Advertisement
ಸೋಮವಾರ ಬಿಡುಗಡೆಯಾದ ಹೊಸ ಪಟ್ಟಿಯ ಪ್ರಕಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣ ರಣತಂತ್ರಗಾರ ಪ್ರಶಾಂತ್ ಕಿಶೋರ್, ಮಾಜಿ ಚುನಾವಣ ಆಯುಕ್ತ ಅಶೋಕ್ ಲಾವಾಸಾ, ಕೇಂದ್ರದ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಪ್ರಹ್ಲಾದ್ ಪಟೇಲ್, ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ, ನಿವೃತ್ತ ಸಿಜೆಐ ರಂಜನ್ ಗೊಗೋಯ್ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದ ಸುಪ್ರೀಂ ಕೋರ್ಟ್ ಸಿಬಂದಿಯ ಕುಟುಂಬಸ್ಥರ ಫೋನ್ ಗಳನ್ನು ಕದ್ದಾಲಿಸಲಾಗುತ್ತಿತ್ತು ಯಾ ಇವರನ್ನು ಸಂಭಾವ್ಯ ಗುರಿಗಳೆಂದು ಪಟ್ಟಿ ಮಾಡಲಾಗಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ವಿಚಾರ ಬಯಲಾಗುತ್ತಿದ್ದಂತೆಯೇ ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಕೇಂದ್ರದ ವಿರುದ್ಧ ಹರಿ ಹಾಯ್ದಿವೆ. ಗೃಹ ಸಚಿವ ಅಮಿತ್ ಶಾ ಅವ ರನ್ನು ವಜಾ ಮಾಡಬೇಕು, ಮೋದಿ ಪಾತ್ರದ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿವೆ.
Related Articles
ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ಕದ್ದಾಲಿಕೆ ಜತೆ ಸರಕಾರ ಅಥವಾ ಬಿಜೆಪಿ ನಂಟು ಹೊಂದಿರುವ ಬಗ್ಗೆ ಸಾಕ್ಷ್ಯ ಇಲ್ಲ. ದತ್ತಾಂಶದಲ್ಲಿ ಮೊಬೈಲ್ ಸಂಖ್ಯೆ ಇದ್ದಾಕ್ಷಣ ಅವರೆಲ್ಲರ ಸಂಭಾಷಣೆಗಳನ್ನು ಕದ್ದಾಲಿಸಲಾಗಿದೆ ಎಂದು ಹೇಳಲಾಗದು ಎಂದು ಈ ವರದಿಯನ್ನು ಬಹಿರಂಗ ಪಡಿಸಿರುವವರು ಕೂಡ ಹೇಳಿದ್ದಾರೆ ಎಂದಿದ್ದಾರೆ.
Advertisement
ಸಂಸತ್ ಅಧಿವೇಶನ ಆರಂಭವಾಗುವ ಹಿಂದಿನ ದಿನವೇ ಹೀಗೊಂದು ವರದಿ ಬರುತ್ತಿದೆ ಎಂದರೆ ಅದನ್ನು ಕಾಕತಾಳೀಯ ಎಂದು ಕರೆಯಲು ಸಾಧ್ಯವೇ ಇಲ್ಲ. ಈ ಹಿಂದೆಯೂ ಇದೇ ರೀತಿ ಆಧಾರ ರಹಿತ ಆರೋಪ ಮಾಡಲಾಗಿತ್ತು.-ಅಶ್ವನಿ ವೈಷ್ಣವ್, ಕೇಂದ್ರ ಐಟಿ ಸಚಿವ