Advertisement
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಪ್ರಧಾನಿಯವರು ಅಧ್ಯಾತ್ಮಿಕ ವಿಚಾರದತ್ತ ಹೆಚ್ಚು ಒಲವು ಹೊಂದಿದ್ದಾರೆ. ನಮ್ಮಲ್ಲಿ ದೀಕ್ಷಾ ಬದ್ಧರಾಗುವುದು ಅಂತಿದೆ. ನಮಗನ್ನಿಸಿದಂತೆ ಮೋದಿಯವರು ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಿದ್ದಾರೆ. ಇದರಿಂದ ಅವರು ನೈತಿಕವಾಗಿ ಸಂಪೂರ್ಣ ಜವಾಬ್ದಾರಿ ಹೊಂದಿದಂತಾಗುತ್ತದೆ ಎಂದರು.
ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಚಳವಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈಗ ನಡೆಯುತ್ತಿರುವುದು ರೈತ ಚಳವಳಿ ಅಲ್ಲ. ರೈತ ಚಳವಳಿ ಮುಖವಾಡದಲ್ಲಿ ಇನ್ನೇನೋ ನಡೀತಿದೆ. ಪ್ರಧಾನಿ ಮೋದಿಯವರು ಪ್ರತಿದಿನ ಮಾತುಕತೆಗೆ ಕರೆಯುತ್ತಿದ್ದಾರೆ. ಯಾವ ಅಂಶದಲ್ಲಿ ವಿರೋಧ ಇದೆ. ಆ ಬಗ್ಗೆ ಚರ್ಚೆ ಮಾಡಿ; ಪರಿಹರಿಸೋಣ ಎನ್ನುತ್ತಿದ್ದಾರೆ. ಆದರೆ ರೈತ ಹೋರಾಟ ಹಳಿ ತಪ್ಪಿ ಹೋಗುತ್ತಿದೆ. ಹೀಗಾಗಿ ಇದಕ್ಕೆ ನಮ್ಮ ಸಂಪೂರ್ಣ ಸಹಮತ ಇಲ್ಲ ಎಂದು ಹೇಳಿದರು.