Advertisement

ಪೇಜಾವರ ಶ್ರೀಗಳಿಗೆ ಪದ್ಮವಿಭೂಷಣ; ಹಾಜಬ್ಬ, ತುಳಸೀಗೌಡಗೆ ಪದ್ಮಶ್ರೀ ಗೌರವ

09:56 AM Jan 26, 2020 | sudhir |

– ರಾಜ್ಯದ ಒಂಭತ್ತು ಮಂದಿಗೆ ಪದ್ಮ ಗೌರವ
– ಕ್ರೀಡೆಯಲ್ಲಿ ಎಂ.ಪಿ.ಗಣೇಶ್‌ಗೆ ಪದ್ಮಶ್ರೀ
– ಈ ಬಾರಿಯೂ ಎಲೆಮರೆಯ ಕಾಯಿಗಳಿಗೆ ಪ್ರಶಸ್ತಿ
– ಮೇರಿ ಕೋಂಗೆ ಪದ್ಮವಿಭೂಷಣ, ಸಿಂಧುಗೆ ಪದ್ಮಭೂಷಣ
– ಜೇಟ್ಲಿ , ಸುಷ್ಮಾ, ಜಾರ್ಜ್‌ ಫ‌ರ್ನಾಂಡೀಸ್‌ಗೂ ಮರಣೋತ್ತರ ಪದ್ಮ ಗೌರವ

Advertisement

ನವದೆಹಲಿ: ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಸೇರಿದಂತೆ ರಾಜ್ಯದ ಒಂಭತ್ತು ಮಂದಿಗೆ ಪದ್ಮ ಗೌರವ ಸಂದಿದೆ.

ಗಣರಾಜ್ಯೋತ್ಸವ ಮುನ್ನಾದಿನವಾದ ಶನಿವಾರ ರಾತ್ರಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಬಾರಿ ಏಳು ಮಂದಿಗೆ ಪದ್ಮವಿಭೂಷಣ, 16 ಮಂದಿಗೆ ಪದ್ಮಭೂಷಣ ಮತ್ತು 118 ಮಂದಿಗೆ ಪದ್ಮಶ್ರೀ ಗೌರವ ನೀಡಲಾಗಿದೆ. ಇದರಲ್ಲಿ 34 ಮಂದಿ ಮಹಿಳೆಯರು ಮತ್ತು 18 ಮಂದಿ ವಿದೇಶಿಯರು ಸೇರಿದ್ದಾರೆ. ಅಷ್ಟೇ ಅಲ್ಲ, 12 ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ.

ಈ ಬಾರಿ ಕರ್ನಾಟಕದ ಎಂಟು ಮಂದಿಗೆ ಪದ್ಮಶ್ರೀ ಗೌರವ ದೊರೆತಿದೆ. ಅದರಲ್ಲೂ ಸಮಾಜ ಸೇವೆ ವಿಭಾಗದಲ್ಲಿ ತುಳಸಿಗೌಡ ಮತ್ತು ಹರೇಕಲಾ ಹಾಜಬ್ಬ ಅವರಿಗೆ ಪ್ರಶಸ್ತಿ ನೀಡುವ ಮೂಲಕ ತೆರೆ ಮರೆಯ ಕಾಯಿಯಂತಿದ್ದವರನ್ನೂ ಗುರುತಿಸಲಾಗಿದೆ.

ಕರ್ನಾಟಕಕ್ಕೆ 8 ಗೌರವ
ಪದ್ಮವಿಭೂಷಣ
1. ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು, ಪೇಜಾವರ ಮಠ, ಉಡುಪಿ-

Advertisement

ಪದ್ಮಶ್ರೀ
2. ಎಂ.ಪಿ.ಗಣೇಶ್‌, ಕ್ರೀಡೆ
3. ಡಾ. ಬೆಂಗಳೂರು ಗಂಗಾಧರ – ವೈದ್ಯಕೀಯ
4. ಭರತ್‌ ಗೋಯೆಂಕಾ, ವ್ಯಾಪಾರ ಮತ್ತು ಉದ್ಯಮ
5. ತುಳಸಿಗೌಡ, ಸಮಾಜ ಸೇವೆ
6. ಹರೇಕಲಾ ಹಾಜಬ್ಬ, ಸಮಾಜಸೇವೆ
7. ಕೆ.ವಿ.ಸಂಪತ್‌ಕುಮಾರ್‌ ಮತ್ತು ವಿದುಶಿ ಜಯಲಕ್ಷ್ಮೀ ಕೆ.ಎಸ್‌. – ಸಾಹಿತ್ಯ, ಶಿಕ್ಷಣ ಮತ್ತು ಪತ್ರಿಕೋದ್ಯಮ
8. ವಿಜಯ ಸಂಕೇಶ್ವರ, ವ್ಯಾಪಾರ ಮತ್ತು ಉದ್ಯಮ

ಜೇಟ್ಲಿ, ಸುಷ್ಮಾಗೆ ಮರಣೋತ್ತರ ಪ್ರಶಸ್ತಿ
ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿ ಎಂದು ಕರೆಸಿಕೊಂಡಿರುವ ಪದ್ಮವಿಭೂಷಣ ಪ್ರಶಸ್ತಿಯನ್ನು ಈ ಬಾರಿ ಏಳು ಮಂದಿಗೆ ನೀಡಲಾಗಿದೆ. ಇದರಲ್ಲಿ ಜಾರ್ಜ್‌ ಫ‌ರ್ನಾಂಡೀಸ್‌, ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌, ಪೇಜಾವರ ಶ್ರೀಗಳಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ. ಉಳಿದಂತೆ ಬಾಕ್ಸಿಂಗ್‌ ತಾರೆ ಮೇರಿ ಕೋಂ, ಮಾರಿಷಸ್‌ನ ಅನಿರುದ್ಧ್ ಜಗನ್ನಾಥ್‌, ಉತ್ತರ ಪ್ರದೇಶದ ಚನೌ°ಲಾಲ್‌ ಮಿಶ್ರಾಗೂ ಪದ್ಮವಿಭೂಷಣ ಪ್ರಶಸ್ತಿ ಸಂದಿದೆ. ಇನ್ನು ಮನೋಹರ್‌ ಪರಿಕ್ಕರ್‌ ಅವರಿಗೂ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next