Advertisement

ಶೀರೂರು ಶ್ರೀಗಳಿಗೆ ಸ್ತ್ರೀ ಸಂಗ, ಮದ್ಯಪಾನ ಚಟವಿತ್ತು!: ಪೇಜಾವರ ಶ್ರೀ 

05:01 PM Jul 20, 2018 | Team Udayavani |

ಉಡುಪಿ: ಅಸ್ತಂಗತರಾಗಿರುವ ಶೀರೂರು  ಮಠದ ಲಕ್ಷ್ಮೀವರ ತೀರ್ಥ ಶ್ರೀಪಾದರು ಸ್ತ್ರೀ ಸಂಗ ಹೊಂದಿದ್ದರು. ಮದ್ಯಪಾನ ಮಾಡುತ್ತಿದ್ದರು ಅವರನ್ನು ಸನ್ಯಾಸಿ ಎಂದು ಒಪ್ಪುವುದು ಹೇಗೆ ಎಂದು ಪೇಜಾವರ ಮಠಾಧೀಶ ,ಅಷ್ಠಮಠಗಳಲ್ಲಿನ ಹಿರಿಯ ಯತಿ ವಿಶ್ವೇಶ ತೀರ್ಥ ಶ್ರೀಗಳು ಹೇಳಿಕೆ ನೀಡಿದ್ದಾರೆ. 

Advertisement

ಉಡುಪಿಯಲ್ಲಿ  ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೇರೆ ಊರಲ್ಲಿ ಇದ್ದ ಕಾರಣ ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದರು. 

ನಮ್ಮ ಪದ್ಧತಿಯಲ್ಲಿ ಸಾವಿಗೆ ಹೋಗವ ಕ್ರಮ ಇಲ್ಲ. ಅವರ ಸಾವಿಗೆ ವಿಷ ಪ್ರಾಶನವೋ, ಆಹಾರ ದೋಷವೋ ಗೊತ್ತಿಲ್ಲ. ಪೊಲೀಸರು ವಿಚಾರಣೆಗೆ ಕರೆದರೆ ಹೋಗುತ್ತೇನೆ ಎಂದರು. 

ಶೀರೂರು ಶ್ರೀಗಳಿಗೆ ತಾರುಣ್ಯದಲ್ಲಿ ಸ್ತ್ರೀಯರ ಸಂಪರ್ಕವಿತ್ತು. ಅವರು ಮಠಾಧೀಶರಿಗೆಲ್ಲಾ ಮಕ್ಕಳಿದ್ದರು ಎಂದು ಹೇಳಿಕೆ ನೀಡಿದ್ದರು. ಅದು ಎಲ್ಲರಿಗೂ ಅಪಾರವಾದ ನೋವು ತಂದಿತ್ತು ಎಂದರು. 
 
ಶೀರೂರು ಶ್ರೀಗಳಿಗೆ ಮಕ್ಕಳಿದ್ದಾರೆ ಎಂದು ಅನಾಮಿಕರೊಬ್ಬರು ಹೇಳಿದ್ದರು.ಈ ಬಗ್ಗೆ 10 ಸಾವಿರ ಕರಪತ್ರ ಹಂಚುವುದಾಗಿ ಹೇಳಿದ್ದರು. ಆದರೆ ಅನಾಮಿಕರು ಮಾಡಿದ ಆರೋಪಗಳೆಲ್ಲವೂ ಸತ್ಯ ಎನ್ನುವದಕ್ಕೆ ಆಗುವುದಿಲ್ಲ ಎಂದರು. 

ಅವರು ಸನ್ಯಾಸ ಧರ್ಮ ಪಾಲಿಸುತ್ತಿರಲಿಲ್ಲ. ವಿಪರೀತ ಮದ್ಯಪಾನ ಮಾಡುತ್ತಿದ್ದರು.  ಸ್ತ್ರೀಸಂಗ ಮಾಡಿ ಸನ್ಯಾಸ ಧರ್ಮ ಮೀರಿದ್ದರು. ನಾನೇ ಅವರಿಗೆ ದುಶ್ಚಟ ಬಿಡುವಂತೆ ಹೇಳಿದ್ದೆ ಎಂದರು.

Advertisement

ಶಿಷ್ಯ ಸ್ವೀಕಾರ ಮಾಡಿ ಎಂದು ಇತರ ಮಠಾಧೀಶರು ಆಗ್ರಹಿಸಿದ್ದರು.ನಾನು ಆ ಸಭೆ ಯಲ್ಲಿ ಭಾಗವಹಿಸಿರಲಿಲ್ಲ ಎಂದು ಹೇಳಿದರು. 

ಶೀರೂರು ಮಠದ ಪಟ್ಟದ ದೇವರಾದ ಅನ್ನ ವಿಟ್ಠಲ ಮೂರ್ತಿಯನ್ನು ಕೊಡಬಾರದು ಎಂದು ನಾನು ಹೇಳಿರಲಿಲ್ಲ ಎಂದರು. 

ಅವರಲ್ಲಿ ಅನೇಕ ಒಳ್ಳೆಯ ಗುಣಗಳಿದ್ದವು. ಉತ್ತಮ ಕಲಾವಿದರಾಗಿದ್ದರು. ವಿದ್ಯಾರ್ಥಿಗಳಿಗೆ ಅತೀ ಹೆಚ್ಚಿನ ಸಹಾಯ ಮಾಡಿದ್ದರು. ಬ್ರಾಹ್ಮಣೇತರರೊಂದಿಗೂ ಬೆರೆತು ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಎಂದರು. 

ಶೀರೂರು ಶ್ರೀಗಳ ನಿಧನದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕೇಮಾರು ಶ್ರೀ, ಸಂತೋಷ್‌ ಗುರೂಜಿ ಅವರು ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು ಎಂದು ಪೇಜಾವರ ಶ್ರೀಗಳು ಅಭಿಪ್ರಾಯ ಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next