ಯಳಂದೂರು: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಗೆದುಗ್ಗಹಟ್ಟಿ ಗ್ರಾಪಂ ಪಿಡಿಒ ಯಾವುದೇ ಮಾಹಿತಿ ನೀಡದೆಗೈರು ಹಾಜರಾಗಿದ್ದಾರೆ ಎಂದು ಆರೋಪಿಸಿ ಗ್ರಾಪಂಅಧ್ಯಕ್ಷರು ಹಾಗೂ ಸದಸ್ಯರು ಗ್ರಾಪಂ ಕಚೇರಿ ಹೊರಗೆನಿಂತು ಬುಧವಾರ ಪ್ರತಿಭಟನೆ ನಡೆಸಿದರು.
ರಾಷ್ಟ್ರ ನಾಯಕರ ಜಯಂತಿಗೆ ಗೈರಾಗುವ ಮುನ್ನಸಂಬಂಧಪಟ್ಟ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರಹಾಗೂ ಇಒಗೆ ಅಥವಾ ಸಂಬಂಧಪಟ್ಟ ಮೇಲಧಿಕಾರಿಗಳಿಗೆಮಾಹಿತಿ ನೀಡಬೇಕು. ಆದರೆ ಇವರು ಹೀಗೆ ಮಾಡಿಲ್ಲ.ಇದು ರಾಷ್ಟ್ರ ನಾಯಕರಿಗೆ ಮಾಡಿದ ಅವಮಾನ ಎಂದು ಆರೋಪಿಸಿದರು.
ಅಧ್ಯಕ್ಷೆ ವಿಶಾಲಾಕ್ಷಿ ಮಾತನಾಡಿ, ಗ್ರಾಪಂಗೆ ಪಿಡಿಒಕಚೇರಿ ಮುಖ್ಯ ಅಧಿಕಾರಿ ಆಗಿರುತ್ತಾರೆ. ಇವರ ನೇತೃತ್ವದಲ್ಲಿಇಂತಹ ರಾಷ್ಟ್ರನಾಯಕರ ಜಯಂತಿ ಆಚರಣೆಯಾಗಬೇಕು.ಜಯಂ ತಿಗೆ ಬುಧವಾರ ಬೆಳಗ್ಗೆ 9 ಗಂಟೆಗೆ ಸಮಯನಿಗದಿಯಾಗಿತ್ತು. ತಾನು ಹಾಗೂ ಸದಸ್ಯರು ನಿಗಧಿತಸಮಯಕ್ಕೆ ಕಚೇರಿಗೆ ಬಂದಿ ದ್ದೆವು.
ಆದರೆ 10ಗಂಟೆಯಾದರೂ ಪಿಡಿಒ ಶಾರದಾದೇವಿ ಕಚೇ ರಿಗೆಬರಲಿಲ್ಲ. ಈ ಬಗ್ಗೆ ತನಗೆ ಯಾವುದೇ ಮಾಹಿತಿ ನೀಡಿಲ್ಲ.ಹೀಗಾಗಿ ಗ್ರಾಪಂ ಇತರೇ ಸಿಬ್ಬಂದಿಯೊಂದಿಗೆ ಜಯಂತಿಆಚರಣೆ ಮಾಡಿದ್ದೇವೆ. ನಂತರ ಕಚೇರಿ ಹೊರ ಬಂದುಪಿಡಿಒ ವಿರುದ್ಧ ಪ್ರತಿಭಟನೆ ನಡೆಸಿದ್ದೇವೆ. ಈ ಬಗ್ಗೆ ಉನ್ನತಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿ ದರು.ಉಪಾಧ್ಯಕ್ಷೆ ಸಾವಿತ್ರಿರಾಮು, ಸದಸ್ಯರಾದ ಎನ್. ಪ್ರಕಾಶ್,ಸೋಮಣ್ಣ, ಮಂಜುನಾಥ್, ಚಿಕ್ಕತಾಯಮ್ಮ, ಜವರ ಶೆಟ್ಟಿ,ರೂಪಾ, ಕೆಂಪರಾಜು, ಕುಮಾರನಾಯಕ, ಮುಖಂಡರಾದ ಶಿವಣ್ಣ, ರಾಮು, ಕಿಟ್ಟಿ, ಮಣಿ, ದುಂಡಯ್ಯ ಇದ್ದರು.
ಮಾಹಿತಿ ಪಡೆಯುವೆ: ಅಂಬೇಡ್ಕರ್ ಜಯಂತಿಗೆ ಪಿಡಿಒಬಾರದಿರುವ ಬಗ್ಗೆ ಸದಸ್ಯರು ಹಾಗೂ ಸಾರ್ವಜನಿಕರುದೂರು ನೀಡಿದ್ದಾರೆ. ಅವರು ಗೈರಾಗುತ್ತಿರುವ ಬಗ್ಗೆ ತನಗೂಮಾಹಿತಿ ನೀಡಿಲ್ಲ. ಈ ಬಗ್ಗೆ ಸಂಬಂಧಪಟ್ಟ ಪಿಡಿಒಯಿಂದಮಾಹಿತಿ ಪಡೆದು ಕ್ರಮ ವಹಿಸುತ್ತೇನೆಂದು ಯಳಂದರುಇಒ ಉಮೇಶ್ ತಿಳಿಸಿದ್ದಾರೆ.