Advertisement

ಮಡಿಕೇರಿ: ಭೂಕುಸಿತ ಸ್ಥಳಗಳಿಗೆ ಪೇಜಾವರ ಶ್ರೀ ಭೇಟಿ; ಸಾಂತ್ವನ

09:42 AM Oct 26, 2018 | Team Udayavani |

ಉಡುಪಿ/ಮಡಿಕೇರಿ: ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಕೊಡಗು ಜಿಲ್ಲೆಯ ಮೂರ್ನಾಡು ಮತ್ತು ಕೇರಳದ ಎರ್ನಾಕುಳಂ, ತ್ರಿಪುಣತ್ರಯಿಗೆ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಭೇಟಿ ನೀಡಿ ಜನರಿಗೆ ಸಾಂತ್ವನ ಹೇಳಿದರು.

Advertisement

ಬುಧವಾರ ಎರ್ನಾಕುಳಂ ಸಂತ್ರಸ್ತರಿಗೆ 3.6 ಲ.ರೂ., ತ್ರಿಪುಣತ್ರಯಿಯಲ್ಲಿ 5.1 ಲ.ರೂ. ಮೊತ್ತವನ್ನು ಪೇಜಾವರ ಶ್ರೀಗಳು ವಿತರಿಸಿದರು. ಗುರುವಾರ ಮೂರ್ನಾಡು ಸಮೀಪದ ಬಲಮುರಿಯಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿದ ಶ್ರೀಗಳು ತಾವು ಘೋಷಿಸಿದ 10 ಲ.ರೂ. ಮೊತ್ತವನ್ನು ಹೇಗೆ ವಿನಿಯೋಗಿಸಬೇಕೆಂದು ಚರ್ಚಿಸಿದರು. ಸ್ವ ಉದ್ಯೋಗ ಕೈಗೊಳ್ಳಲು ಮತ್ತು ಯಾವುದಾದರೂ ಒಂದು ಶಾಲೆಗೆ ಬೇಕಾದ ಪರಿಕರಗಳನ್ನು ನೀಡಲು ನಿರ್ಧರಿಸಲಾಯಿತು.

ಮಕ್ಕಂದೂರು, ಉದಯಗಿರಿ ಮತ್ತು ಮದೆನಾಡು ಗ್ರಾಮ ಗಳಲ್ಲಿನ ಭೂಕುಸಿತ ಪ್ರದೇಶಗಳಿಗೆ ಸ್ವಾಮೀಜಿ ಭೇಟಿ ನೀಡಿ ಅನಾಹುತಗಳನ್ನು ವೀಕ್ಷಿಸಿದರು. ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಗದೀಶ್‌, ಕಾರ್ಯನಿರ್ವಹಣಾಧಿಕಾರಿ ಎಸ್‌.ಎಸ್‌. ಸಂಪತ್‌ ಕುಮಾರ್‌, ಮಾಜಿ ಅಧ್ಯಕ್ಷ ಕೆ.ಎಸ್‌. ರಮೇಶ್‌ ಹೊಳ್ಳ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next