು ಸಹಕರಿಸುವುದಾಗಿ ಮತ್ತು ಒಂದು ಮಾರ್ಗಕ್ಕೆ ಗುರುಗಳ ಹೆಸರನ್ನು ನಾಮಕರಣ ಮಾಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next