Advertisement

Karkal: ಜೈನಮುನಿಗಳಿಂದ ಜಗತ್ತಿಗೆ ಶಾಂತಿ: ಶೋಭಾ ಕರಂದ್ಲಾಜೆ

01:17 AM Jan 19, 2024 | Team Udayavani |

ಕಾರ್ಕಳ: ಶಾಂತಿಯ ಮೂಲಕ ಸ್ವಾತಂತ್ರ್ಯ ಪಡೆದ ದೇಶ ಭಾರತ. ಸರ್ವಧರ್ಮದವರು ಇಲ್ಲಿ ಸಮಾನತೆ, ಶಾತಿ, ಸಹನೆಯಿಂದ ಜೀವನ ನಡೆಸುತಿದ್ದು, ಕಠಿನ ಧರ್ಮಪಾಲನೆ ಪಾಲಿಸುವ ಜೈನ ಮುನಿಗಳು ಜಗತ್ತಿಗೆ ಶಾಂತಿ ಸಂದೇಶ ಸಾರಿದರು ಎಂದು ಕೇಂದ್ರ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಆನೆಕೆರೆ ಚತುರ್ಮುಖ ಕೆರೆಬಸದಿಯಲ್ಲಿ ಪಂಚಕಲ್ಯಾಣಮಹೋತ್ಸವದ ಅಂಗವಾಗಿ ಪ್ರವಚನ ಮಂದಿರದ ಭೈರವ ಅರಸು ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಮಾತನಾಡಿ, ಬಸದಿಯು ಅತ್ಯಲ್ಪ ಕಾಲದಲ್ಲಿ ಸುಂದರವಾಗಿ ನಿರ್ಮಾಣಗೊಂಡಿದೆ. ಬಹುದಿನಗಳ ಕನಸು ನನಸಾಗಿದೆ. ಜಗಮಂದಿರಗಳು ದೇಶದಲ್ಲಿವೆ, ಆದರಿಲ್ಲಿ ಜಲಮಂದಿರ ಅಪರೂಪದ್ದಾಗಿದೆ ಎಂದರು.

ಶಾಸಕ ವಿ. ಸುನಿಲ್‌ ಕುಮಾರ್‌ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಪರಮಪೂಜ್ಯ 108 ಮುನಿಶ್ರೀ ಅಮೋಘ ಕೀರ್ತಿ ಮಹಾರಾಜ್‌, 108 ಮುನಿಶ್ರೀ ಅಮರಕೀರ್ತಿ ಮಹಾರಾಜ್‌ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದಾನಶಾಲೆಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಶ್ರೀಗಳು, ಹೊಂಬುಜ ಶ್ರೀ ಜೈನಮಠದ ಸ್ವಸ್ತೀ ಶ್ರೀ ಡಾ| ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಶ್ರೀಗಳು, ಶ್ರೀ ಸಿಂಹನಗದ್ದೆ ಬಸ್ತಿ ಮಠದ ಶ್ರೀ ಲಕ್ಷ್ಮಿಸೇನ ಪಟ್ಟಾಚಾರ್ಯವರ್ಯ ಶ್ರೀಗಳು, ಪದ್ಮಶ್ರೀ ಮಾತಾಜಿ, ಶಾಸಕರಾದ ಶಾಸಕ ಯಶ್‌ಪಾಲ್‌ ಸುವರ್ಣ, ಹರೀಶ್‌ ಪೂಂಜಾ, ಭರತ್‌ ಶೆಟ್ಟಿಗಾರ್‌, ಆನೆಕೆರೆ ಬಸದಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎ. ಮೋಹನ್‌ ಆಳ್ವ, ಗೌರವ ಸಲಹೆಗಾರ ಎಂ.ಕೆ. ವಿಜಯ ಕುಮಾರ್‌, ಕಾರ್ಯಾಧ್ಯಕ್ಷ ಮಹಾವೀರ ಹೆಗ್ಡೆ ಉಪಸ್ಥಿತರಿದ್ದರು. ಮುನಿರಾಜ್‌ ರೆಂಜಾಳ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next