Advertisement

ಸಂಭ್ರಮಕ್ಕೆ ಮುತ್ತು ಸಾಕ್ಷಿ

08:34 PM Jan 09, 2020 | mahesh |

“ನಿರ್ದೇಶಕರು ಕಥೆ ಮತ್ತು ಪಾತ್ರ ವಿವರಿಸಿದಾಗ ಅದೇಕೋ ಓವರ್‌ ಆಗಿದೆಯಲ್ಲಾ ಅನಿಸಿತು. ಕೊನೆಗೆ ಈಗಿನ ಯೂಥ್‌ಗೆ ಬೇಕಾದ ವಿಷಯ ಇದೆಯಲ್ವಾ ಅಂದುಕೊಂಡು ಚಳಿ ಬಿಟ್ಟು ನಟಿಸೋಕೆ ಮುಂದಾದೆ. ಹಾಗಾಗಿ ಈ ಚಿತ್ರ ಬೋಲ್ಡ್‌ ಆಗಿ ಕಾಣುತ್ತಿದೆ..’

Advertisement

– ಹೀಗೆ ಹೇಳಿದ್ದು ರಾಜ್‌ ಸೂರ್ಯನ್‌. ಅವರು ಹೇಳಿಕೊಂಡಿದ್ದು, “ಮೈ ನೇಮ್‌ ಈಸ್‌ ರಾಜಾ’ ಚಿತ್ರದ ಬಗ್ಗೆ. ಚಿತ್ರದ ಟೀಸರ್‌ ಹಾಗು ಸಾಂಗ್‌ ನೋಡಿದವರಿಗೆ ಅಷ್ಟೊಂದು ರೊಮ್ಯಾನ್ಸ್‌ ಸೀನ್‌ ಬೇಕಿತ್ತಾ ಎಂಬ ಪ್ರಶ್ನೆ ಬರುವುದು ಸಹಜ. ಅದಕ್ಕೆ ಸ್ವತಃ ರಾಜ್‌ ಸೂರ್ಯನ್‌, ಯಾಕೆ ಹಾಗೆ ನಟಿಸಿದ್ದು ಎಂಬುದಕ್ಕೆ ಕಾರಣ ಕೊಡಲು ಮುಂದಾದರು. “ಚಿತ್ರದ ಕಥೆ ಆಗಿತ್ತು. ಪಾತ್ರ ಕೂಡ ಹಾಗೆಯೇ ಇರಬೇಕಿತ್ತು. ಹಾಗಾಗಿ ಮಾಡಿದ್ದೇನೆ. ಅದು ಬಿಟ್ಟರೆ ಬೇರೇನೂ ಇಲ್ಲ. ನಮಗೂ “ಎ’ ಪ್ರಮಾಣ ಪತ್ರ ಬೇಕಿರಲಿಲ್ಲ. ಯು/ಎ ಪ್ರಮಾಣ ಪತ್ರಕ್ಕೆ ಪ್ರಯತ್ನ ಪಟ್ಟೆವು. ಆದರೆ, ಸಿಕ್ಕಾಪಟ್ಟೆ ಮ್ಯೂಟ್‌, ಕಟ್‌ ಅಂದಾಗ, ಕೊನೆಗೆ “ಎ’ ಪ್ರಮಾಣ ಪತ್ರಕ್ಕೆ ತೃಪ್ತಿಪಡಬೇಕಾಯಿತು. ಟೀಸರ್‌, ಸಾಂಗ್‌ ಓವರ್‌ ಆಗಿದ್ದರೂ, ಇಲ್ಲಿ ಸಂದೇಶವಿದೆ. ನನ್ನ ಹಿಂದಿನ ಎರಡು ಚಿತ್ರಗಳಲ್ಲೂ ಹೆಣ್ಣಿಗೆ ಗೌರವ ಕೊಡಲಾಗಿದೆ. ಇಲ್ಲಿ ಅದಕ್ಕಿಂತ ಜಾಸ್ತಿ ಗೌರವ ಕೊಡಲಾಗಿದೆ. ಸಿನಿಮಾ ನೋಡಿದವರಿಗೆ ಇಲ್ಲಿ ಗಂಡ, ಹೆಂಡತಿಯ ಬಾಂಧವ್ಯ ಹೇಗಿದೆ ಅನ್ನೋದು ಗೊತ್ತಾಗುತ್ತೆ’ ಎಂದರು ರಾಜ್‌ ಸೂರ್ಯನ್‌.

ನಿರ್ದೇಶಕ ಅಶ್ವಿ‌ನ್‌ ಮಾತನಾಡಿ, “ಇದು ಮನರಂಜನೆಯ ಸಿನಿಮಾ. ಇಲ್ಲಿ ಗಂಡ, ಹೆಂಡತಿ ಎನ್‌ಆರ್‌ಐ ಕಪಲ್ಸ್‌. ಅವರು ಮುತ್ತಿನ ಮೂಲಕವೇ ಸಂಭ್ರಮದ ಕ್ಷಣವನ್ನು ಹಂಚಿಕೊಳ್ಳುತ್ತಾರೆ. ಹಾಗಾಗಿ ಆ ರೀತಿಯ ದೃಶ್ಯಗಳು ಇಲ್ಲಿವೆ. ಪಾತ್ರಗಳಿಗೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದೆಯಷ್ಟೇ’ ಎಂಬುದು ಅವರ ಮಾತು.

ನಿರ್ಮಾಪಕ ಪ್ರಭುಸೂರ್ಯ ಅವರಿಗೆ ಒಳ್ಳೆಯ ಚಿತ್ರ ಮಾಡಿದ ಖುಷಿ. ನಮಗೂ ಟೀಸರ್‌, ಸಾಂಗ್‌ ಬಗ್ಗೆ ಕಾಮೆಂಟ್ಸ್‌ ಬಂತು. ಆದರೆ, ಪೂರ್ಣ ಚಿತ್ರ ನೋಡಿದರೆ ಆ ಸೀನ್‌ ಯಾಕೆ ಅನ್ನೋದು ಗೊತ್ತಾಗುತ್ತೆ. ಎಂದಿನಂತೆ ನಿಮ್ಮ ಸಹಕಾರ ಇರಲಿ’ ಎಂದರು ಪ್ರಭು ಸೂರ್ಯ. ಸಂಗೀತ ನಿರ್ದೇಶಕ ಎಲ್ವಿನ್‌ ಜೋಶ್ವ ನಾಲ್ಕು ಹಾಡುಗಳನ್ನು ಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next