Advertisement

ಜಮ್ಮು-ಕಾಶ್ಮೀರ ಭೂಮಿ ಖರೀದಿ ಕಾನೂನು: ಪಿಡಿಪಿ ಪ್ರತಿಭಟನೆ, ಹಲವರ ಬಂಧನ

06:33 PM Oct 29, 2020 | Nagendra Trasi |

ಶ್ರೀನಗರ್:ಕಾಶ್ಮೀರದಲ್ಲಿ ವಾಸವಿಲ್ಲದವರೂ ಅಲ್ಲಿನ ಜಮೀನು ಖರೀದಿಸಬಹುದು ಎಂದು ಕೇಂದ್ರ ಸರ್ಕಾರ ಮಹತ್ವದ ಕಾನೂನು ಜಾರಿಗೆ ತಂದಿದ್ದನ್ನು ವಿರೋಧಿಸಿ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ಗುರುವಾರ(ಅಕ್ಟೋಬರ್ 29, 2020) ಪ್ರತಿಭಟನೆ ನಡೆಸಿದ್ದು, ಹಲವರನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

Advertisement

ವರದಿಯ ಪ್ರಕಾರ, ಜಮ್ಮು-ಕಾಶ್ಮೀರದಲ್ಲಿ ಹೊರಗಿನವರು ಭೂಮಿ ಖರೀದಿಸಬಹುದು ಎಂದು ಕಾನೂನಿಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಪಿಡಿಪಿ ಬೃಹತ್ ಪ್ರತಿಭಟನೆ ನಡೆಸಿತ್ತು. ಏತನ್ಮಧ್ಯೆ ಪಿಡಿಪಿ ಪ್ರತಿಭಟನಾ ಮೆರವಣಿಗೆಯನ್ನು ಜಮ್ಮು-ಕಾಶ್ಮೀರ ಪೊಲೀಸರು ವಿಫಲಗೊಳಿಸಿದ್ದು, ಹಲವಾರು ಪಿಡಿಪಿ ಮುಖಂಡರು, ಕಾರ್ಯಕರ್ತರನ್ನು ಬಂಧಿಸಿರುವುದಾಗಿ ವರದಿ ವಿವರಿಸಿದೆ.

ಪಿಡಿಪಿ ಕೇಂದ್ರ ಕಚೇರಿಗೆ ಪಿಡಿಪಿ ಮುಖಂಡರು, ಕಾರ್ಯಕರ್ತರು ತಲುಪಿದ ಕೂಡಲೇ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪಕ್ಷದ ಕಚೇರಿಗೆ ಒಳಬರುವ ಮತ್ತು ಹೊರ ಹೋಗುವ ರಸ್ತೆಗಳನ್ನು ಬಂದ್ ಮಾಡಿರುವುದಾಗಿ ವರದಿ ತಿಳಿಸಿದೆ.

ಪಿಡಿಪಿ ಮಾಜಿ ಎಂಎಲ್ ಸಿ ಆಲಾಂ, ಪಿಡಿಪಿ ಯುವ ನಾಯಕ ವಾಹೀದ್ ಪರ್ರಾ, ಮಾಧ್ಯಮ ಸಲಹೆಗಾರ ಸುಹೈಲ್ ಬುಖಾರಿ, ರೌಫ್ ಬಟ್, ಮೋಹಿತ್ ಭಾನ್ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next