Advertisement

ಭಗವಾನ್ ಮುಖಕ್ಕೆ ಮಸಿ ಬಳಿದಿದ್ದು ಘಟನೆ ಅಲ್ಲ, ಪ್ರತಿಭಟನೆ: ಪೇಜಾವರ ಶ್ರೀ

03:21 PM Feb 05, 2021 | Team Udayavani |

ರಾಯಚೂರು: ಚಿಂತಕ ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದಿದ್ದು ಘಟನೆ ಅಲ್ಲ ಅದು ಪ್ರತಿಭಟನೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ವ್ಯಾಖ್ಯಾನಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಕೂಡ ಸಮಾಜವನ್ನು ಉದ್ರೇಕಗೊಳಿಸುವ ಕೆಲಸ ಮಾಡಬಾರದು. ಭಗವಾನ್ ಅವರು ಸಮಾಜ ಉದ್ರೇಕಗೊಳಿಸುವ ರೀತಿ ನಡೆದುಕೊಂಡಿದ್ದೇ ಇಂದು ಈ ರೀತಿ ಪ್ರತಿಭಟನೆ ವ್ಯಕ್ತವಾಗಿದೆ. ಆ ರೀತಿ ಮಾಡಿ ಕೀಳುಮಟ್ಟದ ಪ್ರಚಾರ ಪಡೆಯಬಾರದು. ಈ ಘಟನೆಯಲ್ಲಿ ಇಬ್ಬರೂ ತಪ್ಪು ಮಾಡಿದ್ದಾರೆ ಎಂದರು.

ಇದನ್ನೂ ಓದಿ:ರೈತರ ಪ್ರತಿಭಟನೆ: ಗ್ರೆಟಾಗೆ ಟೂಟ್ ಕಿಟ್ ರಚಿಸಿ ಸಂಚು ರೂಪಿಸಿದ್ದು ಯಾರು?ಹೆಸರು ಬಹಿರಂಗ

ಭಾರತದ ಧ್ವಜವನ್ನು ಸುಟ್ಟು ಹಾಕುವವರು, ಅಪಮಾನ ಮಾಡುವವರು ರೈತರಾ? ಖಲಿಸ್ತಾನದ ಪರ ಮತ್ತು ವಿದೇಶದ ಪರ ಘೋಷಣೆ ಕೂಗುವರನ್ನು ರೈತರು ಎಂದು ನಾನು ಒಪ್ಪುವುದಿಲ್ಲ. ದೇಶ ವಿರೋಧಿ ಕೃತ್ಯಗಳನ್ನು ಬೆಂಬಲಿಸುವುದು ಕೂಡ ದೇಶದ್ರೋಹವೇ. ಇಂಥ ಕೃತ್ಯಕ್ಕೆ ನಾವು ಪುಷ್ಟಿ ಕೊಡಬಾರದು. ನಿಜವಾದ ರೈತರು ಹೊಲದಲ್ಲಿ ದುಡಿಯುತ್ತಿದ್ದಾರೆ ಎಂದರು.

ಜಾತಿ ಆಧಾರದಡಿ ಮೀಸಲಾತಿ ನೀಡುವುದಕ್ಕಿಂತ ಆರ್ಥಿಕ ಅಸಮಾನತೆ ಆಧಾರದಡಿ ಮೀಸಲಾತಿ ನೀಡುವುದು ಸೂಕ್ತ. ಮೀಸಲಾತಿ ಇದ್ದಾಗ ಎಲ್ಲರಿಗೂ ಬೇಕು. ಯಾರು ಮೀಸಲಾತಿ ಬೇಡ ಅಂತ ಹೇಳಲ್ಲ. ಎಲ್ಲ ಸಮುದಾಯದಲ್ಲಿ ಬಡವರು, ದೀನರು ಇದ್ದಾರೆ. ಆರ್ಥಿಕವಾಗಿ ಯಾರು ದುರ್ಬಲರೋ ಅವರನ್ನು ಬಲಪಡಿಸಬೇಕು. ಜಾತಿ ಆಧರಿತ ಮೀಸಲಾತಿಗೆ ಬದಲು ಆರ್ಥಿಕ ಮೀಸಲಾತಿಗೆ ಒತ್ತು ನೀಡಬೇಕು ಎಂದು ಅವರು ಹೇಳಿದರು.

Advertisement

ಇದನ್ನೂ ಓದಿ: ಶಿರಾಡಿ ಘಾಟ್ ಎರಡನೇ ತಿರುವಿನಲ್ಲಿ ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್: ಸಂಚಾರ ಸ್ಥಗಿತ

Advertisement

Udayavani is now on Telegram. Click here to join our channel and stay updated with the latest news.

Next