Advertisement
ಈ ಬಗ್ಗೆ ಹೇಳಿಕೆ ನೀಡಿರುವ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಘಟನೆಗಳಿಂದ ರಾಜ್ಯದಲ್ಲಿ ಆತಂಕ ಉಂಟಾಗಿದೆ. ಧಾರ್ಮಿಕ ಸಹಿಷ್ಣುತೆಗೆ ಹೆಸರಾಗಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಂಘರ್ಷಗಳಿಗೆ ಕೊನೆ ಯಾವಾಗ ಎಂದು ಚಿಂತಿಸುವಂತಾಗಿದೆ. ಚಪ್ಪಾಳೆ ಸದ್ದು ಬರಲುಎರಡೂ ಕೈಗಳನ್ನು ಜೋಡಿಸಬೇಕಾಗುತ್ತದೆ. ಈಗ ನಡೆದಿರುವ ಘಟನೆಗಳಿಗೆ ಯಾರನ್ನು ಗುರುತಿಸಬೇಕೆಂದು ಯೋಚಿಸುವ ಬದಲು ಕೋಮು ಸೌಹಾರ್ದಕ್ಕೆ ಎಲ್ಲರೂ ಸಹಕರಿಸಬೇಕಾಗಿದೆ.
ಮತ್ತು ಸಹಬಾಳ್ವೆ ಹಿಂದಿನಂತೆ ಸಾಗಬೇಕು ಎರಡು ಧರ್ಮ ಪ್ರತಿನಿ ಧಿಗಳು, ಮುಖಂಡರು ಹಾಗೂ ಪ್ರಜಾಪ್ರತಿನಿ ಧಿಗಳು ತಾಳ್ಮೆ ಮತ್ತು ಶಾಂತಿಯ ವಾತಾವರಣಕ್ಕೆ ಸಹಕರಿಸಬೇಕೆಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಕೇಳಿಕೊಂಡಿದ್ದಾರೆ.