Advertisement

ಪಿಡಿಒ ವರ್ಗಾವಣೆ: ನಿಟ್ಟುಸಿರು ಬಿಟ್ಟ ಜನಪ್ರತಿನಿಧಿಗಳು

10:43 AM Sep 04, 2019 | Suhan S |

ಜೋಯಿಡಾ: ತಾಲೂಕಿನ ನಾಗೋಡಾ ಗ್ರಾಪಂ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವ ಅಲ್ಲಿನ ಪಿಡಿಒರನ್ನು ಸ್ಥಳಿಯ ಶಾಸಕ ಆರ್‌.ವಿ.ದೇಶಪಾಂಡೆ ಮೇಲಾಧಿಕಾರಿಗಳಿಗೆ ಸೂಚನೆ ನೀಡಿ ವರ್ಗಾವಣೆ ಮಾಡಿಸುವ ಮೂಲಕ ಸಾರ್ವಜನಿಕರಿಗೆ ಸ್ಪಂದಿಸಿದ್ದಾರೆ. ಇದರಿಂದಾಗಿ ನಾವು ನಿಟ್ಟುಸಿರು ಬಿಡುವಂತಾಗಿದೆ ಎಂದು ಅಲ್ಲಿನ ಜನಪ್ರತಿನಿಧಿಗಳು ತಿಳಿಸಿದ್ದಾರೆ.

Advertisement

ನಾಗೋಡಾ ಗ್ರಾಪಂ ಅಧ್ಯಕ್ಷೆ ಚಂದನಾ ಮಿರಾಶಿ, ಸದಸ್ಯರಾದ ದಿಗಂಬರ ದೇಸಾಯಿ, ಸುಧಾಕರ್‌ ದೇಸಾಯಿ, ಲಕ್ಷ್ಮಿ ನಾಯ್ಕ ಮುಂತಾದವರು ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ, ನಾಗೋಡಾ ಗ್ರಾಪಂ ಅಭಿವೃದ್ಧಿ ಅಧಿಕಾರಿ ರವಿಕುಮಾರ ಗ್ರಾಮದ ಅಭಿವೃದ್ಧಿಗೆ ಸಹಕರಿಸದೆ, ಜನಸಾಮಾನ್ಯರ ಸಮಸ್ಯಗೆ ಸ್ಪಂದಿಸದೆ ಅಡ್ಡಿಪಡಿಸುತ್ತಿದ್ದ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಇಒಗೆ ದೂರು ಸಲ್ಲಿಸಿದ್ದೆವು. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೆವು. ಆದರೆ ಪಿಡಿಒ ತನ್ನ ವರ್ತನೆ ಬದಲಾಯಿಸದ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷೆ ಚಂದನಾ ಮಿರಾಶಿ ರಾಜೀನಾಮೆಗೆ ಇಂಗೀತ ವ್ಯಕ್ತಪಡಿಸಿದ್ದಳು. ಈ ವಿಷಯ ತಿಳಿದ ಶಾಸಕ ಆರ್‌.ವಿ. ದೇಶಪಾಂಡೆ ಕೂಡಲೇ ಪಿಡಿಒ ಬದಲಾವಣೆಗೆ ಕ್ರಮಕೈಗೊಂಡಿದ್ದಾರೆ. ಇದು ನಮಗೆ ಅತ್ಯಂತ ಖುಷಿ ನೀಡಿದ್ದು, ಗ್ರಾಪಂ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸದಾನಂದ ದಬಗಾರ ಉಪಸ್ಥಿತರಿದ್ದರು. ಶಾಸಕರ ಶೀಘ್ರ ಸ್ಪಂದನೆಗೆ ನಾಗೋಡಾ ಗ್ರಾಮಸ್ಥರ ಪರವಾಗಿ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next