ಹೊಸಬೆಟ್ಟು:: ಯಾವ ಊರನಲ್ಲಿ ಸಾನ್ನಿಧ್ಯ ಜಾಗೃತಿ ಇರುತ್ತದೆಯೋ ಆ ಊರಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಎಂದು ಉಡುಪಿ ಪುತ್ತಿಗೆ ಮಠ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದಂಗಳವರು ನುಡಿದರು.
ಅವರು ನವವೃಂದಾವನ ಸೇವಾ ಪ್ರತಿಷ್ಠಾನ ಹೊಸಬೆಟ್ಟು, ಬ್ರಹ್ಮಕಲಶೋತ್ಸವ ಸಮಿತಿ ಹೊಸಬೆಟ್ಟು ಸಹಕಾರದಲ್ಲಿ ಶ್ರೀ ರಾಘವೇಂದ್ರ ಮಠ ಹೊಸಬೆಟ್ಟು ಇಲ್ಲಿನ ಹರಿವಾಯು ಗುರುಗಳಿಗೆ ಹಾಗೂ ಪರಿವಾರ ದೇವರಿಗೆ ನಡೆದ ಬ್ರಹ್ಮಕಲ ಶೋತ್ಸವ ಪ್ರಯುಕ್ತ ಕೀರ್ತಿಶೇಷ ಹರಿದಾ ಸರತ್ನ ಹೊಸಬೆಟ್ಟು ವಾದೀಶ ಆಚಾರ್ಯ ವೇದಿಕೆಯಲ್ಲಿ ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಊರಿನ ಸುಖಕ್ಕೆ ಮೂಲ ಕಾರಣ ದೇವಸ್ಥಾನ. ಯಾವ ದೇವಸ್ಥಾನದಲ್ಲಿ ಸುಖ ವೃದ್ಧಿ ಯಾಗಿರುತ್ತದೆಯೋ ಅಲ್ಲಿಯ ಊರು ಸುಭಿಕ್ಷೆಯಾಗಿರುತ್ತದೆ ಎಂದರು.
ಧಾರ್ಮಿಕ ಸಭೆಯನ್ನು ಉಡುಪಿ, ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ| ಜಿ. ಶಂಕರ್ ಅವರು ಉದ್ಘಾಟಿಸಿದರು. ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಾಸಕ ಡಾ| ಭರತ್ ಶೆಟ್ಟಿ ವೈ., ಶ್ರೀ ಚಿತ್ರಾಪುರ ಮಠ, ಚಿತ್ರಾಪುರದ ಶ್ರೀ ವಿದ್ಯೇಂದ್ರತೀರ್ಥರು ಭಾಗವಹಿಸಿದ್ದರು.
ಜ್ಯೋತಿಷಿ ಸುರತ್ಕಲ್ ಕೆ.ಸಿ. ನಾಗೇಂದ್ರ ಭಾರದ್ವಾಜ್, ಕೊಲ್ಯ ಜಾರಂತಾಯ ಧೂಮಾವತಿ ದೈವಸ್ಥಾನ ಜೀಣೊರ್ದ್ಧಾರ ಸಮಿತಿ ಅಧ್ಯಕ್ಷ ವಕೀಲ ರವಿಪ್ರಸನ್ನ ಸಿ.ಕೆ., ದ.ಕ., ಉಡುಪಿ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ದ.ಕ. ಉಡುಪಿ ಜಿಲ್ಲಾ ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮೊಗವೀರ ಯುವಸಂಘಟನೆ ಉಡುಪಿ ಅಧ್ಯಕ್ಷ ವಿನಯ್ ಕರ್ಕೇರ ಮಲ್ಪೆ, ಕುಸುಮ ವಾದೀಶ ಆಚಾರ್ಯ, ಶ್ರೀಪತಿ ಭಟ್ ಮೂಡುಬಿದಿರೆ, ವೇ| ಮೂ| ಕಗ್ಗಿ ಗೋಪಾಲಕೃಷ್ಣ ಆಚಾರ್ಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವೇಶ್ವರ ಬದವಿದೆ ಹೊಸಬೆಟ್ಟು, ಬ್ರಹ್ಮಕಲಶೋತ್ಸವ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪಿ.ಎಚ್. ಆನಂದ್, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಎಚ್.ವಿ. ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.
ಧಾರ್ಮಿಕ ಸಭೆಯಲ್ಲಿ ವಿದ್ವಾನ್ ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು.ವ್ಯವಸ್ಥಾಪನ ಸಮಿತಿ ಸಂಚಾಲಕ ಪುಂಡಲೀಕ ಹೊಸಬೆಟ್ಟು ಸ್ವಾಗತಿಸಿದರು. ಪ್ರಕಾಶ್ ಹೊಸಬೆಟ್ಟು ನಿರೂಪಿಸಿದರು.