Advertisement
ಪ್ರಸ್ತುತ ದಿನದಲ್ಲಿ ಪ್ರತಿಯೊಬ್ಬರೂ ವರ್ಡಲ್ ಎಂಬ ಹೊಸ ಆಟದತ್ತ ಮುಖ ಮಾಡುತ್ತಿದ್ದಾರೆ. ಈ ಇಂಟರ್ನೆಟ್ ಆಟದಲ್ಲಿ, ಆಟಗಾರರು ಹಸಿರು, ಹಳದಿ, ಕಪ್ಪು ಮತ್ತು ಬಿಳಿ ಬಾಕ್ಸ್‌ಗಳ ಸಾಲಿನಲ್ಲಿ ಐದು-ಅಕ್ಷರದ ಪದವನ್ನು ಊಹಿಸಬೇಕು. ಒಂದು ರೀತಿಯಲ್ಲಿ ಇದು ಸುಡೋಕನ್ನು ಓಲುವ ಆಟವಾಗಿದೆ. ಹದಿಹರೆಯದ ಮಕ್ಕಳನ್ನು ಸುಲಭವಾಗಿ ಮೋಸಗೊಳಿಸುವ ಮತ್ತು ಮಧ್ಯವಯಸ್ಕರು ಅರ್ಥೈಸಿಕೊಳ್ಳಲು ಸಾಕಷ್ಟು ಕಠಿಣವಾಗಿದೆ ಈ ಮಾಯ ಆಟಿಕೆ.
Related Articles
ಜೀವನೋತ್ಸಾಹ ಎನ್ನುವುದು ಯುವಜನತೆಯ ವಿಶೇಷ ಗುಣ ಆದರೆ ವಯಸ್ಸಾದವರು ಉತ್ಸುಕರಾಗಲು ಏನಾನ್ನಾದರೂ ಹುಡುಕುತ್ತಿರುತ್ತಾರೆ. ಪ್ರಸ್ತುತ ದಿನದಲ್ಲಿ ಎಲ್ಲ ವಯಸಿನವರು ಮಾನಸಿಕ ನೆಮ್ಮದಿಗಾಗಿ ಹೊಸ ಹೊಸ ದಾರಿಯನ್ನು ಹುಡುಕುತ್ತಿದ್ದಾರೆ. ಮನೆಯೊಳಗೇ ಮನಸುಗಳು ಬಂಧಿಯಾದ ನಂತರ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಯಿತು. ಮಾನಸಿಕ ನೆಮ್ಮದಿಯಿಲ್ಲದೆ ಜೀವವೆ ಬೇಡವೆನಿಸುವ ಮಟ್ಟಿಗೆ ಹಲವು ಜನ ತಲುಪಿದ್ದರು.
ಜಗತ್ತಿನ ಪ್ರಸಿದ್ಧ ಟೆನ್ನಿಸ್ ಆಟಗಾರ ರಾಫೆಲ್ ನಡಾಲ್ ಅವರು ಆಸ್ಟ್ರೇಲಿಯಾ ಓಪನ್ ನ 5 ಸೆಟ್ ನಲ್ಲಿ ತೋರಿದ ಕ್ರೀಡಾಚಾತುರ್ಯ ಎಲ್ಲರನ್ನು ಮಂತ್ರಮುಗ್ದಗೊಳಿಸಿತ್ತು. ಅಂತಹ ಅಭೂತಪೂರ್ವ ಗೆಲುವಿನ ಅದೆಷ್ಟೋ ದಿನಗಳ ಪರಿಶ್ರಮವಿತ್ತು. ಅಂತಹ ದೊಡ್ಡ ಗೆಲುವುಗಳು ಅಪರೂಪ ಮತ್ತು ಅವುಗಳನ್ನು ಕೆಲವರು ಮಾತ್ರ ಸಾಧಿಸುತ್ತಾರೆ. ಆದರೂ, ನಮ್ಮೆಲ್ಲರ ಜೀವನದಲ್ಲಿ, ಪ್ರಯತ್ನಿಸಲು ಯೋಗ್ಯವಾದ ಅನೇಕ ಸಣ್ಣ ಮೈಲಿಗಲ್ಲುಗಳಿವೆ. ಇದು ನಡಾಲ್ ತರಹದ ರೋಚಕತೆಗಳನ್ನು ಮರುಸೃಷ್ಟಿಸಬಹುದು. ಆದರೆ ನಾವು ನಮ್ಮ ಸಾಮರ್ಥ್ಯವನ್ನು ಅಂದಾಜು ಮಾಡುವುದರಲ್ಲಿ ಸೋತಿದ್ದೇವೆ. ನಮ್ಮ ಗುರಿಯ ನಡುವೆ ಸಾಕಷ್ಟು ಅಡೆತಡೆಗಳಿವೆ.
Advertisement
ಮನೆಯೊಳಗೆ ಬಂಧಿಯಾಗಿರುವುದು ಮತ್ತು ಬೇಸರದ ಸನ್ನಿವೇಶಗಳು ನಿರ್ಮಾಣವಾದ ನಂತರ ನಮ್ಮಲ್ಲಿ ಹಲವಾರು ಹೊಸ ಹೊಸ ಹವ್ಯಾಸಗಳು ರೂಡಿಸಿಕೊಂಡಿದ್ದಾರೆ. ಈ ಎಲ್ಲ ಕಾರಣಕ್ಕಾಗಿ ಕೊರೊನ ಪರಿಸ್ಥಿತಿಗೆ ಧನ್ಯವಾದಗಳು. ಖಾಸಗಿ ಸಂಸ್ಥೆಯೊಂದು 2020 ಮತ್ತು 21 ರಲ್ಲಿ ಗೆಜೆಟ್ ಮಾರಾಟದಲ್ಲಿ 21% ಜಿಗಿತವನ್ನು ವರದಿ ಮಾಡಿದೆ, ಏಕೆಂದರೆ ಜನರು ತಮ್ಮ ಸಮಯವನ್ನು ಕಳೆಯಲು ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ.ಹೀಗೆ ಗೆಜೆಟ್ ಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಒತ್ತಡದ ಪರಿಸ್ಥಿತಿಯಲ್ಲಿ ಒಂದಿಷ್ಟು ರಿಲೀಫ್ ನೀಡಲು ಹೊಸ ತಂತ್ರಜ್ಞಾನಗಳು ಮೂಡಿಬರುತ್ತಿವೆ. ಆಧುನಿಕ ಜಗತ್ತಿನಲ್ಲಿ ನಮ್ಮ ಭಾವನೆಗಳೇ ದೊಡ್ಡ ದೊಡ್ಡ ಉದ್ಯಮದ ಮೂಲ ಸರಕು ಎಂಬುವುದು ಸತ್ಯ ಸಂಗತಿ. – ಜಗದೀಶ್ ಬಳಂಜ