Advertisement
ಇಂದು(ಶುಕ್ರವಾರ, ಜುಲೈ 23) ಸಂಸತ್ತಿನ ಆವರಣದೊಳಗಿನ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಪೆಗಾಸಸ್ ವಿವಾದದ ವಿರುದ್ಧ ಕಾಂಗ್ರೆಸ್, ಡಿಎಂಕೆ ಮತ್ತು ಶಿವಸೇನೆ ಸಂಸದರು ಜಂಟಿಯಾಗಿ ಪ್ರತಿಭಟನೆ ನಡೆಸಿದರು.
Related Articles
Advertisement
ಪೆಗಾಸಸ್ ನನ್ನು ಕೇಂದ್ರ ಬಿಜೆಪಿ ರಾಜಕೀಯವಾಗಿ ಬಳಸಿದೆ. ಕರ್ನಾಟಕದ ರಾಜಕಾರಣದಲ್ಲಿಯೂ ಅವರು ಈ ಅಸ್ತ್ರವನ್ನು ಬಳಸಿದ್ದಾರೆ. ದೇಶದ ಸರ್ವೋಚ್ಛ ನ್ಯಾಯಾಲಯದ ಮೇಲೂ ಕೂಡ ಈ ಅಸ್ತ್ರವನ್ನು ಪ್ರಯೋಗಿಸಿರುವುದು ಅವರ ಕ್ರಿಮಿನಲ್ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ. ಇದು ನಿಜವಾದ ದೇಶದ್ರೋಹದ ಕೆಲಸ. ಎಂದು ಸಿಡಿದಿದ್ದಾರೆ.
ದಿ ವೈರ್‌ನಲ್ಲಿ ಪ್ರಕಟವಾದ ಪೆಗಾಸಸ್ ಕುರಿತಾದ ಸುದ್ದಿ ಸಂಚಲನ ಸೃಷ್ಟಿಸಿದ ನಂತರ, ಪೆಗಾಸಸ್ ಸ್ಪೈವೇರ್ ಬಳಸುವ ಅಪರಿಚಿತ ಏಜೆನ್ಸಿಯ ಕಣ್ಗಾವಲುಗಾಗಿ ಸಂಭವನೀಯ ಗುರಿಗಳ ಸೋರಿಕೆಯಾದ ಪಟ್ಟಿಯಲ್ಲಿ ಹಲವಾರು ಭಾರತೀಯ ರಾಜಕಾರಣಿಗಳು, ಪತ್ರಕರ್ತರು, ವಕೀಲರು ಮತ್ತು ಕಾರ್ಯಕರ್ತರ ಹೆಸರುಗಳು ಕಾಣಿಸಿಕೊಂಡಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಇನ್ನು, ಕೇಂದ್ರ ಮತ್ತು ಪ್ರತಿಪಕ್ಷಗಳ ನಡುವಿನ ಪೆಗಾಸಸ್ ವಿಷಯದ ಬಗ್ಗೆ ನಿರಂತರ ವಿವಾದದ ನಡುವೆ. ಟಿಎಂಸಿ ಸಂಸದ ಸಂತನು ಸೇನ್ ಅವರು ರಾಜ್ಯಸಭೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಂದ ಪೆಗಾಸಸ್ ವಿಷಯದ ಬಗ್ಗೆ ಭಾಷಣ ಪ್ರತಿಯನ್ನು ಕಸಿದುಕೊಂಡು ಹರಿದು ಹಾಕಿದ್ದರು. ಸಂಸದ ಸಂತನು ಸೇನ್ ಅವರನ್ನು ರಾಜ್ಯ ಸಭೆಯಿಂದ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ : ಧುಮ್ಮಿಕ್ಕಿ ಹರಿದ ದೂಧಸಾಗರ ಜಲಪಾತ : ಬೆಳಗಾವಿ-ಗೋವಾ ರೈಲು ಸಂಚಾರ ಸ್ಥಗಿತ