Advertisement

ಟ್ರೇಲರ್‌ನಲ್ಲಿ ‘ಪೆದ್ದು ನಾರಾಯಣ’ ದರ್ಶನ

02:49 PM Oct 25, 2021 | Team Udayavani |

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಪೆದ್ದು ನಾರಾಯಣ’ ಚಿತ್ರದ ಮೊದಲ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಲವ್‌ ಕಂ ಆ್ಯಕ್ಷನ್‌ ಕಥಾಹಂದರ ಹೊಂದಿರುವ “ಪೆದ್ದು ನಾರಾಯಣ’ ಚಿತ್ರದಲ್ಲಿ ಸಿನಿಮಾದಲ್ಲಿ ಶ್ರೀರತ್ನಕರ್‌, ವಿಷ್ಣುಪ್ರಿಯಾ, ಸುರಕ್ಷಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ಉಳಿದಂತೆ ಸಂತೋಷ್‌ ನಾರಾಯಣ್‌ ಶೆಟ್ಟಿ, ಶೋಭರಾಜ್‌, ಕಿಶೋರ್‌, ಜೈ ಜಗದೀಶ್‌, ಅವಿನಾಶ್‌, ವೀಣಾ ಸುಂದರ್‌, ಸುನಂದ ಶರಣಪ್ಪ, ಸೋನು ಆರ್‌.ಅಶೋಕ್‌ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಗಂಗಾಗುರು ಕಂಬೈನ್ಸ್‌’ ಬ್ಯಾನರ್‌ನಲ್ಲಿ ಕೆ. ವಾಸುದೇವ್‌ ಅರ್ಪಿಸಿ, ಭೀಮರೆಡ್ಡಿ ನಿರ್ಮಿಸುತ್ತಿರುವ “ಪೆದ್ದು ನಾರಾಯಣ’ ಚಿತ್ರಕ್ಕೆ ಉತ್ತರ ಕರ್ನಾಟಕ ಮೂಲದ ರಘು ಎ. ರೂಗಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ಹಲವು ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿ ಅನುಭವವಿರುವ ರಘು ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈಗಾಗಲೇ ಚಿತ್ರದ 60%ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಇದೇ ವೇಳೆ ಚಿತ್ರತಂಡ “ಪೆದ್ದು ನಾರಾಯಣ’ನ ಮೊದಲ ಟ್ರೇಲರ್‌ ಅನ್ನು ಹಿರಿಯ ಕಲಾವಿದ ಕೀರ್ತಿರಾಜ್‌ ಅವರಿಂದ ಬಿಡುಗಡೆಗೊಳಿಸಿತು. ನಟ ಚಂದು ಗೌಡ ಮೊದಲಾದವರು ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು.

ಇದನ್ನೂ ಓದಿ:ಶಿವಾಜಿ ಸುರತ್ಕಲ್‌-2: ಮೇಘನಾ ಗಾಂವ್ಕರ್‌ ಎಂಟ್ರಿ

ಚಿಕ್ಕಮಗಳೂರು, ಹೊನ್ನಾವರ, ಕುಮಟ,ಹಾಸನ, ಗೋಕಾಕ್‌, ಧಾರವಾಡ, ದಾಂಡೇಲಿ, ರಾಜಸ್ತಾನ ಸುತ್ತಮುತ್ತ ಶೂಟಿಂಗ್‌ ನಡೆಸಲಾಗಿದೆ. “ಪೆದ್ದು ನಾರಾಯಣ’ ಸಿನಿಮಾದಲ್ಲಿ ಸತೀಶ್‌ (ಗಂಗಾವತಿ) ಹಾಗೂ ರಘು ರೂಗಿ ಛಾಯಾಗ್ರಹಣವಿದೆ. ಇನ್ನು “ಪೆದ್ದು ನಾರಾಯಣ’ ಚಿತ್ರಕ್ಕೆ ಶ್ರೀಶಸ್ತ್ರ ಸಂಗೀತ, ಚಿತ್ರಕ್ಕೆ ಡಾ. ವಿ ನಾಗೇಂದ್ರ ಪ್ರಸಾದ್‌, ಕಿನ್ನಾಳ್‌ ರಾಜ್‌ ಮೊದಲಾದವರ ಸಾಹಿತ್ಯವಿದೆ. ಚಿತ್ರಕ್ಕೆ ಎನ್‌. ಎಂ ವಿಶ್ವ ಸಂಕಲನವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next