ಪಣಂಬೂರು: ಕ್ರೀಡೆ ಜೀವನದಲ್ಲಿ ಅವಶ್ಯವಾದರೂ ಅದರ ಜತೆಗೆ ಸಮಾಜಕ್ಕೂ ಯುವ ಶಕ್ತಿ ಕೊಡುಗೆ ನೀಡುವತ್ತಾ ಗಮನ ಹರಿಸಬೇಕಿದೆ ಎಂದು ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಹೊಸಬೆಟ್ಟು ಹೇಳಿದರು. ದ.ಕ.ಮೊಗವೀರ ಯುವ ವೇದಿಕೆ ಆಯೋಜಿಸಿದ್ದ ಪ್ರೀಮಿಯರ್ ಲೀಗ್ 2018 ಕ್ರಿಕೆಟ್ ಪಂದ್ಯಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಿಂದ ಒಗ್ಗಟು
ಕ್ರೀಡೆಯಿಂದ ಒಗ್ಗಟ್ಟು, ಶಾಂತಿ ಸ್ಥಾಪನೆಯ ಮಂತ್ರವಿದೆ. ಹಿಂದೆ ದೇಶ- ವಿದೇಶಗಳ ನಡುವೆ ಸಹಬಾಳ್ವೆಗಾಗಿ ಕ್ರೀಡಾಕೂಟ ನಡೆಯುತ್ತಿತ್ತು. ಇಂದು ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಭಾವಂತರಿಗೆ ಒಳ್ಳೆಯ ಅವಕಾಶವಿದೆ. ಮೊಗವೀರ ಯುವ ಪ್ರತಿಭೆಗಳು ರಾಜ್ಯ, ದೇಶವನ್ನು ಪ್ರತಿನಿಧಿಸುವಂತಾಗಲಿ ಎಂದು ಹಾರೈಸಿದರು. ಅಂಬಿಗರ ಚೌಡಯ್ಯ ಮಹಾಸಭಾದ ಕಾರ್ಯಾಧ್ಯಕ್ಷ ಜಯ ಸಿ.ಕೋಟ್ಯಾನ್ ಕ್ರೀಡಾಕೂಟ ಉದ್ಘಾಟಿಸಿ ಶುಭ ಹಾರೈಸಿದರು.
ಮೀನುಗಾರಿಕಾ ಮಹಾಮಂಡಲದ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮಂಗಳೂರು ಹದಿನಾಲ್ಕುಪಟ್ಣ ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ರಾಜೀವ್ ಕಾಂಚನ್, ಉದ್ಯಮಿ ಪ್ರಸಾದ್ ಕಾಂಚನ್, ಬೆಂಗ್ರೆ ಮಹಾಸಭಾದ ಅಧ್ಯಕ್ಷ ಮೋಹನ್ ಬೆಂಗ್ರೆ, ಬರ್ಕೆ ಫ್ರೆಂಡ್ಸ್ ಸ್ಥಾಪಕ ಯಜ್ಞೆಶ್ ಬರ್ಕೆ, ಉದ್ಯಮಿ ಶಿವಾನಂದ ಎಚ್. ಎಂ., ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಭರತ್ ಎರ್ಮಾಳ್, ಮೊಗವೀರ ಯುವ ಸಂಘಟನೆ ಅಧ್ಯಕ್ಷ ವಿನಯ್ ಕರ್ಕೇರ, ಬೋಳೂರು ಮೊಗವೀರ ಮಹಾಸಭಾದ ಉಪಾಧ್ಯಕ್ಷ ದೇವದಾಸ್ ಬೋಳೂರು, ಕುಮಾರ್ ಮೆಂಡನ್, ಸಂಜಯ್ ಸುವರ್ಣ, ಜನಾರ್ದನ ಬೋಳೂರು, ಕಾರ್ಪೊರೇಟರ್ ರೇವತಿ ಪುತ್ರನ್, ಉದ್ಯಮಿ ಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಮೊಗವೀರ ಯುವ ವೇದಿಕೆ ಅಧ್ಯಕ್ಷ ಲೀಲಾಧರ ತಣ್ಣೀರುಬಾವಿ ಸ್ವಾಗತಿಸಿದರು. ಒಟ್ಟು ಹತ್ತು ತಂಡಗಳು ಈ ಪ್ರಿಮೀಯರ್ ಲೀಗ್ ಕ್ರೀಡಾಕೂಟದಲ್ಲಿ ಪ್ರಶಸ್ತಿಗಾಗಿ ಸ್ಪರ್ಧಿಸುತ್ತಿವೆ.