Advertisement

ವಿಷ ಸೇವಿಸಿ ಪಿಡಿಓ ಆತ್ಮಹತ್ಯೆ

10:27 AM Dec 22, 2019 | sudhir |

ಲಕ್ಷ್ಮೇಶ್ವರ(ಗದಗ): ವಿಷ ಸೇವಿಸಿ ಪಿಡಿಓ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಇಟ್ಟಂಗಿ ಯಲ್ಲಾಪುರದಲ್ಲಿ ಶನಿವಾರ ನಡೆದಿದೆ.

Advertisement

ಮೃತನನ್ನು ಸೂರಣಗಿ ಪಿಡಿಓ ರವಿ ಸೋಮನಕಟ್ಟಿ(35) ಎಂದು ಗುರುತಿಸಲಾಗಿದೆ. ಇಟ್ಟಂಗಿ ಯಲ್ಲಾಪುರದ ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರವಿ ಸೋಮನಕಟ್ಟಿ ಸೂರಣಗಿ ಗ್ರಾ.ಪಂ. ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದು, ಒಂದು ತಿಂಗಳ ಹಿಂದೆಯಷ್ಟೇ ಮಾಗಡಿ ಗ್ರಾ.ಪಂ. ನಿಂದ ವರ್ಗಾವಣೆಗೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ.

ಸ್ಥಳಕ್ಕೆ ಲಕ್ಷ್ಮೇಶ್ವರ ಠಾಣೆ ಪಿಎಸ್‌ಐ ಶಿವಯೋಗಿ ಲೋಹಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next