ಕನ್ನಡ ಚಿತ್ರ ‘ಪೆದ್ರೋ’ ಇದೀಗ ‘ಬುಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ಕ್ಕೆ ಆಯ್ಕೆಯಾಗಿದೆ. ಈ ಮೂಲಕ BIFF ಗೆ ಆಯ್ಕೆಯಾದ ಪ್ರಥಮ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಡೆದುಕೊಂಡಿದೆ.
‘ಪೆದ್ರೋ’ ವನ್ನು ನಟೇಶ್ ಹೆಗಡೆ ಎಂಬುವರ ನಿರ್ದೇಶಿಸಿದ್ದಾರೆ. ರಿಷಬ್ ಶೆಟ್ಟಿಯವರು ಈ ಚಿತ್ರಕ್ಕೆ ಹಣ ಹಾಕಿ ನಿರ್ಮಾಣ ಮಾಡಿದ್ದಾರೆ.
ಇನ್ನು ಪೆದ್ರೋ ಸಿನಿಮಾ 2019 ರಲ್ಲಿ ಎನ್‌ಎಫ್‌ಡಿಸಿಯ ಫಿಲ್ಮ್ ಬಜಾರ್ ವರ್ಕ್ ಇನ್ ಪ್ರಾಗ್ರೆಸ್ ಲ್ಯಾಬ್‌ಗೆ ಆಯ್ಕೆಯಾಗಿತ್ತು. ಫಿಲ್ಮ್ ಬಜಾರ್‌ಗೆ ಆಯ್ಕೆಯಾಗಿರುವ ಐದು ಭಾರತೀಯ ಚಿತ್ರಗಳ ಪೈಕಿ ಪೆದ್ರೋ ಕೂಡ ಒಂದಾಗಿತ್ತು.
ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗಿರುವ ಕಥಾ ಚಿತ್ರಗಳಿಗೆ ಫಿಲ್ಮ್‌ಬಜಾರ್ ಡಬ್ಲ್ಯುಐಪಿ ಅವಕಾಶ ನೀಡುತ್ತಾ ಬಂದಿದೆ. ಎಡಿಟಿಂಗ್ ಸ್ಟುಡಿಯೋದಲ್ಲಿ ನಿರ್ಮಾಣದ ಕೊನೆಯ ಹಂತದಲ್ಲಿದ್ದು, ಬಿಡುಗಡೆಗೆ ಸಜ್ಜುಗೊಳ್ಳುತ್ತಿರುವ ಸಿನಿಮಾಗಳನ್ನು ವರ್ಕ್‌ಇನ್ ಪ್ರಾಗ್ರೆಸ್ ಲ್ಯಾಬ್ ವಿಭಾಗಕ್ಕೆ ಆಯ್ಕೆ ಮಾಡಿಕೊಳ್ಳುತ್ತದೆ. ನಂತರ ಆ ಸಿನಿಮಾದ ಬಿಡುಗಡೆಯ ಹೊಣೆಯನ್ನು ಎನ್‌ಎಫ್‌ಡಿಸಿ ಹೊತ್ತುಕೊಳ್ಳುತ್ತದೆ. ಆ ಸಿನಿಮಾ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೂ ಪ್ರವೇಶ ಪಡೆಯುತ್ತದೆ. ಈ ಹಿಂದೆ ತಿಥಿ ಚಿತ್ರ ಈ ಮನ್ನಣೆಗೆ ಪಾತ್ರವಾಗಿತ್ತು.
ಇನ್ನು ರಿಷಬ್ ಶೆಟ್ಟಿಯವರು ಸದ್ಯಕ್ಕೆ ಕಾಂತಾರ ಸಿನಿಮಾ ನಿರ್ದೇಶನದಲ್ಲಿ ಬ್ಯುಝಿ ಆಗಿದ್ದಾರೆ. ಇತ್ತೀಚಿಗಷ್ಟೆ ಈ ಚಿತ್ರದ ಶೂಟಿಂಗ್ ಶುರುವಾಗಿದೆ. ಕಾಂತಾರ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ರಿಷಬ್ ಶೆಟ್ಟಿಯವರೇ ನೋಡಿಕೊಳ್ಳುತ್ತಿದ್ದಾರೆ.