Advertisement

ಜಯ್ ಶಾ ಹೇಳಿಕೆ ಬೆನ್ನಲ್ಲೇ ತುರ್ತು ಸಭೆ ಕರೆಯುವಂತೆ ಪಾಕ್ ಮನವಿ

04:12 PM Oct 19, 2022 | Team Udayavani |

ಲಾಹೋರ್: ಮುಂದಿನ ವರ್ಷ ನಡೆಯಲಿರುವ ಏಷ್ಯಾ ಕಪ್‌ಗಾಗಿ ಭಾರತ ತಂಡವು ಪಾಕಿಸ್ಥಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಯ ಹಿನ್ನೆಲೆಯಲ್ಲಿ ‘ನಿರಾಶೆಗೊಂಡ’ ಪಾಕಿಸ್ಥಾನ ಕ್ರಿಕೆಟ್ ಮಂಡಳಿಯು ಬುಧವಾರ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ತುರ್ತು ಸಭೆ ಕರೆಯುವಂತೆ ಮನವಿ ಮಾಡಿದೆ.

Advertisement

ಭಾರತವು ತಟಸ್ಥ ಸ್ಥಳದಲ್ಲಿ ಕಾಂಟಿನೆಂಟಲ್ ಪಂದ್ಯಾವಳಿಯನ್ನು ಆಡಲು ಬಯಸುತ್ತದೆ ಆದರೆ ಪಾಕಿಸ್ಥಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂಬ ಶಾ ಅವರ ಹೇಳಿಕೆಗೆ ತನ್ನ ಮೊದಲ ಅಧಿಕೃತ ಪ್ರತಿಕ್ರಿಯೆಯಲ್ಲಿ, ಪಿಸಿಬಿ “ಇಂತಹ ಹೇಳಿಕೆಗಳು ಏಷ್ಯನ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಸಮುದಾಯಗಳನ್ನು ಒಡೆಯಬಹುದು ಮತ್ತು 2023 ವಿಶ್ವಕಪ್ ಗಾಗಿ ಪಾಕಿಸ್ಥಾನದ ಭಾರತ ಭೇಟಿಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ.

ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಮುನ್ನ ನಡೆಯಲಿರುವ ಏಷ್ಯಾ ಕಪ್‌ನ ಆತಿಥ್ಯವನ್ನು ಪಾಕಿಸ್ಥಾನಕ್ಕೆ ನೀಡಲಾಗಿದೆ. ಕಳೆದ ತಿಂಗಳು ನಡೆದ ಟಿ20 ಏಷ್ಯಾಕಪ್ ಅನ್ನು ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಶ್ರೀಲಂಕಾದಿಂದ ಯುಎಇಗೆ ಸ್ಥಳಾಂತರಿಸಬೇಕಾಗಿತ್ತು.

ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಭಾರತ ಮತ್ತು ಪಾಕಿಸ್ಥಾನವು ಏಷ್ಯನ್ ಮತ್ತು ಐಸಿಸಿ ಈವೆಂಟ್‌ಗಳಲ್ಲಿ ಮಾತ್ರ ಪರಸ್ಪರ ಆಡುತ್ತವೆ. ಭಾರತ ಕೊನೆಯ ಬಾರಿಗೆ 2008 ರಲ್ಲಿ ಪಾಕಿಸ್ಥಾನಕ್ಕೆ ಪ್ರವಾಸ ಮಾಡಿದ್ದರೆ, 2012-13 ರಲ್ಲಿ ಭಾರತದಲ್ಲಿ ಪಾಕಿಸ್ಥಾನದ ಕೊನೆಯ ಸರಣಿಗಳು ನಡೆದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next