ಗದಗ: ಹುಬ್ಬಳ್ಳಿ ಕಡೆಗೆ ಚಲಿಸುತ್ತಿದ್ದ ಪ್ಯಾಸೆಂಜರ್ ರೈಲಿಗೆ ಅಡ್ಡ ಬಂದು ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯೊಬ್ಬರನ್ನು ರೈಲ್ವೆ ಇಲಾಖೆ ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿರುವ ಘಟನೆ ತಾಲೂಕಿನ ಬಿಂಕದಕಟ್ಟಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಗದಗ ಮಾರ್ಗವಾಗಿ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಪ್ಯಾಸೆಂಜರ್ ರೈಲಿಗೆ ಬಿಂಕದಕಟ್ಟಿ ಸಮೀಪದ ರೈಲ್ವೆ ಗೇಟ್ ನಂಬರ್ 30ರ ಹತ್ತಿರ ಪಾದಾಚಾರಿಯೊಬ್ಬರು ಅಡ್ಡ ಬಂದಿದ್ದಾರೆ. ಈ ಪಾದಾಚಾರಿಯನ್ನು ಗಮನಿಸಿದ ಎಂಜಿನಿಯರ್ ವಿಭಾಗದ ಕೀ-ಮ್ಯಾನ್ ಸಮಯ ಪ್ರಜ್ಞೆಯಿಂದ ಪ್ರಯಾಣಿಕರೊಬ್ಬರು ಪ್ರಾಣ ಉಳಿಯುವಂತಾಗಿದೆ.
ಇದನ್ನೂ ಓದಿ:ಖಾಸಗಿ ಚಾಟ್‌ಗೆ “ಬೀಗ’ ಹಾಕಿ ಅಡಗಿಸಿಡಿ! ವಾಟ್ಸ್‌ಆ್ಯಪ್‌ನಿಂದ ಹೊಸ “ಲಾಕ್ ಚಾಟ್’ ಫೀಚರ್
ಕೀ- ಮ್ಯಾನ್ ಆನೀಶ್ ಎಂ. ನದಾಫ್ ಮತ್ತು ಗೇಟ್ ಮ್ಯಾನ್ ಸುರೇಶ ಹಡಪದ ಅವರು ರೈಲ್ವೆ ಲೋಕೋ ಪೈಲಟ್ ಅವರಿಗೆ ಸೂಚಿಸಿ ರೈಲು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಲೋಕೋ ಪೈಲಟ್ ರೈಲು ಗಾಡಿ ನಿಧಾನಗೊಳಿಸುವ ಮಾಡುವ ಮೂಲಕ ವ್ಯಕ್ತಿಯ ಜೀವ ಉಳಿಸಿದ್ದಾರೆ. ಆದರೆ, ಆ ಪಾದಾಚಾರಿ ತಲೆಗೆ ಬಲವಾದ ಏಟು ಬಿದ್ದಿರುವದರಿಂದ ರಕ್ತಸ್ರಾವ ಬರುವುದನ್ನು ಗಮನಿಸಿದ ಸಿಬ್ಬಂದಿ, ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿನ ಪರಿಕರಗಳಿಂದ ಉಪಚರಿಸಿ. ತದನಂತರ 108 ಆಂಬುಲೆನ್ಸ್ ಗೆ ಕರೆ ಮಾಡಿ ಗದಗ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ವ್ಯಕ್ತಿಯ ಜೀವ ಕಾಪಾಡಿ ಮಾನವೀಯತೆ ಮೆರೆದಿದ್ದಾರೆ.
ಈ ಸಿಬ್ಬಂದಿ ಮಾನವೀಯತೆಯ ಕಾಳಜಿಗೆ ಸಾರ್ವಜನಿಕರು, ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ