Advertisement
ನಗರ ಪೊಲೀಸ್ ಠಾಣೆಯಲ್ಲಿ ಡಿ.18ರ ಹನುಮಜಯಂತಿ ಮೆರವಣಿಗಗೆ ಸಂಬಂಧ ಆಯೋಜಿಸಿದ್ದ ಶಾಂತಿ ಸಭೆಯ ಭಾಗವಹಿಸಿ ಮುಖಂಡರು ಮತ್ತು ಹನುಮಮ್ತೋತ್ಸವ ಸಮಿತಿಯವರಿಂದ ಮಾಹಿತಿಗಳನ್ನು ಪಡೆದನಂತರ ಮಾತನಾಡಿದ ಅವರು, ಕೋವಿಡ್ ಮಹಾಮಾರಿಯ ಮೊದಲ ಮತ್ತುಎರಡನೆಅಲೆಯಿಲ್ಲಿ ಸಾಕಷ್ಟು ಜೀವ ಹಾನಿಯಾಗಿರುವ ಭಯದ ನಡುವೆ ಇದೀಗ ಮೂರನೆ (ಒಮಿಕ್ರಾನ್) ಅಲೆಯನ್ನು ಎದುರಿಸಬೆಕಾದ ಪರಿಸ್ಥಿತಿ ಇದ್ದು, ಇದಕ್ಕಾಗಿ ಎಲ್ಲರೂ ಎಚ್ಚರಿಕೆವಹಿಸಬೇಕಾಗಿದ್ದು, ಅಚರಣೆಗಳನ್ನು ಜಾತಿ ದರ್ಮಗಳನ್ನು ಬಿಟ್ಟು ಕೊವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಅಚರಿಸಬೆಕಿದೆ. ಈ ಬಗ್ಗೆ ಸದ್ಯದಲ್ಲೆ ತಹಶೀಲ್ದಾರ್ ಮತ್ತು ಉಪವಿಭಾಗಧಿಕಾರಿಗಳನ್ನು ಒಟ್ಟಿಗೆ ಸಭೆಕರೆದು ಶಾಂತಿಯುತವಾಗಿ ಅಚರಣೆ ಮಾಡಲು ಕ್ರಮ ಕೈಗೋಳ್ಳೊಣ ಎಂದರು.
Related Articles
Advertisement
ಗಡಿ ಭಾಗ ಎಚ್ಚರ ಅಗತ್ಯ: ಅಡಿಷನಲ್ ಎಸ್.ಪಿ. ಆರ್.ಶಿವಕುಮಾರ್ ಮಾತನಾಡಿ ಕೊಡಗು ಮತ್ತು ಕೇರಳ ಅಂತರರಾಜ್ಯ ಗಡಿಭಾಗಗಳಿಗೆ ನಾವು ಅಂಟಿಕೊಂಡಿದ್ದೇವೆ. ಕೊರೊನಾ ಹಿನ್ನೆಲೆಯಲ್ಲಿ ಅದಕ್ಕೂ ಹೆಚ್ಚು ಗಮನ ಹರಿಸಿ ಜಾಗೃತರಾಗಬೆಕಾಗಿದೆ. ಅದರ ನಡುವೆಯು ನಮ್ಮ ಅಚರಣೆಗಳನ್ನು ಮರೆಯುವಂತ್ತಿಲ್ಲ ಅದ್ದೂರಿಯಲ್ಲದಿದ್ದರೂ ಸರಳವಾಗಿಯಾದರೂ ಅಚರಿಸಲು ಮುಂದಾಗೋಣ ಎಲ್ಲರೂ ಸಹಕರಿಸುವಂತೆ ಕೋರಿದರು.
ರಾಜಕಾರಣಿಗಳ ಮೆರವಣಿಗೆಯಾಗಬಾರದು: ಸತ್ಯಪ್ಪ ಮಾತನಾಡಿ ಮೆರವಣಿಗೆಯಲ್ಲಿ ಸಂಸದರು ಸೇರಿದಂತೆ ರಾಜಕೀಯ ನಾಯಕರ ವಾಹನ ಏರಿ ಮೆರವಣಿಗೆ ನಡೆಸದಂತೆ ಮಾಡಿದ ಮನವಿಗೆ ಸಭೆಯಲ್ಲಿದ್ದವರು ಜಯಂತಿ ಬಗ್ಗೆ ಮಾತನಾಡಿ ವಿಷಯ ವರ್ಗಾಯಿಸದಂತೆ ಸೂಚಿಸಿದರು.
ಹುಣಸೂರು ಪಬ್ಲಿಕ್ ಪೀಸ್ ಕಮಿಟಿಯ ಉಪಾಧ್ಯಕ್ಷ ಎಚ್.ಎಂ.ಫಲಜುಲ್ಲಾ, ನಗರಸಭಾ ಸದಸ್ಯ ಮಹಮದ್ ಯೂನಸ್, ಮಾಜಿ ಸದಸ್ಯ ಮಜಾಜ್ ಅಹಮದ್ ಮಾತನಾಡಿ ಬಜಾರ್ ರಸ್ತೆ ಮತ್ತು ಜೆ.ಎಲ್.ಬಿರಸ್ತೆಯಲ್ಲಿ ದಶಕಗಳಿಂದ ಎಲ್ಲಾ ಮೆರವಣಿಗೆ ತೆರಳುತ್ತಿತ್ತು. 6 ವರ್ಷಗಳಿಂದ ನಿಂತು ಹೋಗಿದ್ದು, ತಮಗೂ ನೋವಿದೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸುವಂತೆ ಈಗಾಗಲೇ ಮಸೀದಿ ಮುಖ್ಯಸ್ಥರು, ವಿವಿಧ ಸಂಘಟನೆಗಳು ವರಿಗೆ ಸೂಚಿಸಲಾಗಿದೆ ಹೀಗಾಗಿ ಎಲ್ಲಾ ಮೆರವಣಿಗೆಗೂ ಅವಕಾಶ ಮಾಡಿಕೊಡಬೇಕೆಂದರು. ಎಸ್.ಡಿ.ಪಿ.ಐ ತಾಲೂಕು ಅಧ್ಯಕ್ಷ ತಬ್ರೇಜ್ ಮಾತನಾಡಿ ನಾವು ಭರವಸೆ ನೀಡುತ್ತೇವೆ ಆದರೆ ಯುವಕರನ್ನು ನಿಯಂತ್ರಿಸುವರ‍್ಯಾರು, ಕೆಲ ಘಟನೆಯಿಂದ ನಿರ್ಬಂಧ ವಿಧಿಸಿರುವುದು ಸರಿಯಾದ ಕ್ರಮವಾಗಿದ್ದು, ಇದೇ ರೀತಿ ಮುಂದುವರೆಸಬೇಕೆಂದು ಮನವಿ ಮಾಡಿದರು.
ಎಚ್ಚರ ವಹಿಸಿ: ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಸುದ್ದಿ ಹರಡಿದಲ್ಲಿ ಕಾನೂನುತನ್ನದೇ ಆದ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಮುಖಂಡರು ಯುವಕರಿಗೆ ತಿಳಿ ಹೇಳಬೇಕು, ಪೋಷಕರು ಎಚ್ಚರವಹಿಸಬೇಕೆಂದು ಎಸ್.ಪಿ.ಚೇತನ್ ಎಚ್ಚರಿಸಿದರು.
ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷ ಎಚ್.ವೈ.ಮಹದೇವ್. ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಅನಿಲ್, ತಾಲೂಕು ಅಧ್ಯಕ್ಷ ಗಿರೀಶ್, ನಗರಸಭೆ ಸದಸ್ಯ ಕೃಷ್ಣರಾಜಗುಪ್ತ, ಹುಣಸೂರು ಪಬ್ಲಿಕ್ ಪೀಸ್ ಕಮಿಟಿಯ ಅಧ್ಯಕ್ಷ ಸೈಯದ್ ಅಹಮದ್ ಷಾ, ಕಾರ್ಯದರ್ಶಿ ಮಿಜಾಮಿಲ್ ಖಾನ್, ಮಸೀದಿ ಅಧ್ಯಕ್ಷ ಅಮೀರ್ ಪಾಷಾ, ಮುಖಂಡರಾದ ಗಜೇಂದ್ರ, ಮಾಜಿ ಸದಸ್ಯ ಅಯೂಬ್ ಖಾನ್, ಅಡಿಷನಲ್ ಎಸ್.ಪಿ. ಆರ್.ಶಿವಕುಮಾರ್, ಡಿವೈಎಸ್‌ಪಿ ರವಿಪ್ರಸಾದ್, ಇನ್ಸ್ಪೆಕ್ಟರ್‌ಗಳಾದ ಸಿ.ವಿ.ರವಿ.ಚಿಕ್ಕಸ್ವಾಮಿ, ಸಬ್ ಇನ್ಸ್ಪೆಕ್ಟರ್ ಪಂಚಾಕ್ಷರಿಸ್ವಾಮಿ ಪ್ರಭಾರ ಪಿ.ಎಸ್.ಐ ಶಾಂತಕುಮಾರಿ, ನಗರಸಭಾ ಮ್ಯಾನೇಜರ್‌ಡಿಸೋಜ, ಸೇರಿದಂತೆ ಅನೇಕ ಮುಖಂಡರಿದ್ದರು.