Advertisement

ಪೆಗಾಸಸ್‌ ವಿವಾದ : ಉನ್ನತ ಸಮಿತಿ ರಚಿಸಿದ ಇಸ್ರೇಲ್‌

11:33 AM Jul 22, 2021 | Team Udayavani |

ಹೊಸದಿಲ್ಲಿ : ಜಾಗತಿಕ ಮಟ್ಟದಲ್ಲಿ ವಿವಾದ ಹುಟ್ಟುಹಾಕಿರುವ ಇಸ್ರೇಲಿ ಮೂಲದ ಪೆಗಾಸಸ್‌ ಸ್ಪೈವೇರ್‌ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಇಸ್ರೇಲ್‌ ಅಂತರ್‌ ಸಚಿವಾಲಯಗಳ ಸಮಿತಿಯೊಂದನ್ನು ರಚಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Advertisement

ಪ್ರಧಾನಿ ನಫ್ತಾಲಿ ಬೆನೆಟ್‌ ಅವರಿಗೆ ಉತ್ತರದಾಯಿಯಾಗಿರುವ ರಾಷ್ಟ್ರೀಯ ಭದ್ರತ ಮಂಡಳಿ ಈ ಸಮಿತಿಯ ನೇತೃತ್ವ ವಹಿಸಿದೆ. ಅಲ್ಲಿನ ರಕ್ಷಣ ಸಚಿವಾಲಯಕ್ಕಿಂತ ಹೆಚ್ಚು ಪರಿಣತಿ ಹೊಂದಿರುವ ಸದಸ್ಯರು ಈ ಸಮಿತಿಯಲ್ಲಿದ್ದಾರೆ ಎನ್ನಲಾಗಿದೆ. ಪೆಗಾಸಸ್‌ ಸ್ಪೆ „ವೇರ್‌ ಸೃಷ್ಟಿಸಿರುವ ಎನ್‌ಎಸ್‌ಒ ಸಂಸ್ಥೆ ರಕ್ಷಣ ಸಚಿವಾಲಯದ ಅಧೀನದಲ್ಲಿದೆ.

ಭಾರತ ಮಾತ್ರವಲ್ಲದೆ, ಮೆಕ್ಸಿಕೊ, ಫ್ರಾನ್ಸ್‌, ಇರಾಕ್‌, ಮೊರಾಕ್ಕೊಗಳಲ್ಲಿಯೂ ಪೆಗಾಸಸ್‌ ವಿವಾದದ ಕಿಡಿ ಹೊತ್ತಿಸಿದ್ದು, ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಬಹುದು ಎಂಬ ಹಿನ್ನೆಲೆ ಯಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next